ಪ್ರಶಸ್ತಿ ಪ್ರದಾನ, ಉಪನ್ಯಾಸ
ಧಾರವಾಡ,ಜೂ.20: ಮಗುವನ್ನು ಮನುಷ್ಯನನ್ನಾಗಿ ಬೆಳೆಸುವುದು ಸುಲಭದ ಕೆಲಸವಲ್ಲ. ಪ್ರಾಯಕ್ಕೆ ಬಂದ ಮಕ್ಕಳನ್ನು ಸರಿಯಾದದಾರಿಗೆತರುವುದುಕಷ್ಟದ ಕೆಲಸ ದಾಂಡೇಲಿ ಸ.ಪ್ರ. ದರ್ಜೆಕಾಲೇಜಿನಕನ್ನಡ ಪ್ರಾಧ್ಯಾಪಕಿಡಾ. ವಿನಯಾಒಕ್ಕುಂದಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಶ್ರೀಮತಿ ರಶ್ಮಿ ಮಂಜುನಾಥ ನಾಯಕದತ್ತಿ ಅಂಗವಾಗಿ ಏರ್ಪಡಿಸಿದ್ದ ಅಕ್ಷರರಶ್ಮಿ ಪ್ರಶಸ್ತಿ' ಪ್ರದಾನ, ಉಪನ್ಯಾಸ ಹಾಗೂ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟಬುಕ್ಸ್ ವಿತರಣೆಕಾರ್ಯಕ್ರಮದಲ್ಲಿಇಂದು ಮಕ್ಕಳ ಪೋಷಣೆಯಲ್ಲಿ ಪಾಲಕರ ಜವಾಬ್ದಾರಿಗಳು’ ವಿಷಯಕುರಿತುಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಮಕ್ಕಳು ನಮ್ಮಕಲ್ಪನೆಯಲ್ಲಿರುವಂತೆಇರುವುದಿಲ್ಲ. ಮಗುವಿಗೆ ಅದರದೇಆದ ಭಾವನೆಗಳು ಇರುತ್ತವೆ. ಆ ಭಾವನೆಗಳು ಬೆಳೆಯಲು ಬಿಡಬೇಕು.ಅವರಕನಸ್ಸನ್ನು ಈಡೇರಿಸಿಕೊಳ್ಳಲು ಮಕ್ಕಳು ಹುಟ್ಟಿದ್ದಾರೆ.ಮಕ್ಕಳು ಹಾದಿ ತಪ್ಪುವುದಕ್ಕೆ ಹೆತ್ತವರೆಕಾರಣ.ಅದರಜವಾಬ್ದಾರಿಯನ್ನು ಹೆತ್ತವರೆ ಹೊರಬೇಕಾಗುತ್ತದೆ.ಮಕ್ಕಳ ಮೇಲಿನ ದೌರ್ಜನ್ಯ ನಿಲ್ಲಬೇಕು.ಸಿದ್ಧಚೌಕಟ್ಟುಗಳನ್ನು ತೆಗೆಯಬೇಕು.ನಮ್ಮಇರುವಿಕೆ ಹೇಗೆ ಇರುತ್ತದೆಯೋಅದನ್ನೇ ಮಕ್ಕಳು ಅನುಕರಣೆ ಮಾಡುತ್ತಾರೆ. ಹದ ಮಾಡಿಕುಟ್ಟಿದರೆ ಅಕ್ಕಿ, ಹದತಪ್ಪಿದರೆ ನುಚ್ಚು ಎನ್ನುವಂತೆ ಮಕ್ಕಳ ಮನಸ್ಸುಇರುತ್ತದೆ. ಪ್ರಶ್ನಿಸುವ ಅಧಿಕಾರವನ್ನು ಮಕ್ಕಳಿಗೆ ಕೊಡುತ್ತಿಲ್ಲ. ಸತ್ಯವನ್ನು ಹೇಳುವ ತಾಕತ್ತಿರುವುದು ಮಗುವಿಗೆ ಮಾತ್ರ.
