ಯೋಗದಿಂದ ಆರೋಗ್ಯ ..ಯೋಗದಿಂದ ಸದೃಢತೆ…..
ಜೂನ್ 21 ಅವಿಸ್ಮರಣೀಯ ದಿನ. ಅಂದು ಇಡೀ ಜಗತ್ತು ಯೋಗಮಯವಾಗುತ್ತದೆ. ವಿಶ್ವಸಂಸ್ಥೆಯು 11.12.2014 ರಂದು ನಡೆದ ಸಾಮಾನ್ಯ ಸಭೆಯಲ್ಲಿ ‘ಅಂತರಾಷ್ಟಿçಯ ಯೋಗ ದಿನ’ವನ್ನು ಜೂನ್ 21 ರಂದು ಅಚರಿಸಬೇಕೆಂದು ತೀರ್ಮಾನಿಸಲಾಯಿತು. ಅಂದಿನಿAದ ಪ್ರತಿವರ್ಷ ಜೂನ್ 21 ರಂದು ಜಾಗತಿಕ ಮಟ್ಟದಲ್ಲಿ ಅಂತರಾಷ್ಟಿçಯ ಯೋಗದಿನವೆಂದು ಆಚರಿಸಲಾಗುತ್ತದೆ. ಜೂನ್ 21 ‘ಗ್ರೀಷ್ಮ ಸಂಕ್ರಾAತಿ’ಯ ದಿನ, ಸೂರ್ಯ ಉತ್ತರದಿಕ್ಕಿನಿಂದ ಪೂರ್ವ ದಿಕ್ಕಿಗೆ ಚಲಿಸುವ ಸಮಯ. ಈ ಕಾರ್ಯಸಾಧನೆಯಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರೇರಣೆ ಬಹಳ ಮುಖ್ಯವಾದುದು. 175 ರಾಷ್ಟçಗಳು ಯೋಗ ದಿನಕ್ಕೆ ತಮ್ಮ ಸಹಮತಿಯನ್ನು ಸೂಚಿಸಿವೆ. ೆÉ. ಯೋಗ ದಿನಾಚರಣೆಗೆ ಕೇಂದ್ರ ಸರ್ಕಾರ, ಆಯುಷ್ ಮಂತ್ರಾಲಯ, ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮತ್ತು ಅನೇಕ ಸಂಘ ಸಂಸ್ಥೆಗಳು ಕೈ ಜೋಡಿಸಿವೆ. ಭಾರತ ತಪೋಭೂಮಿ, ಯೋಗಿಗಳ ತಾಣ, ಆಧ್ಯಾತ್ಮದಲ್ಲಿ ವಿಶ್ವದ ದಾರಿದೀಪವೆಂದು ಪ್ರಸಿದ್ಧವಾಗಿದೆ. ಯೋಗ’ ಎನ್ನುವ ಶಬ್ದದ ಉಗಮ ಸಂಸ್ಕೃತದ “ಯುಜ್”ನಿಂದ ಆಗಿದೆ. “ಯುಜ್” ಎಂದರೆ ಜೋಡಿಸು, ಕೂಡಿಸು, ಸಂಬAಧಿಸು. ಪತಂಜಲಿ ಮಹರ್ಷಿಗಳ ಪ್ರಕಾರ ‘ಯೋಗಃಚಿತ್ತವೃತ್ತಿ ನಿರೋಧಃ’ ಯೋಗವೆಂದರೆ ಮನಸ್ಸಿನ ಚಂಚಲ ವೃತ್ತಿಗಳನ್ನು ನಿರೋಧಿಸುವುದು.” ವಸಿಷ್ಠ ಮಹರ್ಷಿಗಳು “ಮನ: ಪ್ರಶಮನೋಪಾಯಃ ಯೋಗಃ ಇತಿ ಅಭಿಧೀಯತೆ” ಮನಸ್ಸನ್ನು ಪ್ರಶಾಂತಗೊಳಿಸುವ ಸುಂದರ ಉಪಾಯವೇ ಯೋಗವೆಂದು ಹೇಳಿದ್ದಾರೆ. “ಯೋಗಃ ಸಮತ್ವಂ ಉಚ್ಚತೇ’ ಯೋಗವೆಂದರೆ ಕಾರ್ಯವ್ಯವಹಾರದಲ್ಲಿ ಸಮಭಾವ, ಸಮಚಿತ್ತವಾಗಿರುವುದು. ಸ್ತುತಿ-ನಿಂದನೆÉ, ಮಾನ-ಅಪಮಾನ, ಸುಖ-ದುಃಖ, ನೋವು-ನಲಿವು ಇತರೆ ಪರಿಸ್ಥಿತಿಗಳಲ್ಲಿ ಸಮಭಾವವನ್ನು ಹೊಂದುವುದೇ ಯೋಗವೆಂದು ಭಗವದ್‌ಗೀತೆ ಹೇಳುತ್ತದೆ.