ಕೂಡ್ಲಿಗಿ ಪೊಲೀಸರ ಕಾರ್ಯಾಚರಣೆಮೂವರ ಬಂಧನ, 78ಗ್ರಾಂ  ಚಿನ್ನಾಭರಣ ವಶ
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ.20 :-  ಪಟ್ಟಣದಲ್ಲಿ ಜ.14ರಂದು ನಡೆದಿದ್ದ ಎರಡು ಮನೆಗಳ್ಳತನ ಪ್ರಕರಣಕ್ಕೆ ಸಂಬoಧಿಸಿದಂತೆ ಬೆನ್ನತ್ತಿದ ಕೂಡ್ಲಿಗಿ ಪೊಲೀಸರು  ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ 78 ಗ್ರಾಂ ಚಿನ್ನಾಭರಣ ಹಾಗೂ ಒಂದು  ಬೈಕ್ ವಶಪಡಿಸಿಕೊಳ್ಳಲಾಗಿದೆ.
ಈ ಮನೆಗಳ್ಳತನ ಪ್ರಕರಣದ ಜಾಲವನ್ನು ಬೇಧಿಸಿರುವ ಕುರಿತು  ಕೂಡ್ಲಿಗಿ  ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಅವರು ಬುಧವಾರ  ಡಿವೈಎಸ್ಪಿ ಕಚೇರಿಯಲ್ಲಿ ಕರೆದ  ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿ, ಪಟ್ಟಣದ ಬಾಪೂಜಿ ನಗರದ ಕೆ.ತಿಪ್ಪೇರುದ್ರಪ್ಪ ಮತ್ತು ಡಿ.ಹನುಮಂತಪ್ಪ ಅವರ ಮನೆಗಳಲ್ಲಿ ಕಳ್ಳತನ ನಡೆದ ಪ್ರಕರಣದ ತನಿಖೆಯನ್ನು ಪೊಲೀಸರ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸುವ ಮೂಲಕ  ಆರೋಪಿಗಳಾದ ಸಂಡೂರು ತಾಲೂಕಿನ ಬೊಮ್ಮಘಟ್ಟ  ಗ್ರಾಮದ ಅಜ್ಜಯ್ಯ, ಮಲ್ಲಿಕಾರ್ಜುನ ಮತ್ತು ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಬಾಲಾಪರಾಧಿಯನ್ನು  ವಶಕ್ಕೆ ಪಡೆಯಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಉಳಿದಂತೆ ಇನ್ನಷ್ಟು ಮನೆಗಳ್ಳತನದ ಪ್ರಕರಣ ಬೆನ್ನತ್ತಿ ವಿಜಯನಗರ ಜಿಲ್ಲಾ ಅಧೀಕ್ಷಕರ ಮಾರ್ಗದರ್ಶನದಲ್ಲಿ  ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಕರಣಗಳನ್ನು ಪತ್ತೆಹಚ್ಚಲಾಗುವುದು ಎಂದು ತಿಳಿಸಿದರು.
ವಿಜಯನಗರ ಜಿಲ್ಲೆಯ ಪೊಲೀಸ್  ಜಿಲ್ಲಾ ಅಧೀಕ್ಷಕರಾದ ಹರಿಬಾಬು ಮಾರ್ಗದರ್ಶನದಲ್ಲಿ ಕೂಡ್ಲಿಗಿ ಡಿವೈಎಸ್ ಪಿ ಮಲ್ಲೇಶಪ್ಪ ಮಲ್ಲಾಪುರ ನೇತೃತ್ವದ ಪತ್ತೆ ಕಾರ್ಯ ತಂಡದಲ್ಲಿ ಕೂಡ್ಲಿಗಿ  ಸಿಪಿಐ ಸುರೇಶ್ ತಳವಾರ, ಕೂಡ್ಲಿಗಿ ಪಿಎಸ್‌ಐ ಧನುಂಜಯ, ಗುಡೇಕೋಟೆ ಪಿಎಸ್‌ಐ ಸಿ.ಪ್ರಕಾಶ್, ಮುಖ್ಯ ಪೇದೆಗಳಾದ ಹೊಸಹಟ್ಟಿ ಅಂಜಿನಪ್ಪ, ಚಂದ್ರಶೇಖರ ಗೌಡ, ಎಎಚ್‌ಸಿ ಶಿವಕುಮಾರ, ಪೇದೆಗಳಾದ ಓಬಳಾಪುರ ತಿಪ್ಪೇಸ್ವಾಮಿ, ಕೂಡ್ಲಿಗಿ ರಾಘವೇಂದ್ರ, ಮಂಜುನಾಥ, ರೇವಣಾರಾಧ್ಯ, ಸೂಲದಹಳ್ಳಿ ಹಂಪಣ್ಣ, ಪೂಜಾರಹಳ್ಳಿ ಗುರುಸ್ವಾಮಿ, ಬಸವರಾಜ, ಮಂಜುನಾಥ, ಹುಡೇಂ ನಾಗೇಶ್ ಇತರರಿದ್ದು ಮನೆಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದಿದೆ. ಹಾಗೂ ಕೂಡ್ಲಿಗಿ ಪೊಲೀಸರ ಕಾರ್ಯಾಚರಣೆಗೆ ವಿಜಯನಗರ ಎಸ್ಪಿ ಹರಿಬಾಬು ಪ್ರಶಂಸೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ.
One attachment • Scanned by Gmail