ತೆಂಗಿನ ಮರ ಬೆಳೀತಾ ಗರಿಗಳನ್ನು ಕಳಚಿ ಮೈಮೇಲೆ ಗೆರೆಗಳನ್ನು ಉಳಿಸಿಕೊಳ್ಳುತ್ತಾ ಬೆಳೆಯುತ್ತದೆ. ಆದರೆ ಮನುಷ್ಯ ಮನಸ್ಸಿಗೆ ಬರೆ ಎಳೆಯುತ್ತಾನೆ. ನಮ್ಮ ಮಕ್ಕಳ ಮೇಲೆ ನಾವು ಯುದ್ಧವನ್ನು ಸಾರಿದ್ದೇವೆ. ಮನೆಯಜೀವಂತ ಶಕ್ತಿಯಾಗಿರುವ ಮಕ್ಕಳಿಗಾಗಿ ಮನೆಯಲ್ಲಿಓದುವುದಕ್ಕೆಅವರದೇಆದಒಂದುಕೋಣೆಯನ್ನುಇಟ್ಟಿಲ್ಲ. 24 x 7 ಬಿಡುವುಕೊಡದೇಅವರನ್ನು ಒಂದಿಲ್ಲ ಒಂದುಕಾರ್ಯದಲ್ಲಿ ತೊಡಗಿಸಿಕೊಂಡೇ ಇರುತ್ತೇವೆ. ಸುರಕ್ಷತೆಯಜವಾಬ್ದಾರಿಕೊರತೆ ಮಕ್ಕಳಲ್ಲಿ ಎದ್ದುಕಾಣುತ್ತಿದೆ. 18ರ ಒಳಗಿನ ಹುಡುಗನಿಗೆರಾಕ್ಷಸ ಪ್ರವೃತ್ತಿಯಾಕೆ, ಹೇಗೆ ಬೆಳೆಯುತ್ತಿದೆ. ಬಂಡವಾಳೋದ್ಯಮ ಮಕ್ಕಳ ಮನಸ್ಸಿನ ಮೇಲೆ ನೇರವಾದ ಆಕ್ರಮಣಗಳು ನಿರಂತರವಾಗಿ ನಡೆಯುತ್ತದೆ. ಸಂಸ್ಕøತಿ, ಧರ್ಮ, ಉಡುಗೆ-ತೊಡುಗೆಗಳ ಆಟಗಳ ಮೇಲೆ ಆಕ್ರಮಣ ನಡೆಯುತ್ತಿದೆ.ಸರಕಾರಇದನ್ನ ಬ್ಯಾನ್ ಮಾಡಿದ್ರೆ ಸರಕಾರ ಉಳಿಯವುದು ಕಷ್ಟ.ಹಣ ಗಳಿಸುವುದು ಹೇಗೆ ಎಂಬ ಪಾಲಕರಆಶಾಭಾವನೆಗೆ ಮಕ್ಕಳು ಬಲಿಯಾಗುತ್ತಿದ್ದಾರೆ.ಪಾಲಕರು ಮಕ್ಕಳಿಗೆ ಸಮಯವನ್ನುಕೊಡುತ್ತಿಲ್ಲ. ರಿಯಾಲಿಟಿ ಶೋಗಳು ಮಕ್ಕಳ ಮನಸ್ಸನ್ನುಕೆಡಿಸ್ತಾ ಇವೆ. ಎಳವೆಯಲ್ಲಿಯ ಪ್ರತಿಭೆಯಾಕೆ ಬೆಳೆಯುವುದಿಲ್ಲ. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವನೆ ಮಾಡಿಕೊಳ್ಳಬೇಕಾಗಿದೆ ಎಂದುಡಾ.ವಿನಯಾಒಕ್ಕುಂದ ಹೇಳಿದರು.
ಮಕ್ಕಳ ಸಾಹಿತಿ ನಿಂಗಣ್ಣಕುಂಟಿ(ಇಟಗಿ) ಅತಿಥಿಯಾಗಿ ಮಾತನಾಡುತ್ತಾ, ಬೀಜ ಭೂಮಿಗೆ ಬಿದ್ದಾಗ, ಅದು ಗಾಳಿ, ಬಿಸಿಲು, ಮಣ್ಣು, ನೀರಿನ ಸಂಸ್ಕಾರವನ್ನು ಪಡೆದುಕೊಂಡು ಬೆಳೆಯುತ್ತದೆ. ಅದೇರೀತಿ ಮಕ್ಕಳಿಗೆ ಮನಸ್ಸಿನಲ್ಲಿ ಒಳ್ಳೆಯ ಆಚಾರ-ವಿಚಾರಗಳ ಬೀಜವನ್ನು ಬಿತ್ತಿ ಬೆಳೆಸಬೇಕು ಎಂದರು.
ಸಂಘದಉಪಾಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ವಿನಮ್ರತೆಯಿಂದ ಮಕ್ಕಳನ್ನು ಬೆಳೆಸಬೇಕು. ಹುಟ್ಟಿದಾಗ ಮಹಾಮಾನವರಾಗಿಯೇಇರುವ ಮಕ್ಕಳು ಬೆಳೆದಂತೆ ಅಲ್ಪಮಾನವರಾಗುತ್ತಾರೆ. ತಂದೆ ತಾಯಿಗಳು ಮಕ್ಕಳನ್ನು ಹಣ ಗಳಿಸುವ ಸಾಧನವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳಿಗಿಂತ ಹಣವೇ ಮುಖ್ಯವಾಗಿಬಿಟ್ಟಿದೆ.ಮಕ್ಕಳಲ್ಲಿ ಸ್ವಾವಲಂಬಿ ಗುಣವನ್ನು ಕಲಿಸಬೇಕು.ಪಠ್ಯದಜೊತೆಗೆ ಪಠ್ಯೇತರ ಚಟುವಳಿಕೆಗಳಲ್ಲಿ ಮಕ್ಕಳು ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದರು.
