ನಾಳೆ  ಬಳ್ಳಾರಿ ಮೇಯರ್ ಉಪ ಮೇಯರ್ ಚುನಾವಣೆ ಆಯ್ಕೆ ಚಂಡು ವರಿಷ್ಟರ ಅಂಗಳದಲ್ಲಿ
* ವೀಕ್ಷಕರ ಸಭೆಯಲ್ಲಿ ಹೈಕಮಾಂಡ ನಿರ್ಧಾರಕ್ಕೆ ಬಿಟ್ಟ ಸದಸ್ಯರು
* ಇಂದು ವೀಕ್ಷಕರು, ಸಂಸದರು, ಶಾಸಕರು ಚರ್ಚಿಸಿ ವರಿಷ್ಟರಿಗೆ ವರದಿ
* ಸಂಜೆ ಜಿಂದಾಲ್ ನಲ್ಲಿ ಸಿಎಂ ಬಳಿಯೂ ಚರ್ಚೆ ಸಾಧ್ಯತೆ
* ನಾಳೆ ಬೆಳಿಗ್ಗೆ ವರಿಷ್ಟರ ಸೂಚನೆಯಂತೆ ಡಿಸಿಸಿ ಅಧ್ಯಕ್ಷರಿಂದ ಹೆಸರು ಪ್ರಕಟ
* ಮುಲ್ಲಂಗಿ ನಂದೀಶ್ , ಕವಿತಾ ಹೊನ್ನಪ್ಪಗೆ ಒಲಿಯಲಿದೆಯಾ ಅದೃಷ್ಟ
ಎನ್.ವೀರಭದ್ರಗೌಡ
ಬಳ್ಳಾರಿ. ಜೂ.20: ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ನಾಳೆ ನಡೆಯಲಿದೆ. ಕಲ್ಬುರ್ಗಿಯ ಪ್ರಾದೇಶಿಕ ಆಯುಕ್ತ ಕೃಷ್ಣಾ ಬಾಜಪೇಯಿ ಅವರು ಚುನಾವಣೆ ನಡೆಸಿಕೊಡಲಿದ್ದಾರೆ.
ಬೆಳಿಗ್ಗೆ 9 ರಿಂದ ನಾಮಪತ್ರಗಳನ್ನು ಎಡಿಸಿಯವರು ಪ್ರಾದೇಶಿಕ ಆಯುಕ್ತರ ಪರವಾಗಿ ನಾಮಪತ್ರ ಸ್ವೀಕರಿಸಲಿದ್ದಾರೆ. ಮಧ್ಯಾಹ್ನ 12 ವರೆಯಿಂದ ಸದಸ್ಯರ ಸಭೆ ನಡೆಸಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲಿದ್ದಾರೆ.
ಪಾಲಿಕೆಯ 39 ಸದಸ್ಯರು ಮತ್ತು ಗ್ರಾಮೀಣ, ನಗರದ ಶಾಸಕರು, ರಾಜ್ಯಸಭೆ ಮತ್ತು ಲೋಕಸಭಾ ಸದಸ್ಯರು, ಹಾಗು ಓರ್ವ ವಿಧಾನ‌ ಪರಿಷತ್ ಸದಸ್ಯರು‌ ಮತದಾನ ಮಾಡುವ  ಅರ್ಹತೆ ಇದೆ.
ಕಾಂಗ್ರೆಸ್ ಪಕ್ಷದ  ಸ್ಪಷ್ಟ ಬಹುಮತ ಹೊಂದಿದೆ. 13 ಸದಸ್ಯ ಬಲದ ಬಿಜೆಪಿಯ ಸದಸ್ಯರೂ  ಸಹ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ‌ 
ಮೇಯರ್ ಸ್ಥಾನ ಸಾಮಾನ್ಯ ಮತ್ತು ಉಪಮೇಯರ್ ಸ್ಥಾನ ಓಬಿಸಿ ಮಹಿಳೆಗೆ ಮೀಸಲಿದೆ.
ಯಾರನ್ನು ಈ ಸ್ಥಾನಗಳಿಗೆ ಆಯ್ಕೆ ಮಾಡಬೇಕು ಎಂಬ ಬಗ್ಗೆ ನಿನ್ನೆ ಸಂಜೆ ಅಲ್ಲಂ ಭವನದಲ್ಲಿ‌ ಪಕ್ಷದ ವೀಕ್ಷರಾದ ಕೆಪಿಸಿಸಿ ಉಪಾಧ್ಯಕ್ಷರಾದ ಎಂ. ನಾರಾಯಣಸ್ವಾಮಿ ಮತ್ತು ಸೂರಜ್ ಎಂ.ಎನ್. ಹೆಗ್ಗಡೆ ಅವರು ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್, ಶಾಸಕರಾದ ಬಿ.ನಾಗೇಂದ್ರ, ಭರತ್ ರೆಡ್ಡಿ, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್ ಮೊದಲಾದವರೊಂದಿಗೆ ಪಾಲಿಕೆ ಸದಸ್ಯರ ಸಭೆ ಸಾಮೂಹಿಕವಾಗಿ ನಡೆಸಿ ಆಕಾಂಕ್ಷಿಗಳಾರು ಎಂದು ಕೇಳಿದ್ದಾರೆ. ಪಿ.ಗಾದೆಪ್ಪ, ಮುಲ್ಲಂಗಿ‌ ನಂದೀಶ್, 
ಎಂ.ಪ್ರಭಂಜನ್ ಕುಮಾರ್ ಮತ್ತು ಪೇರಂ ವಿವೇಕ್
ತಮಗೆ ಅವಕಾಶ ನೀಡಿ ಎಂದು ಕೇಳಿದ್ದಾರೆ.
