ಪ್ರತಿಭಾ ಸನ್ಮಾನ ಸಮಾರಂಭ
ಹುಬ್ಬಳ್ಳಿ, ಜೂ20: ಧಾರವಾಡ ಶಹರದ ಹಾವೇರಿಪೇಟೆಯ ಮಾಸ್ಟರ್ ರೆಹಾನ್ ಮಲಿಕ್ ಮೈನುದ್ದಿನ್ ನದಾಫ್ ರಷ್ಯಾದ ಯಾಕುಟಿಯಾದಲ್ಲಿ 8ನೇ ಏಷ್ಯಾ ಮಕ್ಕಳ ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ 2024ರಲ್ಲಿ ಎಐಟಿಡಬ್ಲ್ಯೂಪಿ ಭಾರತೀಯ ತಂಡಕ್ಕೆ ಆಯ್ಕೆಯಾಗಿದ್ದಕ್ಕಾಗಿ ಹಾಗೂ ಹೆಬ್ಬಳ್ಳಿ ಗ್ರಾಮದ ಪ್ರತಿಭೆಯಾದ ಅಮನ್‍ಅಲಿ ಮೊಹಮ್ಮದ್ ಅಲಿ ನದಾಫ್ ಇಂಜಿನಿಯರಿಂಗ್‍ದಲ್ಲಿ, ಹುಬ್ಬಳ್ಳಿಯ ಪ್ರತಿಭೆಗಳಾದ ಮಹಮ್ಮದ ಅರಬಾಜ ನಜೀರ್ ಅಹ್ಮದ್ ದೊಡ್ಡಮನಿ ಡಿಪೆÇ್ಲೀಮಾದಲ್ಲಿ ಮತ್ತು ಮಹಮ್ಮದ್ ಉಸ್ಮಾನ್ ಮಹಮ್ಮದ್ ಹನೀಫ್ ನದಾಫ್ ದ್ವಿತೀಯ ಪಿ ಯು ಸಿ ವಿಜ್ಞಾನ ವಿಭಾಗದಲ್ಲಿ, ಕುಮಾರಿ ನಾಜಿಶ್ ಅಬ್ದುಲ್ ನಬಿ ನದಾಫ್ ಎಸ್‍ಎಸ್‍ಎಲ್‍ಸಿಯಲ್ಲಿ, ಕುಮಾರಿ ತಸ್ಮೀಯಾ ರಿಯಾಜ್ ಅಹ್ಮದ್ ನದಾಫ್ ಎಸ್‍ಎಸ್‍ಎಲ್‍ಸಿ ಯಲ್ಲಿ, ಮಿಶ್ರೀಕೋಟಿಯ ಮಹಮ್ಮದ್ ಯೂನುಸ್ ಹುಸೇನ್ ಸಾಬ್ ನದಾಫ್ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದದ್ದಕ್ಕಾಗಿ ಕರ್ನಾಟಕ ರಾಜ್ಯದ ಪಿಂಜಾರ್ ಸಂಘ ಧಾರವಾಡ ಜಿಲ್ಲಾ ಘಟಕದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಸದಸ್ಯರು ಹಾಗೂ ರಾಜ್ಯ ಪ್ರತಿನಿಧಿಗಳಾದ ಹಜರತಲಿ ದೊಡ್ಡಮನಿ,ಪಿ ಬಿ ನದಾಫ್, ಎಂ ಎಚ್ ಬೆಂಡಿಗೇರಿ, ಕಲಂದರ್ ಜಿಗಳೂರ, ಜಿಲ್ಲಾಧ್ಯಕ್ಷರಾದ ಎಫ .ಎಮ್ ನದಾಫ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ದಾವಲಸಾಬ್ ನದಾಫ, ಧಾರವಾಡದ 6ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ದಿಲ್ಶಾದ್ ಬೇಗಂ ನದಾಫ್, ಹುಬ್ಬಳ್ಳಿ ತಾಲೂಕ ಘಟಕದ ಅಧ್ಯಕ್ಷರುಗಳಾದ ಗೂಗಲ್ ಹಾಗೂ ಇಸ್ಮಾಯಿಲ್ ಸಾಬ್ ಕಾರ್ಯದರ್ಶಿಗಳಾದ ಅಬ್ದುಲ್ ನಬಿ ನದಾಫ್, ನವಲಗುಂದ ತಾಲೂಕ ಅಧ್ಯಕ್ಷರಾದ ಹುಸೇನ್ ಸಾಬ್ ನದಾಫ್, ಕುಂದಗೋಳ ತಾಲೂಕ ಅಧ್ಯಕ್ಷರಾದ ಖಾದರ್ ಸಾಬ್ ನದಾಫ್, ಸಂಘದ ಸದಸ್ಯರುಗಳಾದ ಎಚ್. ಎಲ್. ನದಾಫ್ ಹಾಗೂ ಜಿಲ್ಲೆಯ ಪದಾಧಿಕಾರಿಗಳು ಹಾಜರಿದ್ದರು.