ಪರಿಸ್ಥಿತಿಗೆ ಅನುಗುಣವಾಗಿ ಬಕ್ರೀದ್ ಆಚರಣೆ
ಕನಕಪುರ.ಜೂ೨೦:ಭಗವಂತನ ಸತ್ವಪರೀಕ್ಷೆಯಲ್ಲಿ ಭಕ್ತಗೆದ್ದ ದಿನದ ಅಂಗವಾಗಿ ಬಕ್ರೀದ್ ಹಬ್ಬವನ್ನು ಪ್ರತಿಯೊಬ್ಬ ಮುಸಲ್ಮಾನರುಅವರವರ ಪರಿಸ್ಥಿತಿಗೆ ತಕ್ಕಂತೆ ಆಚರಿಸಿಕೊಂಡು ಬರಲಾಗುವ ಹಬ್ಬ ಬಕ್ರೀದ್ ಹಬ್ಬವಾಗಿದೆಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ.
ಬಕ್ರೀದ್ ಹಬ್ಬ ಬಲಿದಾನವನ್ನುಕೋಡುವ ಪವಿತ್ರವಾದ ಹಬ್ಬವಾಗಿದೆ . ಭಗವಂತನಲ್ಲಿ ನಾವು ಎಷ್ಟು ಭಕ್ತಿ ಉಳ್ಳವರಾಗಿರುತ್ತೇವೆ ಎಂಬುದರ ಸಂಕೇತವನ್ನುಈ ಹಬ್ಬ ಪ್ರತಿ ಬಿಂಬಿಸುತ್ತದೆಎಂದರು.
ಹಾಗೆಯೇಒಂದು ಲಕ್ಷ ೮೦ಸಾವಿರ ಪೈಗಂಬರ್‌ಗಳಲ್ಲಿ ಕೊನೆಯ ಪೈಗಂಬರ್‌ಗಳಾದ ಮಹಮದ್ ಪೈಗಂಬರ್‌ರವರುಗಳಾಗಿದ್ದಾರೆ. ಇವರಿಗಿಂತ ಮೊದನೆಯವರಾದಅಜ್ರತ್ ಮಹಮದ್‌ಇಬ್ರಹಿಂ ಸಲಿಲುಲ್ಲಾಎಂಬುವರುಇಸ್ಲಾಂಧರ್ಮವನ್ನು ಸ್ವೀಕರಿಸಿ ಬಂದಾಗ ೮೦ವರ್ಷವಾದರೂ ಕೂಡ ಮಕ್ಕಳಿಲ್ಲದೆ ಇದ್ದಂತಹ ಸಂದರ್ಭದಲ್ಲಿ ೮೦ವರ್ಷದ ನಂತರಒಂದು ಮಗು ಜನಿಸುತ್ತದೆ.
ಭಗವಂತ ಸತ್ವ ಪರೀಕ್ಷೆ ಮಾಡುವಉದ್ದೇಶದಿಂದಇವರಿಗೆ ಸ್ವಪ್ನದಲ್ಲಿಬಡುತ್ತಿರುವರೀತಿ ಕನಸು ಬೀಳುತ್ತದೆ, ಬೆಳಿಗ್ಗೆ ಎದ್ದು ಒಂಟೆಗಳನ್ನು ಬಲಿಕೊಡುತ್ತಾರೆಆದರೆ ಪದೇ ಪದೇಇದೇರೀತಿ ಬಲಿಕೊಡುವ ಕನಸುಗಳು ಬೀಳುತ್ತಿರುತ್ತವೆಇದರಉದ್ದೇಶವನ್ನುಅರ್ಥ ಮಾಡಿಕೊಂಡ ಮಹಮದ್‌ಇಬ್ರಹಿಂ ಸಲಿಲುಲ್ಲಾರವರುತಮ್ಮ ಮಗನನ್ನು ಬಲಿಕೊಡಲು ಹೋಗುವ ಸಂದರ್ಭದಲ್ಲಿ ಬಲಿ ಆಗದಿದ್ದಾಗದೇವರೆಇವರಭಕ್ತಿಗೆ ಮೆಚ್ಚಿದೇವಲೋಕದಿಂದಒಂದುಟಗರನ್ನು ಕಳುಹಿಸಿಕೊಟ್ಟು ಮಗುವಿನ ಬದಲಾಗಿ ಬಲಿಕೊಡುವಂತೆ ಆದೇಶಿಸುತ್ತಾರೆ,
ಈರೀತಿ ಬಲಿ ಕೊಟ್ಟ ಪ್ರಾಣಿಯನ್ನು ಮೂರು ಭಾಗವಾಗಿದಾನ ಮಾಡುವಂತೆಅದೇಶ ನೀಡುತ್ತಾರೆಇವರಆಜ್ಞೆಯನ್ನು ಪ್ರತಿವರ್ಷ ನಾವು ಪಾಲಿಸಿಕೊಂಡು ಬರುತ್ತಿದ್ದೇವೆಎಂದು ಶಾಸಕರು ತಿಳಿಸುತ್ತಾರೆ.
ಹಾಗೆಯೇತೀರ ಬಡವರು ಈ ಹಬ್ಬವನ್ನುಆಚರಿಸಲುಅರ್ಹರಲ್ಲಅನುಕೂಲರಸ್ಥರಾಗಿರುವವರು ಮಾತ್ರಆಚರಿಸುವಒಂದು ಹಬ್ಬವಾಗಿದೆ ನಾವು ಪ್ರತಿವರ್ಷ ಶಾಂತಿಯುತವಾಗಿಎಲ್ಲಾ ವರ್ಗದವರಿಗೆ ಬಹಳ ಶುಚಿತ್ವದಿಂದಆರೋಗ್ಯಕರವಾಗಿರುವ, ಪ್ರಾಣಿಯನ್ನುದಾನವಾಗಿ ನೀಡುವಂತೆಕುರಾನ್ ನಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.
ಈ ಹಬ್ಬದ ಅಂಗವಾಗಿ ನೂರಾರುಜನರಿಗೆ ೨೫ಕ್ಕೂ ಹೆಚ್ಚು ಟಗರಿನ ಮಾಂಸವನ್ನುದಾನವಾಗಿಶಾಸಕ ಇಕ್ಬಾಲ್ ಹುಸೇನ್‌ನೀಡಿದರು.
ಶಾಸಕರು, ಹಾಗೂ ಕುಟುಂಬದವರು ನಮಾಜ್ ಮುಗಿಸಿ ಬಕ್ರೀದ್ ಹಬ್ಬದ ಅಂಗವಾಗಿ ಮಸೀದಿಗಳಿಗೆ ಬೇಟಿಕೊಟ್ಟು ಪ್ರಾರ್ಥನೆ ಸಲ್ಲಿಸಿದರು. ಹಾಗೆಯೇ ಬಡವರಿಗೆದಾನವನ್ನು ಸಹ ಮಾಡಿದರು.