ಎರಡ್ಮೂರು ತಿಂಗಳಿಗೊಮ್ಮೆಯಾದರೂ ಆರೋಗ್ಯ ತಪಾಸಣೆ ಮಾಡಿಸಲು ಸಲಹೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೧೯; ರೋಟರಿ ಸಂಸ್ಥೆ ಇನ್ನರ್ ವ್ಹೀಲ್ ಸಂಸ್ಥೆ ವಿದ್ಯಾನಗರ, ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ,ಪ್ರೀತಿ ಆರೈಕೆ ಟ್ರಸ್ಟ್ ದಾವಣಗೆರೆ ಮತ್ತು ಆರೋಗ್ಯಧಾಮ ಹೂವಿನಹಡಗಲಿ ಸಹಯೋಗದಲ್ಲಿ  ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅತ್ತಿಗೆರೆಯಲ್ಲಿ ನೆರವೇರಿಸಲಾಯಿತು ನೂರಾರು ರೋಗಿಗಳು ಶಿಬಿರದಲ್ಲಿ ಭಾಗವಹಿಸಿ ಯಶಸ್ವಿಯಾಗಿ ಆರೋಗ್ಯದ ಬಗ್ಗೆ ಅರಿವನ್ನು ಮೂಡಿಸಿಕೊಂಡರು ಈ ಸಮಯದಲ್ಲಿ ಟ್ರಸ್ಟಿ ನ ಗೌರವಾಧ್ಯಕ್ಷರಾದ ಮಾಜಿ ಶಾಸಕ ಗುರುಸಿದ್ದನಗೌಡ್ರು  ಹಾಗೂ ಕಾರ್ಯದರ್ಶಿಗಳಾದ ಡಾ. ಟಿ ಜಿ ರವಿಕುಮಾರ್  ಉಪಸ್ಥಿತರಿದ್ದರು ಮುಖ್ಯ ಅತಿಥಿಗಳಾಗಿ ಡಾ. ಡಿ ನಾಗರಾಜ್, ಮಹೇಶ್ ಕೆಓ ಗ್ರಾಮ ಪಂಚಾಯತಿ ಅಧ್ಯಕ್ಷರು ಅತ್ತಿಗೆರೆ ಶ್ರೀಮತಿ ಲತಾ ಮಂಜುನಾಥ್ ಉಪಾಧ್ಯಕ್ಷರು ಅತ್ತಿಗೆರೆ ಗ್ರಾಮ ಪಂಚಾಯಿತಿ ಕಲ್ಲೇಶ್ ಬಿ ಸಿ ಎಸ್ ಡಿ ಎಮ್ ಸಿ ಅಧ್ಯಕ್ಷರು ಅತ್ತಿಗೆರೆ ಶಿಬಿರದ ಅಧ್ಯಕ್ಷತೆಯನ್ನು ಪಿ ಎಚ್ ಎಫ್ ರೋ. ಕಲ್ಲಪ್ಪ ಎಚ್ ಕೆ  ವಹಿಸಿಕೊಂಡಿದ್ದರು ಇನ್ನರ್ ವ್ಹೀಲ್ ಸಂಸ್ಥೆ ಯ ಮಂಜುಳಾ ಕರ್ಚಗಿ, ಶೋಭಾ ಎಂ,ಕೆ ಉಪಸ್ಥಿತರಿದ್ದರು