ತೈಲ ಬೆಲೆ ಏರಿಕೆ :  ರಾಜ್ಯ ಸರ್ಕಾರದ ವಿರುದ್ಧ ಕೂಡ್ಲಿಗಿಯಲ್ಲಿ ಬಿಜೆಪಿ ಪ್ರತಿಭಟನೆ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ.20 :-  ರಾಜ್ಯದಲ್ಲಿರುವ ಕಾಂಗ್ರೆಸ್  ಸರ್ಕಾರವು ಸಾರ್ವಜನಿಕರ ಹಿತಕಾಪಾಡದೆ ದಿಡೀರ್ ಎಂದು  ಪೆಟ್ರೋಲ್ ಮತ್ತು ಡೀಸೆಲ್ ಧರವನ್ನು ಹೆಚ್ಚಿಗೆ ಮಾಡಿರುವುದನ್ನು ವಿರೋಧಿಸಿ ಕೂಡ್ಲಿಗಿ ಬಿಜೆಪಿ ಮಂಡಲ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಿ ಕೂಡ್ಲಿಗಿ ತಹಸೀಲ್ದಾರ ಮುಖೇನಾ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ತೈಲ  ಬೆಲೆ ಏರಿಕೆ ಇದು ಜನಸಾಮಾನ್ಯರಿಗೆ ತುಂಬಾ ಹೊರೆಯಾಗಿದ್ದು ಆಡಳಿತ ನಡೆಸುವ  ಸರಕಾರವು ತಾವು ತೆಗೆದುಕೊಳ್ಳುವ ನಿರ್ಧಾರ ಸರ್ಕಾರದ ಜನತೆಯ ಮೇಲಿನ ನಿರ್ಲಕ್ಷ್ಯ ಮನೋಭಾವ ತೋರುತ್ತದೆ ತೈಲ ಬೆಲೆ ಏರಿಕೆಯನ್ನು ಮಾಡದೆ ಮೊದಲಿನಂತೆ  ಯಥಾ ಸ್ಥಿತಿ ಕಾಪಾಡಬೇಕು ಎಂದು ಬಿಜೆಪಿ ಪಕ್ಷದ ತಾಲೂಕು ಪದಾಧಿಕಾರಿಗಳು ಮಾತನಾಡಿ ಸರ್ಕಾರದ ತೈಲ ಬೆಲೆ ಕುರಿತಾಗಿ ಸರ್ಕಾರದ ನಿರ್ಧಾರದ ವಿರುದ್ಧ ಇಂದು ಬೆಳಿಗ್ಗೆ ಮಹಾತ್ಮಾ ಗಾಂಧೀಜಿ ಪವಿತ್ರ ಚಿತಾಭಸ್ಮ ರಾಷ್ಟೀಯ ಹುತಾತ್ಮರ ಸ್ಮಾರಕದಿಂದ ತಾಲ್ಲೂಕು ಕಚೇರಿಗೆ ತಲುಪುವ ಸಂದರ್ಭದಲ್ಲಿ ಪ್ರಮುಖ ಬೀದಿ, ವೃತ್ತಗಳಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕು ಬಿಜೆಪಿ ಘಟಕ ಸೇರಿದಂತೆ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.