ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
ಕೋಲಾರ ,೨೦-ರಾಜ್ಯ ಸರಕಾರ ಪೆಟ್ರೋಲ್ ಡೀಸೆಲ್ ದರ ಏರಿಕೆಯನ್ನು ಖಂಡಿಸಿ, ನಗರದ ಗಾಂಧಿವನದ ಮುಂಭಾಗದಿಂದ ಜೆಡಿಎಸ್ ಮತ್ತು ಬಿಜೆಪಿ ಜಿಲ್ಲಾ ಮುಖಂಡರು ಪಂಜಿನ ಮೆರವಣಿಗೆ ನಡೆಸಿ ಕಾಂಗ್ರೆಸ್ ಸರಕಾರದ ವಿರುದ್ದ ದಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಗಾಂಧಿವನದಿಂದ ಪ್ರಾರಂಭವಾದ ಪಂಜಿನ ಮೆರವಣಿಯು ನಗರದ ಪ್ರಮುಖ ವೃತ್ತಗಳಲ್ಲಿ ಸಾಗಿದರು.ಮೆಕ್ಕೆ ವೃತ್ತದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ರಸ್ತೆ ತಡೆಸಿ ನಡೆಸಿ ಪಂಜಿನ ಮೆರವಣಿಯ ಪ್ರತಿಭಟನೆ ನಡೆಸಿ ರಾಜ್ಯ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಸಿಎಂಆರ್ ಶ್ರೀನಾಥ್, ಮಾಜಿ ಸಚಿವ ವರ್ತೂರ್ ಪ್ರಕಾಶ್, ಜೆಡಿಎಸ್ ಪಕ್ಷ ಬಾಬು ಮೌನಿ, ಬಣಕನಹಳ್ಳಿ ನಟರಾಜ್, ಚಂಬೆ ರಾಜೇಶ್, ಮೂರಂಡಹಳ್ಳಿ ಗೋಪಾಲ್, ನರೇಂದ್ರ ಬಾಬು, ದಯಾನಂದ್, ಗಾಯತ್ರಿ ಮುದ್ದಪ್ಪ, ಸುಗಟೂರು ವೆಂಕಟಾಚಲ, ರಾಕೇಶ್ ಗೌಡ, ಇರಂಗಸಂದ್ರ ವಿಶ್ವನಾಥ್, ಶಿವು, ಜಿಜೆಪಿ ರಾಜೇಶ್ ಸಿಂಗ್, ಕೆಂಬೊಡಿ ನಾರಾಯಣಸ್ವಾಮಿ, ತಮಕ ವಿಶ್ವ, ಖಾಜಿಕಲ್ಲಹಳ್ಳಿ ಹರೀಶ್, ಬಿಜೆಪಿ ಮಮತಾ ಗೌಡ, ಸಿಎಂಆರ್ ರಾಮು, ಚಲುವನಹಳ್ಳಿ ಎಚ್. ಶ್ರೀನಿವಾಸ್ ಇದ್ದರು.