ತೈಲ ಬೆಲೆ ಏರಿಕೆ ಖಂಡಿಸಿ ರೈತ ಸಂಘ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಹನೂರು ಜೂ 20 :- ರಾಜ್ಯ ಸರ್ಕಾರ ತೈಲ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹನೂರು ತಾಲೂಕು ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಹನೂರು ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹನೂರು ಘಟಕ ರೈತರು ಗುರುವಾರ ಪ್ರತಿಭಟನೆ ನಡೆಸಿದರು. ಹನೂರು ಪಟ್ಟಣದ ಪೆಟ್ರೋಲ್ ಬಂಕ್ ಇಂದ ಮೆರವಣಿಗೆ ಹೊರಟ ರೈತ ಸಂಘದ ಮುಖಂಡರುಗಳು ಪಟ್ಟಣದ ದಿವಂಗತ ಹೆಚ್. ನಾಗಪ್ಪ ಸರ್ಕಲ್ ಮೂಲಕ ಸಾಗಿ ಕೆಲ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ನಂತರ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪ್ರತಿಮೆ ಸರ್ಕಲ್ ಮೂಲಕ ಸಾಗಿದ ಪ್ರತಿಭಟನಾ ಮೆರವಣಿಗೆ ತಾಲೂಕು ತಹಸಿಲ್ದಾರ್ ಕಚೇರಿಯ ತೆರಳಿದರು. ಕಚೇರಿಯ ಮುಂದೆ ಪ್ರತಿಪಡಿಸಿದ ರೈತರು ತಹಸಿಲ್ದಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಕರ್ನಾಟಕ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಹೆಚ್ಚಿಸಿರುವುದು ಇದರ ಪರಿಣಾಮ ನೇರವಾಗಿ ರೈತರಿಗೆ ಹಾಗೂ ಬಡ ಮಧ್ಯಮ ವರ್ಗದವರಿಗೆ ಹೊರೆಯಾಗುತ್ತಿದೆ.
ತೈಲ ಬೆಲೆ ಏರಿಕೆಯಿಂದ ರೈತರು ಬೆಳೆದ ತರಕಾರಿ ಸವಸ ಧಾನ್ಯಗಳ ಸಾಗಾಣಿಕೆ ವೆಚ್ಚ ಹೆಚ್ಚುತ್ತದೆ ಟ್ರ್ಯಾಕ್ಟರ್ ನಿಂದ ಉಳಿಮೆ ಮಾಡುವ ವೆಚ್ಚವು ಅಧಿಕವಾಗುತ್ತದೆ ಮತ್ತು ರೈತರು ಬಳಸುವ ಕೃಷಿಗೆ ಸಂಬಂಧಪಟ್ಟ ಎಲ್ಲಾ ವಸ್ತುಗಳ ವೆಚ್ಚವು ಅಧಿಕವಾಗುತ್ತದೆ.
ದಿನ ನಿತ್ಯದ ಬಳಕೆಯಾಗುವ ಅಗತ್ಯ ವಸ್ತುಗಳ ವೆಚ್ಚವು ಹೆಚ್ಚಾಗುತ್ತಿದೆ. ಇದರಿಂದ ಬರದಿಂದ ತತ್ತರಿಸಿರುವ ರೈತರ ಜೀವನ ಮತ್ತಷ್ಟು ಕಷ್ಟವಾಗುತ್ತದೆ ಆದ್ದರಿಂದ ತೈಲಬೆಲೆ ಏರಿಕೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶೈಲೇಂದ್ರ, ಉಪಾಧ್ಯಕ್ಷ ಗೌಡೆಗೌಡ, ಕಾರ್ಯದರ್ಶಿ ಭಾಸ್ಕರ್, ಹನೂರು ತಾಲೂಕು ಘಟಕ ಅಧ್ಯಕ್ಷ ಅಮ್ಜದ್ ಖಾನ್, ಅರ್ಪದರಾಜು, ಶೇಷಾದ್ರಿ, ಪಳನಿ ಸ್ವಾಮಿ, ಪುಟ್ಟಸ್ವಾಮಿ, ಮುರುಗೇಶ್, ವೇಲುಸ್ವಾಮಿ ಸೇರಿದಂತೆ ಇನ್ನಿತರ ರೈತ ಮುಖಂಡರುಗಳು ಹಾಜರಿದ್ದರು.