ಹನೂರು ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನ ಸಭೆ
ಸಂಜೆವಾಣಿ ವಾರ್ತೆ
ಹನೂರು ಜೂ 20 :- ಪಟ್ಟಣದ ಡಾಕ್ಟರ್, ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಹಾಗೂ ಜಿಲ್ಲಾಧಿಕಾರಿ ಶಿಲ್ಪನಾಗ್ ರವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಶಾಸಕ ಎಂಆರ್ ಮಂಜುನಾಥ್, ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಅವರು ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಕ್ರಿಯಾ ಯೋಜನೆ ತಯಾರು ಸಂಬಂಧ, ಹೊಸ ಕಾಮಗಾರಿಗಳ ಕ್ರಿಯಾ ಯೋಜನೆಯ ಬಗ್ಗೆ ಅಂಕಿ ಅಂಶ ಗಳನ್ನು ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿಗಳ ಕ್ರಿಯಾ ಯೋಜನೆ ಬಗ್ಗೆ ಮಾಹಿತಿ ಪಡೆದರು.
ಅಜ್ಜೀಪುರ ಗ್ರಾಮ ಪಂಚಾಯತ್ ರೋಜ್ ಗಾರ್ ದಿವಸ್ ಯೋಜನೆಯು ಕೆಲವು ಕಾಮಗಾರಿಗಳಿಗೆ ಸೀಮಿತವಾಗಿ ಹೊಸ ಜಾಬ್ ಕಾರ್ಡ್ ನೀಡಿರುವ ಬಗ್ಗೆ ಮಾಹಿತಿ ಪಡೆದು ಸಮಸ್ಯೆ ಗಳನ್ನು ಹಂತ ಹಂತವಾಗಿ ಬಗೆಹರಿಸಲು ಅಧಿಕಾರಿಗಳು ಸಹಕಾರ ನೀಡಬೇಕು, ನರೇಗಾ ಯೋಜನೆ 2284ಜಾಬ್ ಕಾರ್ಡ್ ಇದೆ, ಈ ವರ್ಷ ಕ್ರಿಯಾ ಯೋಜನೆಯಲ್ಲಿ ತಯಾರು ಮಾಡಿರುವ ಬಗ್ಗೆ ಮಾಹಿತಿ ಪಡೆದುಕೊಂಡರು, 15 ನೇ ಹಣಕಾಸು ಸಮುದಾಯ ಆಧಾರಿತ ಕಾಮಗಾರಿ, ಕೆರೆ ಹೂಲು ಚೆಕ್ ಡ್ಯಾಮ್ ನಿರ್ಮಾಣ, ಶಾಲಾ ಸೌಚಾಲಯ, ವ್ಯಕ್ತಿಕ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ನಿರ್ಮಾಣಗೊಳಿಸಬೇಕು. ಸೊಕ್ ಫಿಟ್ ನಿರ್ಮಾಣ ಕಾಮಗಾರಿಗೆ 21ದಿನಗಳ ಅವಧಿಯಲ್ಲಿ ನಿರ್ಮಾಣ ಮಾಡಬೇಕು ಆದರೆ 2ವರ್ಷ ಗಲಾದರೂ ಸಹ ಕಾಮಗಾರಿ ನಿರ್ಮಾಣ ಮಾಡಿತ್ತಿಲ್ಲ ಇದರ ಬಗ್ಗೆ ಹರಿಸ ಬೇಕು,3 ನಾಲ್ಕ್ ತಿಂಗಳು ನರೇಗಾ ಯೋಜನೆ ಯಲ್ಲಿ ಕೆಲಸ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪನಾಗ್ ರವರ ಮಾತನಾಡಿ ಕುಡಿಯುವ ನೀರು ಸ್ವಚ್ಛತೆ ಬಗ್ಗೆ ಕ್ರಮ ಕೈಗೊಂಡಿರುವ ಬಗ್ಗೆ ಮಾಹಿತಿ ನೀಡಬೇಕು, ಕಡ್ಡಾಯವಾಗಿ ನರೇಗಾ ಯೋಜನೆ ಯಲ್ಲಿ 100 ದಿನಗಳ ಕೆಲಸ ನೀಡಬೇಕು, ಬೈಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸೋಲಿಗ ಸಮುದಾಯದ ಜನರು ಇರುವುದರಿಂದ ಅವರಿಗೆ ನರೇಗಾ ಯೋಜನೆ ಯಲ್ಲಿ ಕೂಲಿ ಕೆಲಸ ನೀಡಬೇಕು, ಕಾಡಂಚಿನ ಭಾಗದಲ್ಲಿ ಬೇರೆಡೆ ಕೂಲಿ ಕೆಲಸ ಗಳಿಗೆ ತೆರಳುವ ಜನರಿಗೆ ನಮ್ಮಲ್ಲಿರುವ ಸರ್ಕಾರದ ಮಹತ್ವ ಡಾ ಯೋಜನೆ ಯಾದ ನರೇಗಾದಲ್ಲೂ ಕೂಲಿ ಕೆಲಸ ನೀಡಿ, ವಲಸೆ ಹೋಗುವುದ್ದನ್ನು ತಪ್ಪಿಸಬೇಕು, ಕೆರೆ ಅಭಿವೃದ್ಧಿ ಒಂದು ತಿಂಗಳ ಅವಧಿಯಲ್ಲಿ ಕಡ್ಡಾಯವಾಗಿ ನರೇಗಾ ಯೋಜನೆ ಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಜಾಬ್ ಕಾರ್ಡ್ ನೀಡಬೇಕು ಎಂದು ತಿಳಿಸಿದರು.
