ಪಿಯು ಕಾಲೇಜು ಮಂಜೂರು, ಕೋಣೆಗಳೇ ಇಲ್ಲ :ಮಾಡಿಯಾಳ ಅಪೂರ್ಣ ಶಾಲಾ ಕಟ್ಟಡ, ಅತಂತ್ರ ಸ್ಥಿತಿಯಲ್ಲಿ ವಿದ್ಯಾರ್ಥಿ
ಆಳಂದ:ಜೂ.20: ಮಾಡಿಯಾಳ ಗ್ರಾಮದ ಬಹು ದಿನಗಳ ಬೇಡಿಕೆಯಾದ ಪ್ರೌಢ ಶಾಲೆ ಮತ್ತು ಪಿಯು ಕಾಲೇಜು ಮಂಜೂರಾತಿ ಆಗಿದೆ. ಆದರೆ ತರಗತಿ ನಡೆಸಲು ಕೋಣೆಗಳೇ ಇಲ್ಲ. ಇದರಿಂದ ತರಗತಿಗಳನ್ನು ಹೇಗೆ ನಡೆಸಲಾಗುತ್ತಿದೆ ಎಂಬ ಪ್ರಶ್ನೆ ವಿದ್ಯಾರ್ಥಿಗಳ ಪಾಲಕರಿಗೆ ಕಾಡುತ್ತಿದೆ.
ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆ ಮತ್ತು ಪಿಯು ಕಾಲೇಜು ಇಲ್ಲದೆ ಹಲವಾರು ಬಡ ಕುಟುಂಬದ ಬಾಲಕ, ಬಾಲಕೀಯರು ಅರ್ಧದಲ್ಲಿಯೇ ತಮ್ಮ ಶಿಕ್ಷಣವನ್ನು ಮೊಟುಕುಗೊಳಿಸಿದ್ದಾರೆ. ಅಲ್ಲದೆ ಗ್ರಾಮದಲ್ಲಿ ಎರಡು ಖಾಸಗಿ ಪ್ರೌಢಶಾಲೆಗಳಿದ್ದು ಪ್ರತಿವರ್ಷ ಇನ್ನೂರಕ್ಕೂ ಹೆಚ್ಚೂ ವಿದ್ಯಾರ್ಥಿಗಳು ತೇರ್ಗಡೆಯಾಗಿ ಆಳಂದ, ಕಲಬುರಗಿ ಸೇರಿದಂತೆ ಬೇರೆ ಬೇರೆ ಕಡೆ ತೆರಳಿ ಶಿಕ್ಷಣ ಪಡೆಯಲು ತಪ್ಪಿಸುವುದಕ್ಕಾಗಿ ಪಿಯು ಕಾಲೇಜು ಮಂಜರಾಗಿದಾರು ಕಟ್ಟಡ ಸೇರಿ ಸೌಲಭ್ಯಗಳು ಒದಗಿಸದೇ ಒರುವುದು ಸಮಸ್ಯೆ ಕಾರಣವಾಗಿದೆ.
ಸದ್ಯ ಗ್ರಾಮದಲ್ಲಿಯೇ ಪ್ರೌಢಶಾಲೆ ಮತ್ತು ಪಿಯು ಕಾಲೇಜು ಆರಂಭವಾಗಿದ್ದರಿಂದ ಗ್ರಾಮಸ್ಥರು ಒಂದಡೆ ಸಂತಸ ವ್ಯಕ್ತಪಡಿಸಿ ನಮ್ಮ ಗ್ರಾಮದ ವಿದ್ಯಾರ್ಥಿನೀಯರು ನಮ್ಮ ಗ್ರಾಮದಲ್ಲಿಯೇ ಶಿಕ್ಷಣ ಪಡೆಯುವಂತೆ ಮಾಡಿದ ಶಾಸಕ ಬಿ.ಆರ್. ಪಾಟೀಲ್‍ರ ಕಾರ್ಯವೂ ಸಹ ಶ್ಲಾಘೀಸಿದ್ದಾರೆ. ಆದರೆ ಕಟ್ಟಡ ಕೊರತೆಯಿಂದಾಗಿ ಪರದಾಡುವಂತೆ ಮಾಡತೊಡಗಿದೆ.
