ಹಳ್ಳದಮಾದಹಳ್ಳಿ ಗೇಟ್ ಬಳಿ ಅಪಘಾತ: ಪೆÇಲೀಸ್ ಗಸ್ತು ವಾಹನ ಜಖಂ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.20- ಓವರ್ ಟೇಕ್ ಮಾಡುವ ಭರದಲ್ಲಿ ಹೈವೇ ಗಸ್ತು ವಾಹನವೂ ಸೇರಿದಂತೆ ಎರಡು ವಾಹನಗಳಿಗೆ ಕಾರು ಡಿಕ್ಕಿಯಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಹಳ್ಳದಮಾದಹಳ್ಳಿ ಗೇಟ್ ಬಳಿ ನಡೆದಿದೆ.
ಕೇರಳ ಮೂಲದ ಕಾರು ಓವರ್ ಟೇಕ್ ಮಾಡುವ ವೇಳೆ ಎದುರಿನಿಂದ ಬಂದ ವಾಹನಕ್ಕೆ ಡಿಕ್ಕಿ ತಪ್ಪಿಸಲು ಏಕಾಏಕಿ ಎಡಕ್ಕೆ ತಿರುಗಿಸಿದಾಗ ಎಡ ಭಾಗದಲ್ಲಿ ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ತಿರುಗಿ ಹಿಂದಿನಿಂದ ಬರುತ್ತಿದ್ದ ಗಸ್ತು ವಾಹನಕ್ಕೂ ಡಿಕ್ಕಿಯಾಗಿದೆ.ಅಪಘಾತದಲ್ಲಿ ಅದೃಷ್ಟವಶಾತ್ ಯಾರಿಗೂ ಅಪಾಯ ಸಂಭವಿಸಿಲ್ಲ ಆದರೆ ವಾಹನಗಳು ಜಖಂ ಆಗಿದೆ.