ನಂತರ ಸದಸ್ಯರ ಅಭಿಪ್ರಾಯವನ್ನು ಒನ್ ಟು ಒನ್ ಕೇಳಲಾಗಿದೆಯಂತೆ. ನಂತರ ಎಲ್ಲರೂ ಪಕ್ಷದ ವರಿಷ್ಟರ ತೀರ್ಮಾನಕ್ಕೆ ಬಿಟ್ಟಿದ್ದು ಎಂದು ಹೇಳಿದ್ದಾರಂತೆ.‌
ಇಂದು ಮಧ್ಯಾಹ್ನ ಮತ್ತೆ ಅಲ್ಲಂ ಭವನದಲ್ಲಿ ಸಭೆ ಸೇರಿದ ವೀಕ್ಷಕರು, ಶಾಸಕರು, ಸಂಸದರು, ಮುಖಂಡರು  ಚರ್ಚಿಸಿ ವರಿಷ್ಟರಿಗೆ ವರದಿ ಕಳಿಸಿದ್ದಾರಂತೆ. ಆಯ್ಕೆ ಚಂಡು ಈಗ ವರಿಷ್ಟರ ಅಂಗಳದಲ್ಲಿದೆ.
ಸಂಜೆ ಜಿಂದಾಲ್ ಗೆ ಬರುವ ಸಿಎಂ ಸಿದ್ದರಾಮಯ್ಯ ಅವರ ಬಳಿಯೂ ಚರ್ಚೆ ಆಗುವ ಸಾದ್ಯತೆ ಇದೆ. ನಾಳೆ ಬೆಳಿಗ್ಗೆ ವರಿಷ್ಟರ ಸೂಚನೆಯಂತೆ ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್ ಅವರು ಹೆಸರುಗಳನ್ನು ಪ್ರಕಟಿಸಕಿದ್ದಾರಂತೆ. ನಂತರವೇ ನಾಮಪತ್ರ ಸಲ್ಕಿಸಲಿದ್ದಾರೆ ಸ್ಪರ್ಧಿಗಳು.
ಕಾಂಗ್ರೆಸ್ ಪಕ್ಷ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡಲಿದೆಯಂತೆ.  ಮುಲ್ಲಂಗಿ ನಂದೀಶ್ ಮತ್ತು ಪ್ರಭಂಜನ್ ನಡುವೆ ಪೈಪೋಟಿ ಏರ್ಪಟ್ಟಿದೆ. ಆದರೆ
ನಂದೀಶ್ ಅವರಿಗೆ ಮೊದಲು ಮಾತುಕೊಟ್ಟಿತ್ತು. ರಾಜಕೀಯದಿಂದ ದೂರ ಇದ್ದ ಅವರನ್ನು ಅಂದು ಶಾಸಕ ಸೋಮಶೇಖರ ರೆಡ್ಡಿ ಅವರ ಒಉತ್ರನ ವಿರುದ್ದ ಕಣಕ್ಕಿಳಿಸುವಾಗಲೇ ಮೇಯರ್ ನೀಡುವ ಭರವಶೆಯನ್ನು ಪಕ್ಷದ ಮುಖಂಡರು ನೀಡಿದ್ದರಂತೆ. ಹಾಗಾಗಿ ಅವರಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಉಪ ಮೇಯರ್ ಹಿಂದುಳಿದ ವರ್ಗ ಎ ಗೆ ಮೀಸಲಿದ್ದು. ಈ ಮೀಸಕಾತಿಯಡಿ ಬರುವ ಕುರುಬ ಸಮುದಾಯದ ಸ್ವತಂತ್ರ ಅಭ್ಯರ್ಥಿಗಳಾಗಿ ಆಯ್ಕೆಯಾಗಿ ಕಾಂಗ್ರೆಸ್ ಬೆಂಬಲಿಸಿರುವ. ಅಲ್ಲದೆ ಇಬ್ಬರು ಮುಸ್ಲಿಂನ‌ ಇಬ್ಬರು  ಸದಸ್ಯರಿದ್ದು. ನಂತರ ಮೇಯರ್ ಸ್ಥಾನವೂ ಇದೇ ಮೀಸಲಾತಿ ಇರುವುದರಿಂದ ಮುಸ್ಲಂ ಸದಸ್ಯರು ನಮಗೆ ಉಪ ಮೇಯರ್ ಬೇಡ ಎನ್ನುತ್ತಿರುವ ಕಾರಣ, 17 ವಾರ್ಡಿನಿಂದ ಆಯ್ಕೆಯಾಗಿರುವ  ಕವಿತಾ ಹೊನ್ನಪ್ಪ ಅವರನ್ನು ಆಯ್ಜೆ ಮಾಡುವ ಬಗ್ಗೆ ಸ್ಥಳೀಯ ಮುಖಂಡರೇ ನಿರ್ಧಿರಿಸಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಾರೆ ನಾಳೆ ಇಷ್ಟೊತ್ತಿಗೆ ನೂತನ ಮೇಯರ್ ಆಯ್ಕೆ ಮುಗಿದಿರುತ್ತೆ. ಅದೃಷ್ಟ ಪಕ್ಷದ ವರಿಷ್ಟರಿಂದ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.