ಪ್ರತಿ ಗ್ರಾಮ ಪಂಚಾಯ್ತಿಗಳಲ್ಲಿ ಕೆರೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಅಮೃತ ಸರೋವರ, ಶಾಲಾ ಆಟದ ಮೈದಾನ ನರೇಗಾ ದಲ್ಲಿ ಅವಕಾಶವಿದೆ, ಮಕ್ಕಳಿಗೆ ಅನುಕೂಲ ವಾಗುವಂತೆ ವಾಲಿಬಾಲ್ ಬಾಲ್, ಖೋ ಖೋ ಸೇರಿದಂತೆ ಆಟದ ಮೈದಾನ ಗಳನ್ನು ನಿರ್ಮಾಣ ಮಾಡಲು ನರೇಗಾ ಯೋಜನೆ ಯಲ್ಲಿ ಅವಕಾಶವಿದೆ, ಗ್ರಾಮ ಸಭೆ ಗಳಲ್ಲಿ ಉಳ್ಳವರಿಗೆ ಸೌಲಭ್ಯ ವನ್ನು ನೀಡಲಾಗುತ್ತಿದೆ, ಎಲ್ಲರಿಗೂಸೌಲಭ್ಯ ಗಳನ್ನು ನೀಡುವ ಕೆಲಸ ವಾಗಬೇಕು ಎಂದರು.
ಸರ್ಕಾರಿ ಹಾಸ್ಟೆಲ್ ಗಳಲ್ಲೂ ತೋಟಗಾರಿಕೆ ಸೊಪ್ಪು ತರಕಾರಿಗಳನ್ನು ಬೆಳೆಯಬೇಕು, ಶಾಲೆಗಳಲ್ಲಿ ಕೈತೋಟ ನಿರ್ಮಾಣ ಮಾಡಬೇಕು, ನುಗ್ಗೆ ಸೊಪ್ಪು, ನಿಂಬೆಹಣ್ಣು, ತರಕಾರಿಗಳನ್ನು ಬೆಳೆಯುವ, 50 ಕಡೆಗಳಲ್ಲಿ ಮಕ್ಕಳಿಗೆ ಅನುಕೂಲ ವಾಗಲಿ ಎಂದರು.
ಗ್ರಾಮ ಪಂಚಾಯತ್ ಕಟ್ಟಡ ಗಳ ಟೆಂಡರ್ ನರೇಗಾ ಎನ್ ಎಂ ಆರ್ ಮೆಟಿರಿಯಲ್, ಅಂಗನವಾಡಿ ಕಟ್ಟಡ ದುರಸ್ಥಿ ಕಾಮಗಾರಿಗಳು ಅರ್ಥಕ್ಕೆ ನಿಂತಿವೆ, ನರೇಗಾ ಯೋಜನೆಯಡಿ ದುರಸ್ತಿ ಕಾಮಗಾರಿಗೆ 5 ರಿಂದ 8 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ, ಶಿಥಿಲ ಗೊಂಡಿರುವ ಅಂಗನವಾಡಿ ಕೇಂದ್ರಗಳಲ್ಲಿ ಪೂರ್ಣ ವಾಗುವಗಮನ ಹರಿಸಿ ಎಂದರು.
