ಸಧೃಡ ಆರೋಗ್ಯಕ್ಕೆ ಯೋಗ ಸಹಾಯಕಾರಿ
ಕರಜಗಿ:ಜೂ.20:ಮನುಷ್ಯನ ಸದೃಢ ಆರೋಗ್ಯ ಕಾಪಾಡುವಲ್ಲಿ ಯೋಗ ಮಹತ್ವದ ಪಾತ್ರ ವಹಿಸುತ್ತದೆ’ ಎಂದು ಯೋಗ ಶಿಕ್ಷಕಿ ಪ್ರಭಾವತಿ ಎಸ್ ಮೇತ್ರಿ ಹೇಳಿದರು
ಅವರು ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಕಲಬುರಗಿ ಆಯುಷ್ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಕಲಬುರಗಿ ಹಾಗೂ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಆಯುಷ್ಮಾನ ಆರೋಗ್ಯ ಮಂದಿರ ಬಳೂರ್ಗಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಯೋಗೋತ್ಸವ 2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂದಿನ ದಿನಮಾನಗಳಲ್ಲಿ ಯೋಗ ಮನುಷ್ಯನ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಲು ಬಹಳ ಮುಖ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಯೋಗವನ್ನು ಕ್ರಮಬದ್ಧವಾಗಿ ಮಾಡಬೇಕು.ಇಂದಿನ ಆಧುನಿಕ ಯುಗದಲ್ಲಿ ಅನೇಕರು ಹಲವು ಒತ್ತಡಗಳ ಮದ್ಯೆ ಕಾರ್ಯನಿರ್ವಹಿಸುತ್ತಿದ್ದಾರೆ. ಯೋಗದಿಂದ ಮಾತ್ರ ಒತ್ತಡದಿಂದ ಹೊರ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು
ಬಳೂರ್ಗಿ ಆಯುಷ್ ಆಸ್ಪತ್ರೆ ವೈದ್ಯಾಧಿಕಾರಿ ಡಾ ಶ್ರೀಶೈಲ ಪಾಟೀಲ ಮಾತನಾಡಿ’ಒತ್ತಡ ನಿವಾರಣೆ ಮತ್ತು ದೈನಂದಿನ ಜೀವನ ಶೈಲಿಯನ್ನು ಸುಧಾರಿಸಲು ಯೋಗದಿಂದ ಮಾತ್ರ ಸಾಧ್ಯ.
ಯೋಗದಿಂದ ಮನಸ್ಸಿನ ನಿಗ್ರಹವೂ ಆಗಲಿದೆ. ಯೋಗ ಮಾಡುವುದರಲ್ಲಿ ಶ್ರದ್ಧೆ ಮತ್ತು ನಿರಂತರತೆ ಇರ­ಬೇಕು.ಯೋಗ ಪದ್ಧತಿಯು ಅಂತರ ರಾಷ್ಟ್ರೀಯ ಖ್ಯಾತಿ ಪಡೆದಿದ್ದು, ಯೋಗಾಸನಗಳನ್ನು ಮಾಡುವುದರಿಂದ ಮನಸ್ಸಿಗೆ ಉಲ್ಲಾಸವಾಗುತ್ತದೆ.
ಏಕಾಗ್ರತೆ ಮೂಡುತ್ತದೆ. ಆಲಸ್ಯ, ಜಡತ್ವ ಮರೆಯಾಗುತ್ತದೆ. ಸಾಧನೆಗೆ ಪ್ರೇರಣೆ ನೀಡುತ್ತದೆ. ಶಾಲೆ, ಕಾಲೇಜುಗಳಲ್ಲಿ, ವಿದ್ಯಾರ್ಥಿಗಳು ಯೋಗ ಮಾಡುವುದನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ಪ್ರತಿಭಾ ಮಹಿಂದ್ರಕರ ಡಾ ಶ್ರೀಶೈಲ ಪಾಟೀಲ ಪ್ರೌಢಶಾಲೆ ಮುಖ್ಯ ಗುರು ಸುನಿತಾ ವಟಕರ ಚನ್ನನಗೌಡ ಮಾಲಿಪಾಟೀಲ ಶ್ರೀಶೈಲ ಸನದಿ ಶ್ರೀಶೈಲ ಭಾವಿಕಟ್ಟಿ ದತ್ತಪ್ಪ ಡೊಂಬಾಳೆ ಭಾಗೀರಥಿ ಬಿರಾದಾರ ಶೈಲಾ ಎಚ್ ಎಸ್ ಸಂಗೀತಾ, ಸುಮಲತಾ ಕುಂಬಾರ ಕಲಾವತಿ ಕೊಳಲಗಿ ಸೇರಿದಂತೆ ವಿಧ್ಯಾರ್ಥಿಗಳಿದ್ದರು