ವಿದ್ಯಾರ್ಥಿಗಳು ಗಿಡ ನೆಟ್ಟು ಬೆಳೆಸುವ ಗುಣವನ್ನು ಬೆಳೆಸಿಕೊಳ್ಳಬೇಕು ಸಾಲು ಮರದ ತಿಮ್ಮಕ್ಕ ಮಾದರಿ
ಸಂಜೆವಾಣಿ ವಾರ್ತೆ
ಹನೂರು ಜೂ 20 :- ವಿಧ್ಯಾರ್ಥಿಗಳು ಗಿಡ ನೆಟ್ಟು ಬೆಳೆಸುವ ಗುಣವನ್ನು ಬೆಳೆಸಿಕೊಳ್ಳಬೇಕು ಇದರಿಂದ ಪ್ರಕೃತಿ ಪರಿಸರ ಸಂರಕ್ಷಣೆಗೆ ತಮ್ಮದೇಯಾದ ಕೊಡುಗೆಯನ್ನು ನೀಡುವ ಮೂಲಕ ನಮ್ಮ ಸುತ್ತಮುತ್ತಲಿನ ಪರಿಸರ ಕಾಪಾಡಬೇಕು ಎಂದು ಕೊಳ್ಳೆಗಾಲ ಪ್ರಧಾನ ಸಿವಿಲ್ ನ್ಯಾಯಾಧೀಶರು ಎಂಎಸ್ ನಂದಿನಿ ಅವರು ತಿಳಿಸಿದರು.
ತಾಲೂಕಿನ ಬಸಪ್ಪನದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 10 ಸಾವಿರ ಗಿಡ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯ ಊಟ, ನೀರು ಇಲ್ಲದೆ ಬದುಕಬಹುದು ಆದರೆ ಪರಿಸರದಿಂದ ಸಿಗುವ ಆಮ್ಲಜನಕ (ಗಾಳಿ )ಇಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ.
ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ರಸ್ತೆಯಲ ಪಕ್ಕದಲ್ಲಿ ಗಿಡಗಳನ್ನ ನೆಟ್ಟು, ಮಗುವಂತೆ ಸಾಕಿ ಮರವಾಗಿ ಬೆಳಿಸಿದ ಪರಿಸರದ ಪ್ರತಿನಿಧಿ ಸಾಲುಮರದ ತಿಮ್ಮಕ್ಕ ನಮಗೆಲ್ಲರಿಗೂ ಮಾದರಿ. ಅವರನ್ನ ನೋಡಿ ನಾವು ಕೂಡ ಗಿಡ ಮರಗಳನ್ನ ಬೆಳೆಸಬೇಕು.
ಮನುಷ್ಯರು ಊಟ ನೀರಿಲ್ಲದೆ ಒಂದೆರಡು ದಿನ ಬದುಕಬಹುದು ಆದರೆ ಗಾಳಿ ಇಲ್ಲದೆ ಬದುಕಲು ಸಾಧ್ಯವಿಲ್ಲ. ಪರಿಸರದಿಂದ ಸಿಗುವ ಆಮ್ಲಜನಕ ಪಡೆಯಲು ಪ್ರಕೃತಿ ಪರಿಸರವನ್ನು ಉಳಿಸಬೇಕು ಗಿಡ ನೆಟ್ಟು ಮರ ವಾಗುವಂತೆ ನೋಡಿಕೊಳ್ಳಬೇಕು. ಕಳೆದ ಕೊರೋನಾ ಸಂದರ್ಭದಲ್ಲಿ ಆಮ್ಲಜನಕವಿಲ್ಲದೆ ಎಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ ಅದನ್ನು ಗಮನದಲ್ಲಿಟಕೊಂಡು ಪರಿಸರ ಬೆಳೆಸಿದರೆ ನಮಗೆ ಬೇಕಾದ ಆಮ್ಲಜನಕ ಸಿಗುತ್ತದೆ ಎಂದು ಸಲಹೆ ನೀಡಿದರು.
ಬಸಪ್ಪನ ದೊಡ್ಡಿ ಗ್ರಾಮದ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಕೊಳ್ಳೇಗಾಲ, ಅರಣ್ಯ ಇಲಾಖೆ, ಪೆÇಲೀಸ್ ಇಲಾಖೆ, ಗ್ರಾ. ಪಂ ಸೂಳೆರಿಪಾಳ್ಯ, ಹೋಲಿಕ್ರಾಸ್, ಸಿ ಆರ್ ಹೆಚ್ ಪಿ ಇವರ ಸಹಯೋಗದೊಂದಿಗೆ ಕರ್ನಾಟಕ ಸರ್ಕಾರ ಸಸ್ಯ ಶಾಮಲ ಯೋಜನೆ ಮತ್ತು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹತ್ತು ಸಾವಿರ ಗಿಡ ನೆಡುವ ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭದಲ್ಲಿ ಎಸ್.ಟಿ.ಎಂ.ಸಿ ಅಧ್ಯಕ್ಷ ಮಲ್ಲೇಶ್, ರಾಮಾಪುರ ಪೆÇಲೀಸ್ ಠಾಣೆ ಇನ್ಸ್ಪೆಕ್ಟರ್ ಮನೋಜ್ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಸಿ ರವಿ, ಕಾರ್ಯದರ್ಶಿ ಮಹೇಶ್, ಹಿರಿಯ ವಕೀಲ ನಾಗರಾಜು, ವಕೀಲ ಅಶೋಕ್ ಕುಮಾರ್, ವಲಯ ಅರಣ್ಯಧಿಕಾರಿ ಪ್ರವೀಣ್ ಕುಮಾರ್, ಮುಖ್ಯ ಶಿಕ್ಷಕ ವೀರಪ್ಪ, ಹೋಲಿಕ್ರಾಸ್ ಸಂಯೋಜಕ ಅಜ್ಜೀಪುರ ಸುರೇಶ್, ರೈತ ಸಂಘದ ಅಧ್ಯಕ್ಷ ಅಮ್ಜದ್ ಖಾನ್, ರಫೀಕ್, ಶ್ರೀಕಂಠ ಸ್ವಾಮಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇನ್ನಿತರರು ಹಾಜರಿದ್ದರು.