ದೈಹಿಕ ಶಿಕ್ಷಣ ಶಿಕ್ಷಕರ ಬೇಡಿಕೆ ಈಡೇರಿಕೆಗೆ ಒತ್ತಾಯ
ಬೀದರ:ಜೂ.20:ದೈಹಿಕ ಶಿಕ್ಷಣ ಶಿಕ್ಷಕರ ಸುಮಾರು 17 ವರ್ಷಗಳಿಂದ ಪ್ರಮುಖ ಬೇಡಿಕೆಯಾಗಿರುವ ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸಿ ಮುಖ್ಯ ಶಿಕ್ಷಕರ ಮುಂಬಡ್ತಿ ಸೇರಿದಂತೆ ಸಹಶಿಕ್ಷಕರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವಂತೆ ಮಾನ್ಯ ಉಪನಿರ್ದೇಶಕರ ಮುಖಾಂತರ ಮಧು.ಎಸ್. ಬಂಗಾರಪ್ಪ ರವರು ಗೌರವಾನ್ವಿತ ಶಿಕ್ಷಣ ಸಚಿವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು ರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಬೇಡಿಕೆಗಳು ಜುಲೈ 2024ರ ಅಂತ್ಯದ ಒಳಗಾಗಿ ಈಡೇರದೆ ವಿಳಂಬವಾದಲ್ಲಿ ನಮ್ಮ ಬೇಡಿಕೆಗಳು ಈಡೇರುವತನಕ ಪ್ರಸ್ತುತ ವರ್ಷದಿಂದ ಇಲಾಖೆಯ ಕ್ರೀಡಾಕೂಟಗಳನ್ನು ಬಹಿಷ್ಕರಿಸುವ ಮೂಲಕ ಅನಿರ್ದಿಷ್ಟಾವಧಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲು ಒಮ್ಮತದಿಂದ ಇಡೀ ರಾಜ್ಯಾದ್ಯಂತ ದೈಹಿಕ ಶಿಕ್ಷಣ ಶಿಕ್ಷಕರು ಒಮ್ಮತದಿಂದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಗೌರವಾನ್ವಿತರಾದ ತಾವುಗಳು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಮಾನ್ಯ ಉಪ ನಿರ್ದೇಶಕರ ಪರವಾಗಿ ಗುಂಡಪ್ಪ ಹುಡುಗೆ ಪ್ರಭಾರಿ ಶಿಕ್ಷಣಾಧಿಕಾರಿಗಳು ಉಪ ನಿರ್ದೇಶಕರ ಕಚೇರಿ ಹಾಗೂ ರೋಹಿದಾಸ್ ರಾಥೋಡ್ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳು ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಜಿಲ್ಲಾ ಶಾಖೆ ಬೀದರ್ ನ ಅಧ್ಯಕ್ಷರಾದ ಶಿವಕುಮಾರ ಸದಾಪುಲೆ, ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ತಾಂದಳೆ, ಉಪಾಧ್ಯಕ್ಷರಾದ ವೀರಶೆಟ್ಟಿ ಯಲಮುರುಗೆ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೀದರ್ ತಾಲೂಕ ಅಧ್ಯಕ್ಷರು ಹಾಗೂ ನಮ್ಮ ಸಂಘದ ರಾಜ್ಯ ಪರಿಷತ್ ಸದಸ್ಯರು ಆದ ರಾಜು ಸಾಗರ್, ಬೀದರ ತಾಲೂಕ ಅಧ್ಯಕ್ಷರಾದ ರಾಬರ್ಟ್ ಡೇವಿಡ್, ಪ್ರಧಾನ ಕಾರ್ಯದರ್ಶಿಗಳಾದ ಓಂಕಾರ ಪಾಟೀಲ್, ಕ್ರೀಡಾ ಕಾರ್ಯದರ್ಶಿಗಳಾದ ದತ್ತಾತ್ರೇ ರೆಡ್ಡಿ, ಹಾಜಿ ಪಾಷಾ, ಸುಭಾಷ್ ನಾಯಕ್, ಸಂಘಟನಾ ಕಾರ್ಯದರ್ಶಿಗಳಾದ ದಿಲೀಪ್ ಪಾಟೀಲ್, ಶಿವಲಿಂಗಯ್ಯ ಸ್ವಾಮಿ ಶ್ರೀಮತಿ ಗೀತಾ ನಾಟೇಕರ್ ಜಿಲ್ಲಾ ಮಹಿಳಾ ಪ್ರತಿನಿಧಿ, ದಶರಥ ಉಡುಮ್ನಳ್ಳಿ ಹಾಗೂ ಇನ್ನುಳಿದ ದೈಹಿಕ ಶಿಕ್ಷಣ ಶಿಕ್ಷಕರು ಉಪಸ್ಥಿತರಿದ್ದರು.