2023-24ನೇ ಸಾಲಿನ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ರಾಜ್ಯಕ್ಕೆ 4ನೇ ಸ್ಥಾನ ಪಡೆದಧಾರವಾಡ ಶಹರದ ವಿದ್ಯಾರ್ಥಿನಿ ಕುಮಾರಿ ಸ್ಪೂರ್ತಿ ಮಂಜಣ್ಣತುರಾಯಿ, ಪ್ರಜೆಂಟೇಶನ್ ಪ್ರೌಢ ಶಾಲೆ, ಧಾರವಾಡಅವರಿಗೆ `ಅಕ್ಷರರಶ್ಮಿ ಪ್ರಶಸ್ತಿ’ ಪ್ರದಾನ ಮಾಡಿಗೌರವಿಸಲಾಯಿತು.
ಆಯ್ದ ಶಾಲೆಯ ಬಡವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‍ಬುಕ್ಸ್ ವಿತರಣೆ ಮಾಡಲಾಯಿತು.
ಗುಬ್ಬಚ್ಚಿಗೂಡು ಶಾಲೆ, ಮಾಳಾಪೂರ, ಧಾರವಾಡವಿದ್ಯಾರ್ಥಿಗಳಾದ ರೇಹಾನ ಸಂಗ್ರೆಶಕೊಪ್ಪ (9ನೇ ತರಗತಿ), ಫೈಜಾನ್ ಸೌದಾಗರ(8ನೇ ತರಗತಿ), ಅಶ್ವಿನಿ ಮದನಿ (10ನೇ ತರಗತಿ), ಮೆಹರೋಜ್ ಬಂಕಾಪೂರ(8ನೇ ತರಗತಿ) ಮತ್ತು ಸರಕಾರಿ ಪ್ರೌಢ ಶಾಲೆ, ಆರ್.ಎನ್. ಶೆಟ್ಟಿಕ್ರೀಡಾಂಗಣ, ಧಾರವಾಡ ವಿದ್ಯಾರ್ಥಿಗಳಾದ 10ನೇ ತರಗತಿ ಕಾವ್ಯಶ್ರೀ ಮಡಿವಾಳರ, ಶಶಿಕಲಾ ಬಾಡದ, ಅರುಣ ಲಮಾಣಿ, ಶಾಫಿನ್‍ಕಲಾದಗಿ 9ನೇ ತರಗತಿಯ ಪವಿತ್ರಾಗುಡಿಯವರ, ವೈಷ್ಣವಿ ಮಠದ, ದಿವ್ಯಾ ಹಡಪದÀ, 8ನೇ ತರಗತಿದ್ಯಾಮಪ್ಪ ಹುಲಮನಿ ಹಾಗೂ ಸರಕಾರಿ ಪ್ರೌಢ ಶಾಲೆ, ಕಮಲಾಪೂರ, ಧಾರವಾಡ ವಿದ್ಯಾರ್ಥಿಗಳಾದ ಚನ್ನಮ್ಮಾಕರಿಗಾರ, ಸಮೀಷಾ ಘೋಡಸೆ, ಸಂಜನಾ ಗುಮ್ಮಗೋಳ, ಪ್ರಿಯಾಂಕಾ ಹಿರೂರ, ಸಹನಾ ಬಾಮಣೆ, ಪ್ರಿಯಾಂಕಾ ಶಿರಕೆ, ಲಕ್ಷ್ಮೀಕಮತಿವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‍ಬುಕ್ಸ್ ವಿತರಣೆ ಮಾಡಲಾಯಿತು ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು. ಗಗನ ಜಕ್ಕಣ್ಣವರ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ವೀರಣ್ಣಒಡ್ಡೀನ, ಶಶಿಧರ ತೋಡಕರ್, ಎಂ.ಎಂ.ಚಿಕ್ಕಮಠ, ಬಿ.ಜಿ. ಬಾರ್ಕಿ, ಎಸ್.ಎಂ.ದಾನಪ್ಪಗೌಡರ, ಗೀತಾ ಬಡಿಗೇರ, ಪ್ರಮೀಳಾ ಜಕ್ಕಣ್ಣವರ, ಎಂ.ಡಿ. ಒಕ್ಕುಂದ, ಮೃದಳಾ ನಾಯಕ, ಬೇಬಿ ನಾಯಕ, ಎ.ಬಿ. ನಾಯಕ, ಬಿ.ಟಿ. ಬಿರಾದಾರ, ಬಿ.ಬಿ. ನಾಯಕ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.