ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ
ಕೋಲಾರ,೨೫:ಇಲ್ಲಿನ ನಗರಸಭೆ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂಗವಿಲಕರಿಗೆ ತ್ರಿಚಕ್ರ ವಾಹನ ವಿತರಣಾ ಕಾರ್ಯಕ್ರಮವು ಗೊಂದಲಾದ ಗೂಡಾಗಿತ್ತು.
ಕಾರ್ಯಕ್ರಮವನ್ನು ಮಂಗಳವಾರ ನಿಗಧಿಪಡಿಸಲಾಗಿತ್ತು, ಇದಕ್ಕೆ ಗಣ್ಯರು ಆಗಮಿಸಿದ ಕಾರಣ ಬುಧವಾರ ಕಾರ್ಯಕ್ರಮ ನಡೆಸಲಾಯಿತು,
ಶಿಷ್ಠಚಾರದ ಪ್ರಕಾರ ನಗರಸಭೆ ಪೌರಾಯುಕ್ತ ಶಾಸಕ ಕೊತ್ತೂರು ಜಿ.ಮಂಜುನಾಥ್ ಎಂಎಲ್‌ಸಿಗಳಾದ ಎಂ.ಎಲ್.ಅನಿಲ್ ಕುಮಾರ್ ಇಂಚರ ಗೋವಿಂದರಾಜು ಸೇರಿದಂತೆ ನಗರದ ೩೫ ವಾರ್ಡ್‌ಗಳ ಸದಸ್ಯರಿಗೂ ದೂರವಾಣಿ ಕರೆ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಆದರೆ ಸಂಸದ ಎಂ.ಮಲ್ಲೇಶ್ ಬಾಬು ಅವರನ್ನು ಆಹ್ವಾನಿಸದೆ ಶಿಷ್ಠಚಾರ ಉಲ್ಲಂನೆ ಮಾಡಿದ್ದಾರೆ.
ಅಧಿಕಾರಿಗಳು ಬೇಕಾಯಿಯೆ ಶಿಷ್ಠಾಚಾರ ಉಲ್ಲಂನೆ ಮಾಡಿದ್ದಾರೆ ಎಂದು ಆರೋಪಿಸಿ ಸದಸ್ಯರಾದ ಪ್ರವಿನ್?ಗೌಡ, ರಾಕೇಶ್ ರಮೇಶ್, ಗುಣಶೇಖರ್ ಆಕ್ರೋಶ ವ್ಯಕ್ತಪಡಿಸಿ, ಪೌರಾಯುಕ್ತ ಶಿವಾನಂದ ಹಾಗೂ ದ್ವೀತಿಯ ದರ್ಜೆ ಸಹಾಯಕ ಜೀವನ ಅವರನ್ನು ತರಾಟೆಗೆ ತೆಗೆದುಕೊಂಡರು.
ಬೆಳಗ್ಗೆ ೧೧ ಗಂಟೆಗೆ ನಿಗಧಿಯಾಗಿದ್ದ ಕಾರ್ಯಕ್ರಮವು ೧೧.೪೫ಕ್ಕೆ ಪ್ರಾರಂಭವಾಯಿತು. ಶಾಸಕ ಕೊತ್ತೂರು ಜಿ.ಮಂಜುನಾಥ್ ಕಾರ್ಯಕ್ರಮ ಕುರಿತು ಮಾತನಾಡುತ್ತಿದ್ದಾಗ, ಸ್ಥಳಕ್ಕೆ ಆಗಮಿಸಿದ ಸದಸ್ಯರಾದ ರಮೇಶ್, ಶ್ವೇತಾ ಶಬರೀಶ್, ರಾಕೇಶ್ ಮತಿತರರು ಶಿಷ್ಠಚಾರ ಉಲ್ಲಂನೆ ಕುರಿತು ಪ್ರಶ್ನಿಸಿ, ಪೌರಾಯುಕ್ತ ಶಿವಾನಮದ ವಿರುದ್ಧ ಕಿಡಿಕಾರಿದರು.
ಇದಕ್ಕೆ ಉತ್ತರಿಸಿದ ಶಾಸಕ ಕೊತ್ತೂರು ಜಿ.ಮಂಜುನಾಥ್, ಜನಪ್ರತಿನಿಧಿಯಾಗಿ ಆಯ್ಕೆಯಾದ ನಂತರ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದ ಮೇಲೆ ರಾಜ್ಯ ಸರ್ಕಾರದಿಂದ ಶಿಷ್ಠಾಚಾರಕ್ಕೆ ಒಳಪಡಿಸುವಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳಿಗೂ ಪಟ್ಟಿ ಕಳುಹಿಸುತ್ತಾರೆ. ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಎಚ್ಚರವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು, ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಇದಕ್ಕೆ ಒಪ್ಪದ ಸದಸ್ಯರು, ಪೌರಾಯುಕ್ತರು ಕೂಡಲೇ ಸಂಸದ ಮಲ್ಲೇಶ್ ಬಾಬು ಅವರಿಗೆ ದೂರವಾಣಿ ಕರೆ ಮಾಡಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು. ಆಗ ನನ್ನ ಬಳಿ ದೂರವಾಣಿ ಸಂಖ್ಯೆಯಿಲ್ಲ ಎಂದು ಶಿವಾನಂದ ಅವರು ಹಾರಿಕೆ ಉತ್ತರ ನೀಡಿದರು. ಇದಕ್ಕೆ ಗರಂ ಆದ ಶಾಸಕರು ಎಲ್ಲಾ ಜನಪ್ರತಿನಿಧಿಗಳ ನಂಬರ್ ಇಟ್ಟುಕೊಳ್ಳಬೇಕು ಎಂದು ತಾಕೀತು ಮಾಡಿದರು.
ಸದಸ್ಯರಿಂದ ನಂಬರ್ ಪಡೆದು ದೂರವಾಣಿ ಕರೆ ಮಾಡಿದ ಶಿವಾನಂದ ಅವರು, ಸಣ್ಣಪುಟ್ಟ ಸಮಸ್ಯೆಯಿಂದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿಲ್ಲ. ಮುಂದಿನ ದಿನಗಳಲ್ಲಿ ಶಿಷ್ಠಚಾರ ಪಾಲನೆ ಮಾಡಲಾಗುವುದು. ಕ್ಷಮೆಯಿರಲಿ ಎಂದು ಕೇಳಿದರು. ಆಗ ಸದಸ್ಯರು ಸಮಾಧಾನಗೊಂಡು ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರು.