ಎಸ್ಟಿ ಪ್ರಮಾಣ ಪತ್ರಕ್ಕಾಗಿ ಸದನದಲ್ಲಿ ಧ್ವನಿ ಎತ್ತುವಂತೆ ನೂತನ ಯುವ ಸಂಸದರಿಗೆ ಸಮಾಜ ಮುಖಂಡರ ಮನವಿ
ಬೀದರ್ ಜೂ.20ಃ ಬೀದರ್ ಜಿಲ್ಲಾ ಟೋಕರೆ ಕೋಳಿ ಸಮಾಜದ ಕಾಂಗ್ರೇಸ್ ಮುಖಂಡರಿಂದ ಬೀದರ್ ಲೋಕಸಭಾ ಮತಕ್ಷೇತ್ರದ ನೂತನ ಯುವ ಸಂಸದರಾದ ಸಾಗರ ಈಶ್ವರ್ ಖಂಡ್ರೆಯವರಿಗೆ ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಅವರಿಗೆ ಮನವಿ ಅರ್ಪಿಸಿ, ಕೋಲಿ-ಕಬ್ಬಲಿಗ ಸೇರಿದಂತೆ 39 ಪರ್ಯಾಯ ಪದಗಳಿಂದ ಕರೆಯಲ್ಪಡುವ ಟೋಕರೆ ಕೋಳಿ ಸಮುದಾಯದವರಿಗೆ ಎಸ್ಟಿ ಪ್ರಮಾಣ ಪತ್ರ ನೀಡುವಂತೆ ಲೋಕಸಭಾ ಸದನದಲ್ಲಿ ಪ್ರಶ್ನಿಸಿ ನ್ಯಾಯ ಸಿಗುವಂತೆ ಮಾಡಬೇಕೆಂದು ನೂತನ ಯುವ ಸಂಸದರಿಗೆ ಕೊರಲಾಯಿತು.
ರಾಜ್ಯದಲ್ಲಿ ಅಂದಾಜು 60 ಲಕ್ಷ ಜನಸಂಖ್ಯೆ ಇದ್ದು, ಬೀದರ ಜಿಲ್ಲೆಯಲ್ಲಿ ಸಮಾಜದ ಜನಸಂಖ್ಯೆ 2 ಲಕ್ಷ ಕಲಬುರಗಿಯಲ್ಲಿ ಸುಮಾರು 4 ಲಕ್ಷ ಇರುವುದು ಆದರೇ ಸಮುದಾಯದವರಿಗೆ 39 ಪರ್ಯಾಯ ಪದಗಳಿಂದ ಕರೆಯುವುದರಿಂದಾಗಿ ಎಸ್ಟಿ ಪ್ರಮಾಣ ಪತ್ರ ದೊರಕುತ್ತಿಲ್ಲ. ಎಲ್ಲಾ ಪರ್ಯಾಯ ಪದಗಳಿಂದ ಕರೆಯಲ್ಪಡುವ ಟೋಕರೆ ಕೋಳಿ ಕಬ್ಬಲಿಗ ಸಮಾಜದ ಸರ್ವರಿಗೂ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೂರಕ್ಕೆ ನೂರು ಪ್ರತಿಶತ ಕೊಡಲೇಬೇಕು. ಕೊಡುತ್ತಿಲ್ಲ ಇದಕ್ಕೆ ಸರ್ಕಾರದ ತಾಂತ್ರಿಕ ತೊಡಕು ಕಾನೂನಿನ ಶಬ್ದಗಳ ಬಳಕೆಯ ಅಡತಡೆಯುಂಟಾಗಿರುವುದೇ ಪ್ರಮುಖ ಹಿನ್ನಡೇಯಾಗಿದೆ. ಅನೇಕ ದಶಕಗಳಿಂದಲೂ ನಮ್ಮ ಸಮಾಜಕ್ಕೆ ರಾಜ್ಯದಾದ್ಯಂತ ಪರ್ಯಾಯ ಪದಗಳಿಂದ ಕರೆಯುತ್ತಿದ್ದು, ಇವರೆಲ್ಲರೂ ಎಸ್ಟಿ ಎಂದು ಸರ್ಕಾರ ಪರಿಗಣಿಸಿ ನ್ಯಾಯಯುತವಾಗಿ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಲೇಬೇಕಾಗಿತ್ತು, ಈ ಸಂಬಂಧಪಟ್ಟ ಆದೇಶದಲ್ಲಿ ಪರ್ಯಾಯ ಪದಗಳು ಇಲ್ಲದ್ದೇ ಇರುವುದರಿಂದ ಕೊಡಲಾಗುತ್ತಿಲ್ಲ ಎಂಬುವುದು ಸರ್ಕಾರದ ಹೇಳಿಕೆ.
39 ಪರ್ಯಾಯ ಪದಗಳಿಗೆ ಎಸ್ಟಿ ನೀಡಬೇಕಾದರೇ ಕೇಂದ್ರ ಸರಕಾರದ ಆದೇಶ ಅತ್ಯಂತ ಮುಖ್ಯವಾಗಿರುತ್ತದೆ ಅದಕ್ಕಾಗಿ ಲೋಕಸಭಾ ಸದನದಲ್ಲಿ ಚರ್ಚೆಗೆ ಬಂದು ಮಸುದೆ ಅನುಮೋದನೆಗೊಂಡು ಅದೇ ಆದೇಶವಾಗಿ ರಾಜ್ಯಗಳಿಗೆ ಜಾರಿಗಾಗಿ ಕೇಂದ್ರ ಕಳಿಸಿದಾಗ ಮಾತ್ರ ಕರ್ನಾಟಕ ರಾಜ್ಯದ ನಮ್ಮ ಸಮಾಜದ ಸರ್ವರೀಗೂ ಎಸ್ಟಿ ಪ್ರಮಾಣ ಪತ್ರ ದೊರಕಲು ಸಾಧ್ಯ ಇದಕ್ಕಾಗಿ ತಾವೂಗಳು ಶತ ಪ್ರಯತ್ನ ಪಡಬೇಕೆಂದು ನೂತನ ಯುವ ಸಂಸದ ಸಾಗರ ಈಶ್ವರ್ ಖಂಡ್ರೆಯವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಮನವಿ ಮಾಡಲಾಯಿತು.
ಸಮಾಜದ ಪ್ರಮುಖರಾದ ಮೀನುಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಮಾಲಾ ಬಿ.ನಾರಾಯಣರಾವ್, ಶಾಂತಪ್ಪ ಜಿ.ಪಾಟೀಲ್, ನಾರಾಯಣ ಭಂಗಿ, ಸುನೀಲ ಖಾಸೆಂಪೂರ್, ಮಾರುತಿ ಮಾಸ್ಟರ್, ಅಪ್ಪಾರಾವ್ ಬ್ಯಾಲಹಳ್ಳಿ, ಗೌತಮ ಬಿ.ನಾರಾಯಣ, ಶಿವರಾಜ ಜಾಗಿರದಾರ್, ವಿಶ್ವನಾಥ ಬಳಕಟ್ಟೆ, ಅರವಿಂದ ಜಮಾದಾರ್, ರಮೇಶ ಖಾಶೆಂಪೂರ್, ಶಂಕರ ಜಮಾದಾರ್ ಸೇರಿದಂತೆ ಅನೇಕರು ಇದ್ದರು.