ಸರಕಾರ ಕುದುರೆ ಮುಖ ಕಂಪನಿಗೆ ಗಣಿಗೆ ಪರವಾನಿಗೆ ನೀಡಿರುವುದು ಯಾವ ನ್ಯಾಯ ?
ಸಂಜೆವಾಣಿ ವಾರ್ತೆ
ಸಂಡೂರು :ಜು:20  ಗ್ರಾಮದ 4 ದಿಕ್ಕುಗಳಲ್ಲಿ ಈಗಾಗಲೇ ಗಣಿ ಗಾರಿಕೆ ನಡೆಯುತ್ತಿದೆ. ಪಶ್ಚಿಮ ದಿಕ್ಕಿನಲ್ಲಿ ದೇವದಾರಿ ಬಿಟ್ಟು ದೇವದಾರಿ ಬೆಟ್ಟ ಮಾತ್ರ ಉಳಿದಿದೆ. ಅರಣ್ಯ ನಾಶದಿಂದ ಕಳೆದ ಬೆಸಿಗೆಯಲ್ಲಿ ದಾಖಲೆ ತಾಪಮಾನ ಅನುಭವಿಸಿದ್ದೇವೆ. ಇದೀಗ ಮತ್ತೆ ದೇವದಾರಿ ಗಣಿಯನ್ನು ಸರ್ಕಾರ ಕುದುರೆಮುಖ ಕಂಪನಿಗೆ ನಿಡರುವುದು ಯಾವ ನ್ಯಾಯ ? ಅರಣ್ಯದಲ್ಲಿ ಗಣಿಗಾರಿಕೆ ನಡೆದರೆ, ಕಾಡು ಪ್ರಾಣಿಗಳು ಊರಿಗೆ ಮತ್ತು ರೈತರ ಜಮೀನುಗಳಿಗೆ ನುಗ್ಗಿ ಮಾನವ ಕಾಡುವ ಪ್ರಾಣಿ ಸಂಘರ್ಷಕ್ಕೆ ಕಾರಣವಾಗುವುದಿಲ್ಲವೇ ? ಎಂದು ರೈತ ಮುಖಂಡ ಜಿ.ಕೆ. ನಾಗರಾಜರವರ ಪ್ರಶ್ನೆ.
ರಾಜ್ಯ ರೈತ ಸಂಘದಿಂದ ನರಸಿಂಗಾಪುರ ಗ್ರಾ.ಪಂ. ಮನವಿ ಸಲ್ಲಿಸಿ ಕುದುರೆಮುಖ ಕಂಪನಿಗೆ ದೇವದಾರಿ ಗಣಿ ಆರಂಭಿಸಲು ಗ್ರಾಮ ಪಂಚಾಯತಿಯಿಂದ ನಿರಾಪೇಕ್ಷಣಾ ಪತ್ರ ನೀಡಬಾರದು. ಜೊತೆಗೆ ಮುಂದಿನ ಗ್ರಾಮ ಸಭೆಯಲ್ಲೂ ಈ ಕುರಿತು ಚರ್ಚೆ ನಡೆಸಿ ಪರವಾನಿಗೆ ನೀಡಬಾರದು ಎಂದು ಮನವಿ ಮಾಡಿದರು. ಈ ಭಾಗದ ರೈತರು ತೆಂಗು, ಅಡಿಕೆ, ಮಹಾಗನಿ, ತೇಗ, ಮುಂತಾದ ಬಹುವಾರ್ಷಿಕ ಬಳೆಗಳನ್ನು ಬೆಳೆಯುತ್ತಿದ್ದಾರೆ. ಗಣಿಗಾರಿಕೆ ಚಟುವಟಿಕೆಗಳು ಹೆಚ್ಚಾದರೆ, ರೈತರ ಬಹುವಾರ್ಷಿಕ ಬಳೆಗಳಿಗೂ ಉಳಿಗಾಲವಿರುವುದಿಲ್ಲ. ಈಗಾಗಲೇ ಗ್ರಾ.ಪಂ. ವ್ಯಾಪ್ತಿಯಲ್ಲಿ ಆರ್.ಐ.ಪಿ.ಎಲ್. ಕಾರ್ಖಾನೆಗೆ ಸ್ಥಳೀಯರು ಅಪೇಕ್ಷಣೆ ಸಲ್ಲಿಸಿದ್ದರೂ, ಕಾರ್ಖಾನೆ ಸ್ಥಾಪನೆಗೊಂಡು ಜನ ಜಾನುವಾರುಗಳಿಗೆ ಹಾನಿ ಉಂಟಾಗುತ್ತಿದೆ ಎಂದು ತಿಳಿಸಿದರು.
ಕುದುರೆಮುಖ ಕಂಪನಿಗೆ ಅರಣ್ಯ ಇಲಾಖೆ ಪರವಾನಿಗೆ ನೀಡುವುದಿಲ್ಲದೇ ಸುಮಾರು 99 ಸಾವಿರ ಮರಗಳು ಕಟಾವು ವಿಷಯವನ್ನು ಮುಚ್ಚಿಟ್ಟಿದೆ. ಕುದುರೆಮುಖ ಕಂಪನಿಗೆ ಸಿ-ಕ್ಯಾಟಗರಿಯ ಗಣಿ ಪರವಾನಿಗೆ ನೀಡಬಹುದಾಗಿತ್ತು. ಬದಲಿಗೆ ಹೊಸ ಗಣಿಯನ್ನು ನೀಡಲು ನಮ್ಮ ಮತ್ತು ಸಾರ್ವಜನಿಕರ ತಕರಾರು ಇದೆ. ಸ್ಥಳೀಯ ನಿವಾಸಿಗಳ ಹಿತದೃಷ್ಟಿಯಿಂದ ಹಾಗೂ ಅರಣ್ಯ ನಾಶ ಮಾಡದಂತೆ ತಡೆಯಲಿ ಕಂಪನಿಗೆ ಪರವಾನಿಗೆ ನೀಡಬಾರದು. ಯವುದೇ ಕಾರಣಕ್ಕೂ ಬೆಟ್ಟದಲ್ಲಿ ಗಣಿಗಾರಿಕೆ ನಡೆಯಬಾರದು ಎಂದು ರೈತ ಮುಖಂಡ ಜಿ.ಕೆ. ನಾಗರಾಜರವರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮೌನೇಶ, ರೈತ ಗ್ರಾಮ ಘಟಕದ ಅಧ್ಯಕ್ಷ, ನೀಲಕಂಟಪ್ಪ, ರಮೇಶ್ ಕುಮಾರ ಕಾರ್ಯಧರ್ಶಿ, ಹುಲುಗಪ್ಪ, ಎಂ. ಮಂಜುನಾಥ, ಆಗಲೂರು ಗಂಗಣ್ಣ, ಉಪಸ್ಥಿತರಿದ್ದರು.