ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ : ಜಾಗೃತಿ ಅಭಿಯಾನ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.20: ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ (SDMC )ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ ಬಳ್ಳಾರಿ ಮಹಾನಗರದ 36ನೇ ವಾರ್ಡಿನ ಶಾಸ್ತ್ರಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಿಬ್ಬಂದಿ ವರ್ಗ ಮತ್ತು ಎಸ್‌ಡಿಎಂಸಿ ಸಹಯೋಗದೊಂದಿಗೆ *ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೇ ಸೇರಿಸಿ* ಎಂಬ ಜಾಗೃತಿ ಕಾರ್ಯಕ್ರಮವನ್ನು ಕುರಿಹಟ್ಟಿ ಗಣೇಶನಗರ ಶಾಸ್ತ್ರಿ ನಗರದ ಗುಡ್ಡದ ಮೇಲೆ ಮನೆ-ಮನೆಗಳಿಗೆ ಸಂಚರಿಸಿ ಶಾಲೆ ಬಿಟ್ಟ ಮಕ್ಕಳನ್ನು ಸಹ ಶಾಲೆಗೆ ಕರೆತರುವ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಜೆ.ವಿ. ಮಂಜುನಾಥ್ ರವರು ಮಾತನಾಡಿ, ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಯ ಸಂವಿಧಾನಾತ್ಮಕ ಹಕ್ಕು, ಇದು ಇತ್ತೀಚಿನ ದಿನಗಳಲ್ಲಿ ಶಿಕ್ಷಣ ವ್ಯಾಪಾರರೀಕರಣಗೊಂಡಿರುವುದು ವೈಯಕ್ತಿಕವಾಗಿ ನನಗೆ ಬಹಳ ನೋವು ತಂದಿದೆ, ಆದುದರಿಂದ ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ರೀತಿಯ ಮೂಲ ಸೌಕರ್ಯಗಳು ಇರುತ್ತವೆ, ನುರಿತ ಶಿಕ್ಷಕರು, ಶೌಚಾಲಯಗಳ ವ್ಯವಸ್ಥೆ, ಶುದ್ಧ ಕೊಠಡಿಗಳ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಆಟದ ಮೈದಾನ, ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಉಚಿತ ಪಠ್ಯಪುಸ್ತಕಗಳು, ಸಮವಸ್ತ್ರಗಳು, ಬೂಟುಗಳು, ಕಾಲು ಚೀಲಗಳು, ಹಾಲು ಹಣ್ಣು ಮೊಟ್ಟೆ ಊಟ, ವಲಯ ಮಟ್ಟದ ಕ್ರೀಡೆಗಳು, ಪ್ರತಿಭಾ ಕಾರಂಜಿಯ ಸ್ಪರ್ಧೆಗಳು, ಇಂಗ್ಲೀಷ್ ವಿಷಯದ ಕಲಿಕೆ, ಹೀಗೆ ಅನೇಕವುಗಳು ಒಬ್ಬ ವಿದ್ಯಾರ್ಥಿಯು ಉತ್ತಮ ಪ್ರಜೆಯಾಗಿ ಹೊರಹೊಮ್ಮಲು ಬೇಕಾದ ಎಲ್ಲಾ ಸೌಲಭ್ಯಗಳನ್ನು ಕರ್ನಾಟಕ ರಾಜ್ಯದ ಘನ ಸರ್ಕಾರವು ಸರ್ಕಾರಿ ಶಾಲೆಗಳ ಮುಖಾಂತರ ಉಚಿತವಾಗಿ ನೀಡುತ್ತಿದೆ, ಆದುದರಿಂದ ತಾವುಗಳು ತಮ್ಮ ಮಕ್ಕಳನ್ನು ಹಾಗೂ ಅಕ್ಕಪಕ್ಕದ ಮನೆಯವರ ಮಕ್ಕಳನ್ನು ಸಹ ಸರ್ಕಾರಿ ಶಾಲೆಗಳಿಗೇ ಸೇರಿಸಬೇಕು ಎಂದು ಜಾಗೃತಿ ಮೂಡಿಸುವುದರ ಮೂಲಕ ಪೋಷಕರಲ್ಲಿ ಮನವಿ ಮಾಡಿಕೊಂಡರು. ಹಾಗೂ ಶಾಲೆಯ ಶಿಕ್ಷಕಿಯಾದ ದುರ್ಗಮ್ಮ ರವರು ಮಾತನಾಡಿ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ವಿಷಯವಾರು ಕಲಿಕೆಯ ಬಗ್ಗೆ ಸವಿವರವಾಗಿ ಪೋಷಕರ ಗಮನ ಸೆಳೆದರು.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಲಕ್ಷ್ಮಣ ಎಸ್ ಭಂಡಾರಿ, ಪದಾಧಿಕಾರಿಗಳಾದ ಈಶ್ವರಗುಡಿ ವೆಂಕಟೇಶ್ ಮೆಡಿಕಲ್ ಸ್ಟೋರ್ ಪ್ರಕಾಶ್ ಸತ್ಯನಾರಾಯಣ ದೇವಿ ನಗರ ವೆಂಕಟೇಶ್, ಹಾಗೂ ಶಾಸ್ತ್ರಿ ನಗರದ ಶಾಲೆಯ ಶಿಕ್ಷಕ ಸಿಬ್ಬಂದಿ ವರ್ಗದವರಾದ, ಮುಖ್ಯ ಗುರುಗಳಾದ ಶ್ರೀ ಬಸವರಾಜ್, ಮಿಂಚೇರಿ ರಾಜಶೇಖರ್ ,ಇಂದಿರಾ ದುರ್ಗಮ್ಮ, ಮುಂತಾದ ಪೋಷಕರು ಸಹ ಉಪಸ್ಥಿತರಿದ್ದರು.
One attachment • Scanned by Gmail