ಅಧಿಕಾರಿಗಳು ಬೇಜವಾಬ್ದಾರಿತನ ಮರೆತು ಚುರುಕಾಗಿ ಕೆಲಸ ಮಾಡಬೇಕು
ಸಂಜೆವಾಣಿ ವಾರ್ತೆ
ಜಗಳೂರು.ಜೂ.೧೯ :- ತಾಲೂಕಿನಲ್ಲಿ ಇನ್ನು ಮುಂದೆ ಅಧಿಕಾರಿಗಳು ಬೇಜವಾಬ್ದಾರಿತನ ಮರೆತು ಚುರುಕಾಗಿ ಕೆಲಸ ಮಾಡಲು ಮುಂದಾಗಬೇಕು ಎಂದು ಶಾಸಕ ದೇವೇಂದ್ರಪ್ಪ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು ತಾಲೂಕಿನ 57 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು ಈಗಾಗಲೇ ಪ್ರಾಯೋಗಿಕವಾಗಿ 16 ಕೆರೆಗಳಿಗೆ ನಿನ್ನೆ ಟ್ರಯಲ್ ರನ್ನ್ ನೀರು ಹರಿಸಲಾಗಿದೆ ಇನ್ನುಳಿದಂತೆ ಬಗ್ಗೆನಹಳ್ಳಿ ಬಳಿ ಆರು ಪೈಪ್‌ಕಾಮಗಾರಿ ಮಾತ್ರ ಬಾಕಿ ಉಳಿದಿದ್ದು, ಕಾಮಗಾರಿ ಪೂರ್ಣಗೊಂಡರೆ ಜಗಳೂರು ಕೆರೆಗೆ ನೀರು ಬರುತ್ತದೆ ಜಗಳೂರು ಕೆರೆಗೆ ನೀರು ಬಂದರೆ 36 ಕೆರೆಗಳಿಗೆ ನೀರು ಬರುತ್ತದೆ ನಂತರ ಅಂತವಾಗಿ ಇನ್ನುಳಿದ ಕೆರೆಗಳಿಗೆ ಅಂತಂತವಾಗಿ ನೀರು ಬಿಡಲಾಗುವುದು ಎಂದು ಭರವಸೆ ನೀಡಿದರು.ತಾಲೂಕಿನಲ್ಲಿ 160 ಹಳ್ಳಿಗಳಿಗೆ 400 ಕೋಟಿ ವೆಚ್ಚದಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಾಗಿತ್ತಿರುವುದು ತಾಲೂಕಿನ ಜನತೆ ಸಂತಸ ಪಡವ ವಿಚಾರ ಈ ಯೋಜನೆಗ ಳಿಂದ ತುಂಬಾ ಅನುಕೂಲವಾಗಲಿದೆ ಎಂದು ಸಂತಸ ವ್ಯಕ್ತ ಪಡಿಸಿದರು.