ಕಪಿಲಾ ನದಿಗೆ ಸೋಪಾನ ಕಟ್ಟೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ
ಸಂಜೆವಾಣಿ ವಾರ್ತೆ
ನಂಜನಗೂಡು: ಜೂ.20:- ತಾ.ನ ಹುಲ್ಲಳ್ಳಿ ಗ್ರಾಮದ ಕಪಿಲ ನದಿ ತೀರದಲ್ಲಿ ಹಾಗೂ ನಂಜನಗೂಡಿನ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಕಪಿಲ ನದಿಗೆ ಸೋಪಾನ ಕಟ್ಟೆ ನಿರ್ಮಾಣ ಕಾಮಗಾರಿಗೆ ಶಾಸಕ ದರ್ಶನ್ ಧ್ರುವ ಭೂಮಿ ಪೂಜೆ ನೆರವೇರಿಸಿದರು.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಜನ ಸಂಪರ್ಕ ಸಭೆಯಲ್ಲಿ ಗ್ರಾಮದ ಮುಖಂಡರು ಕಪಿಲಾ ನದಿ ದಡದಲ್ಲಿರುವ ಮಾರುತಿ ದೇವಸ್ಥಾನದ ಬಳಿ ನದಿಗೆ ಸೋಪಾನ ಕಟ್ಟೆಯ ಅವಶ್ಯಕತೆ ಇದೆ ಎಂದು ನನಗೆ ಮನವಿ ಸಲ್ಲಿಸಿದ್ದರು ಅದರಂತೆ ಇಂದು ಹುಲ್ಲಳ್ಳಿ ನದಿ ತೀರ ಮತ್ತು ನಂಜನಗೂಡಿನ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳೆ ನದಿ ತೀರದಲ್ಲಿ ಒಟ್ಟು 2 ಕೋಟಿ ರೂ ವೆಚ್ಚದಲ್ಲಿ ಸೋಪಾನ ಕಟ್ಟೆ ಮತ್ತು ಮಳೆಗಾಲದಲ್ಲಿ ಬರುವ ನದಿಯ ಪ್ರವಾಹವನ್ನು ತಡೆಯಲು ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ನದಿ ತೀರದ ಅಭಿವೃದ್ಧಿಗಾಗಿ ಸಣ್ಣ ನೀರಾವರಿ ಸಚಿವರು 5 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ ಅದಕ್ಕಾಗಿ ನೀರಾವರಿ ಸಚಿವರಿಗೂ ಹಾಗೂ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಶಾಸಕರು ಸ್ಥಳದಲ್ಲಿದ್ದಗುತ್ತಿಗೆದಾರರಿಗೆ ಗುಣಮಟ್ಟದ ಕಾಮಗಾರಿನಡೆಸಿ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಈ ಸಮಯದಲ್ಲಿ ಶಾಸಕ ದರ್ಶನ್ ಧ್ರುವ, ಮಾಜಿ ಶಾಸಕ ಕೇಶವಮೂರ್ತಿ, ಹುಲ್ಲಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠನಾಯ್ಕ, ನಂಜನಗೂಡು ಬ್ಲಾಕ್ ಅಧ್ಯಕ್ಷ ಮಹೇಶ್, ಗ್ರಾ.ಪಂ. ಅಧ್ಯಕ್ಷೆ ದೇವಮ್ಮ, ಜಿ.ಪಂ.ಮಾಜಿ ಸದಸ್ಯ ಮಾರುತಿ, ಮುದ್ದುಮಾದಪ್ಪ, ಅಭಿನಂದನ್ ಪಟೇಲ್, ಶಿವನಂಜನಾಯ್ಕ, ಚೋಳರಾಜು, ನೀರಾವರಿ ಇಲಾಖೆ ಎ.ಇ.ಸೋಮಣ್ಣ, ಗುತ್ತಿಗೆದಾರ ಕೃಷ್ಣಸೇರಿದಂತೆ ಕಾಂಗ್ರೆಸ್ ಮುಖಂಡರು ಇದ್ದರು.