ಮತ್ತೊಂದಡೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‍ಕೆಜಿಯಿಂದ 9ನೇ ತರಗತಿಗಳನ್ನು ನಡೆಸಲಾಗುತ್ತಿದೆ. 280 ವಿದ್ಯಾರ್ಥೀಗಳು ಈ ಶಾಲೆಯಲ್ಲಿ ವಿದ್ಯಾಭ್ಯಸ ಮಾಡುತ್ತಿದ್ದಾರೆ. ಇಲ್ಲಿ ಒಂದೆರೆಡು ಕೋಣೆಗಳು ಬಿಟ್ಟರೆ ಸಿಬ್ಬಂದಿಗಳ ಕೋಣೆ ಸಹಿತ ಬಾಕಿ ಕೋಣೆಗಳು ಶಿಥಲಗೊಂಡು ಸೋರುತ್ತಿವೆ. ಇವುಗಳಿಗೆ ಕಿಟಕಿ, ಬಾಗಿಲು ಇಲ್ಲದೆ ಶೀಥಿಲಾವಸ್ಥೆಯಲ್ಲಿವೆ ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ.
ಪ್ರತಿವರ್ಷ ಮಳೆಗಾಲ ಮಳೆ ಬಂದರೆ ಎಲ್ಲಾ ತರಗತಿಗಳನ್ನು ಒಂದೆ ಕೋಣೆಯಲ್ಲಿ ನಡೆಸಬೇಕು ಇಲ್ಲವಾದರೆ ಎಲ್ಲಾ ತರಗತಿಗಳಿಗೆ ರಜೆ ನೀಡಿ ಮಕ್ಕಳನ್ನು ಮನೆಗೆ ಕಳುಹಿಸಿ ಕೊಡುವ ಸ್ಥಿತಿ ಇಲ್ಲಿನ ಶಾಲಾ ಶಿಕ್ಷಣ ವ್ಯವಸ್ಥೆಯಾಗಿ ಮಾರ್ಪಟ್ಟಿದೆ.
ಹಲವಾರು ಬಾರಿ ಮಳೆ ಬಂದಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೋರುತ್ತಿರುವ ಶಾಲೆಯನ್ನು ವಿಕ್ಷೀಸಿ ಹೊಸ ಕೋಣೆಗಳ ಮಂಜೂರು ಮಾಡಿಸುವುದಾಗಿ ಹೇಳಿ ಈ ಕಡೆ ತಿರುಗಿ ನೋಡಿಲ್ಲ ಎನ್ನುತ್ತಾರೆ ಪಾಲಕರು ದೂರಿದ್ದಾರೆ.
ಸ್ಪಂದನೆ ದೊರೆತಿಲ್ಲ:
ಹಲವಾರು ಬಾರಿ ಸಂಬಂದಪಟ್ಟ ಕ್ಷೇತ್ರ ಶಿಕ್ಷಣಧಿಕಾರಿಗಳಿಗೆ ಸಭೆಗಳಲ್ಲಿ ಶಾಲಾ ಮೂಲಭೂತ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಗಿದೆ.ಆದರೂ ಪರಿಹಾರವಾಗಿಲ್ಲ.
ಅಂಬಾರಾಯ ಶಾಲಾ ಮುಖ್ಯಗುರು.
ಕಟ್ಟಡಕ್ಕೆ ಒತ್ತಾಯ:
ಹಲವು ವರ್ಷಗಳಿಂದ ನಮ್ಮ ಶಾಲೆಯಲ್ಲಿ ಸಮಸ್ಯೆ ಇದೆ. ಬರೀ ಮಳೆಗಾಲ ಬಂದಾಗ ಶಾಲೆಯ ಭೇಟಿ ನೀಡಿ ಸುಳ್ಳು ಭರವಸೆ ನೀಡುವುದೇ ಅಧಿಕಾರಿಗಳ ಚಾಳಿಯಾಗಿದೆ. ಶಾಶ್ವತ ಪರಿಹಾರ ಕಲ್ಪಿಸತ್ತಿಲ್ಲ. ತಮ್ಮ ಮಕ್ಕಳ ಸ್ಥಿತಿ ಹೀಗಾದರೇ ಸುಮ್ನೆ ಇರುವರೇ.
ಕಟ್ಟಡಕ್ಕೆ ಪ್ರಸ್ತಾವನೆ:
ಸದ್ಯೆ 3 ಕೋಣೆಗಳ ಕಟ್ಟಡ ಪ್ರಗತಿಯಲ್ಲಿದೆ. ಇನ್ನೂ ನಾಲ್ಕು ಕೋಣೆಗಳನ್ನು ಮಂಜೂರು ಮಾಡಲು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ ಹಳೆಯ ಕಟ್ಟಡದ ಮೇಲ್ಛಾವಣಿ ತೇರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಗಿದೆ.
ಅಶೋಕ ಚವ್ಹಾಣ್ ಸಿಆರ್‍ಸಿ