ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ
ಸಂಜೆ ವಾಣಿ ವಾರ್ತೆ
ಕೊಟ್ಟೂರು, ಜೂ.20: ತಾಲೂಕಿನ ಉಜ್ಜಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಡಿ ರೇವಣಸಿದ್ದೇಶ್ವರ ಹಾಗೂ ಉಪಾಧ್ಯಕ್ಷರಾಗಿ ಡಾ. ವೆಂಕಟೇಶ್ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ದಾರುಕೀಶ ಹಾಗೂ ಮಾಜಿ ಉಪಾಧ್ಯಕ್ಷ ಎಂ ಗುರುಸಿದ್ದನಗೌಡ್ರು ಹಾಗೂ ಕ್ಷೇತ್ರ ಅಧಿಕಾರಿ ಕೊಟ್ರೇಶ್ ಅಂಬಳಿ,  ಎಸ್ ಕೊಡದಪ್ಪ, ವಿ ಲೋಕೇಶ್,ಬಿ ಡಿ ಸೋಮಣ್ಣ ಬೆನಕನಹಳ್ಳಿ ಹಾಗೂ ಸಹಕಾರ ಸಂಘದ ಮಾಜಿ ಅಧ್ಯಕ್ಷ ಡಿ ರಿಜ್ವಾನ್ ಸಾಹೇಬ್ , ಹೊಬಳೇಶ್ , ತಿಮ್ಮಣ್ಣ ಹಾಗೂ ಎಲ್ಲಾ ನಿರ್ದೇಶಕರುಗಳು ಹಾಗೂ ಸಿಬ್ಬಂದಿ ವರ್ಗ ಇನ್ನಿತರರು ಊರಿನ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದರು