ಪರಿಸರವನ್ನು ಸ್ವಚ್ಛವಾಗಿಡಬೇಕು
ಅಣ್ಣಿಗೇರಿ,ಜೂ20 : ಜಿಲ್ಲಾ ಆಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ, ತಾಲೂಕ ಆಡಳಿತ ಪುರಸಭೆ ಸೇರಿದ ವಿವಿಧ ಇಲಾಖೆಗಳ ನೇತೃತ್ವದಲ್ಲಿ, ಡೆಂಘೀಜ್ವರ ನಿಯಂತ್ರಣ ಅರಿವು ಕಾರ್ಯಕ್ರಮ ಶ್ರೀ ಅಮೃತೇಶ್ವರ ಪದವಿ ಪೂರ್ವ ಕಾಲೇಜಿ ನಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ರಾಜು ಮಾವರ್ಕರ್ ಮಾತನಾಡಿ, ನಮ್ಮ ಸುತ್ತಮುತ್ತ ಪರಿಸರ ನಾವು ಸ್ವಚ್ಛವಾಗಿ ಬೇಡಬೇಕು. ಎಚ್ಚರ ವಹಿಸಬೇಕು. ನಿಂತ ನೀರು ಮಲೀನವಾದ ಜಾಗದಲ್ಲಿ ಹಲವು ಸೊಳ್ಳೆಗಳು ಉತ್ಪತ್ತಿ ಆಗುವದರಿಂದ ಕಾಯಿಲೆ ಬರಬಹುದು. ಸೊಂಕಿತ ಸೊಳ್ಳಿಗಳು ಡೆಂಘೀರೋಗ ಬರಲು ಕಾರಣ ಎಂದು ಹೇಳಿದರು.
ಆರೋಗ್ಯ ಪ್ರಾಥಮಿಕ ಕೇಂದ್ರ ಡಾ. ಅಗರ್ವಾಲ್ ಮಾತನಾಡಿ, ಡೆಂಘೀಒಂದು ಭಯಂಕರ ರೋಗ ರಾಜ್ಯದಲ್ಲಿ ಬಹುತೇಕ ಕಡೆ ವಿಸ್ತರಸಿದ್ದರಿಂದ ಜಾಗೃತ ವಾಗಿರ ಬೇಕು. ರೋಗ ಬರದಂತೆ ತಡೆಗಟ್ಟಲು ಸ್ವಚ್ಛತೆ ಕಾಯ್ದುಕೊಳ್ಳಬೇಕು.ಮುಖ್ಯವಾಗಿ ಶುದ್ಧವಾದ ನೀರು ಕುಡಿಯಬೇಕು, ಪರಿಸರವನ್ನು ನಿರ್ಮಲವಾಗಿರುವಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಮೆಹಬುಬಿ ನವಲಗುಂದ, ಮುಖ್ಯಾಧಿಕಾರಿ ವಾಯ್ ಜಿ ಗದ್ದಿ ಗೌಡ್ರು, ಶಿಕ್ಷಣ ಸಂಸ್ಥೆ ಪ್ರಾಚಾರ್ಯರು ಎಮ್ ಆರ್ ಮುಂಡರಗಿ, ಎಸ್ ಎಮ್ ಬಳೋಳ್ಳಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು, ಜಿ ವಾಯ್ ಕೊರವರ ನಿರೂಪಿಸಿದರು.ಎ.ಎ.ದೊಡ್ಡಮನಿ ಸ್ವಾಗತಿಸಿದರು.