ಹೂಗ್ಯಂ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆ ಯಲ್ಲಿ ಕೆಲಸ ನೀಡುತ್ತಿಲ್ಲ ಎಂದು ಜಾಬ್ ಕಾರ್ಡ್ ಹೊಂದಿರುವ ಮಹಿಳೆಯರು ಅಸಮಾಧಾನ ಹೊರ ಹಾಕಿದ್ದಾರೆ, ಈ ಬಗ್ಗೆ ಗಮನಕ್ಕೆ ಬಂದಿದ್ದು ಕೂಲಿಕಾರ್ಮಿಕರಿಗೆ ಕೆಲಸ ನೀಡಬೇಕು. ಗ್ರಾಮದಲ್ಲಿ ಚರಂಡಿಗಳು ತೆಗೆಸಿ ಸ್ವಚ್ಛತೆ ಕಾಪಾಡಬೇಕು. ನೀರಿನ ಸಮಸ್ಯೆ ತಲೆದೋರಿದಂತೆ ನೋಡಿಕೊಳ್ಳಬೇಕು. 3 ತಿಂಗಳ ಅವಧಿಯೊಳಗೆ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣ ಗೊಳ್ಳಬೇಕು, ಪ್ರತಿ ಮನೆಗೂ ಶೌಚಾಲಯ ನಿರ್ಮಾಣ ಅಗತ್ಯವಾಗಿದೆ.
ಬರಗಾಲಕುಡಿಯುವ ನೀರು ಸ್ವಚ್ಛತೆ ಬಗ್ಗೆ ಸಮಯ ಹೆಚ್ಚಿನ ಗಮಹರಿಸ ಬೇಕು, ಹೌಸಿಂಗ್ ಈ ಸ್ವತ್ತು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗದಂತೆ ಸಮಸ್ಯೆಗಳನ್ನು ಬಗೆ ಹರಿಸಬೇಕು ಎಂದು ತಾಕಿತು ಮಾಡಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ ನರೇಗಾದಲ್ಲಿ 100ದಿನ, ಸಮಸ್ಯೆ ಯಾಗದಂತೆ 400 ಜನ ಕೆಲಸ ಮಾಡಬೇಕು ಸಮಸ್ಯೆ ಗಳಿದ್ದರೆ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು, ಅರಣ್ಯ ಹಾಗೂ ರೇಷ್ಮ ಇಲಾಖೆ ಯಲ್ಲಿ ಹನೂರು ಮಾದರಿಯಾಗಬೇಕು ಎಂದು ಸಮಸ್ಯೆ ಗಳನ್ನು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಮಸ್ಯೆಗಳಿದ್ದರೆ ಆದಷ್ಟು ಬೇಗ ಸಮಸ್ಯೆ ಗಳನ್ನು ಬಗೆಹರಿಸಬೇಕು.
ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆಗಳು ಕಂಡು ಬಂದಲ್ಲಿ ಅಧಿಕಾರಿಗಳೇ ಹೊಣೆ ಯಾಗಿರುತ್ತಾರೆ, ಓವರ್ ಹೆಡ್ ಟ್ಯಾಂಕ್ ನಿಂದ ಮಧುವನಹಳ್ಳಿ, ಗ್ರಾಮ ಪಂಚಾಯತಿ ಗಳಲ್ಲಿ ಪೈ ಲೈನ್ ಸ್ವಚ್ಛತೆ ಸೇರಿದಂತೆ ಮುಂಜಾಗೃತ ಕ್ರಮ ಗಳನ್ನು ಅನುಸರಿಸಿ, ತೊಂಬೆಗಳನ್ನು ಸೂಚಿಗೊಳಿಸಿ ಕಡ್ಡಾಯವಾಗಿ ಅಧಿಕಾರಿಗಳು ಗಮನಹರಿಸಬೇಕು,
ಬೆಳೆ ಸಮೀಕ್ಷೆಯನ್ನು ಆದಷ್ಟು ಬೇಗ ಪೂರ್ಣ ಗೊಳಿಸಿಬೇಕು. ಸಮಸ್ಯೆ ಇದೆ ಆದ್ದರಿಂದ ಗ್ರಾಮ ಲೆಕ್ಕಧಿಕಾರಿಗಳು ಹೆಚ್ಚಿನ ಗಮನಹರಿಸಿ ಸಮಸ್ಯೆ ಬಗೆಹರಿಸಿ, ಮೂರು ತಿಂಗಳಲ್ಲಿ ಕಂದಾಯ ಇಲಾಖೆ ಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.