ಬಾಗಳಿ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಣೆ : ಜನರಲ್ಲಿ ಜಾಗೃತಿ.

ಸಂಜೆವಾಣಿ ವಾರ್ತೆ
ಹರಪನಹಳ್ಳಿ.ಜೂ.೧೯: ನೆಹರು ಯುವ ಕೇಂದ್ರ ಬಳ್ಳರಿ ಹಾಗೂ ವಿಜಯನಗರ, ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಸ್ವ ಸಹಾಯ ಸಂಘ ಹಾಗೂ ಪ್ರೇರಣಾ ಶೈಕ್ಷಣಿಕ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಹರಪನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಬಾಗಳಿ ಗ್ರಾಮದ ಯುವಕ ಯುವತಿಯರೊಂದಿಗೆ ಬಾಗಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಡ ಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೀಲು ಮೂಳೆ ನಾಟಿ ವೈದ್ಯ ಪಂಡಿತ ಡಾ ಬಿ.ಬಿ.ಹೊಸೂರಪ್ಪ ಅವರು ವಹಿಸಿದ್ದರು. ಬಾಗಳಿ ಗ್ರಾಮದ ಮುಖಂಡ ಬಿ.ಬಿ.ಪರಶುರಾಮ ಅವರು ಕಾರ್ಯಕ್ರಮದ ನೇತೃತ್ವ ವಹಿಸಸಿದ್ದರು.ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಸ್ವ ಸಹಾಯ ಸಂಘದ ಅಧ್ಯಕ್ಷೆ ಪಿ.ಶ್ವೇತಾ ಅವರು ವಿಶ್ವ ಪರಿಸರ ದಿನಾಚರಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಮುಖ್ಯೋಪಾಧ್ಯಯ ಅನಂತ್, ಶಿಕ್ಷಕರಾದ ಕೊಟ್ರಮ್ಮ, ಬಸವರಾಜ್, ನಾಗರಾಜ್, ಅನ್ನಪೂರ್ಣಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.