ಯೋಗವೆಂದರೆ ಕೆಲವರು ಪ್ರಾಣಾಯಾಮ ಅಥವಾ ಯೋಗಾಸನವೆಂದು ತಿಳಿದಿದ್ದಾರೆ. ಆದರೆ ಯೋಗವು ಆತ್ಮನ ಚಂಚಲ ಮನಸ್ಸನ್ನು ಏಕಾಗ್ರಗೊಳಿಸಬಲ್ಲ ಮನೋವ್ಯಾಯಾಮವಾಗಿದೆ. ಅದೇನೇ ಇರಲಿ ಯೋಗವೆಂದರೆ ಸರ್ವ ಮನೋವೃತ್ತಿಗಳ ಮೇಲೆ ಪ್ರಭುತ್ವವನ್ನು ಸ್ಥಾಪಿಸುವುದು.ವರ್ತಮಾನ ಸಮಯದಲ್ಲಿ ಯೋಗದಲ್ಲಿ ಹಠಯೋಗ, ಸನ್ಯಾಸಯೋಗ, ಭಕ್ತಿಯೋಗ, ಕರ್ಮಯೋಗ, ಜ್ಞಾನಯೋಗ, ರಾಜಯೋಗ, ಶುಭಯೋಗ, ಲಾಭಯೋಗ, ಯೋಗಾ-ಯೋಗ ಇತ್ಯಾದಿ ಅನೇಕ ಪ್ರಕಾರಗಳು ಇವೆ.ಎಲ್ಲಾ ವಿಜ್ಞಾನಗಳಿಗಿಂತ ಭಿನ್ನವಾದ ಇನ್ನೊಂದು ವಿಜ್ಞಾನವಿದೆ. ಅದುವೇ ಯೋಗವಿಜ್ಞಾನ. ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಇದನ್ನು ಪ್ರಾಯೋಗಿಕವಾಗಿ ಕಲಿಸಲಾಗುತ್ತದೆ. ಈ ಸಂಸ್ಥೆಯ ಅಂಗಸAಸ್ಥೆಯಾದ ‘ರಾಜಯೋಗ ಶಿಕ್ಷಣ ಮತ್ತು ಸಂಶೋಧನೆ ಪ್ರತಿಷ್ಠಾನÀ’ವು ಯೋಗ-ವಿಜ್ಞಾನವನ್ನು ಪ್ರಚಾರ ಮತ್ತು ಪ್ರಸಾರ ಮಾಡುವ ಕಾರ್ಯದಲ್ಲಿ ನಿರತವಾಗಿದೆ. ಇಲ್ಲಿ ಧರ್ಮ, ಜಾತಿ, ಮತ, ವಯಸ್ಸು. ವರ್ಣ ಭೇದವಿಲ್ಲದೆ ಸರ್ವರಿಗೂ ಯೋಗ ಶಿಕ್ಷಣವನ್ನು ಉಚಿತವಾಗಿ ಕಲಿಸಲಾಗುತ್ತದೆ. ಈ ಯೋಗವಿಜ್ಞಾನವು ಮನಸ್ಸು, ಬುದ್ಧಿ, ಸಂಸ್ಕಾರ, ಸ್ವಭಾವ, ವ್ಯವಹಾರ ಚಾರಿತ್ರö್ಯ ಇತ್ಯಾದಿಗಳಿಗೆ ಸಂಬAಧಿಸಿದೆ. ಇಲ್ಲಿ ಆತ್ಮ ಮತ್ತು ಪರಮಾತ್ಮನ ನಡುವೆ ಸರ್ವಪ್ರಕಾರದ ಸಂಬAಧವು ಹೇಗೆ ಜೋಡಿಸಬೇಕು ಎಂಬುದನ್ನು ತಿಳಿಸಲಾಗುತ್ತದೆ. ಈ ಸಂಬAಧಗಳಲ್ಲಿ ತಂದೆ, ಶಿಕ್ಷಕ, ಗುರುವಿನ ಸಂಬAಧ ಅತಿ ಮುಖ್ಯ. ಆತ್ಮನಾಗಿ ಪರಮಾತ್ಮನ ಜೊತೆ ಮನನ, ಚಿಂತನೆ, ಮಿಲನ ಮಾಡಿದಾಗ ಯೋಗಿಯು ಮಗ್ನಾವಸ್ಥೆಯನ್ನು ತಲುಪುತ್ತಾನೆ. ಸ್ವಯಂ ಪರಮಾತ್ಮನೇ ಕಲಿಸುವ ರಾಜಯೋಗವು ಅತ್ಯಂತ ಸರಳ ಹಾಗೂ ಸಹಜ. ಇದರಲ್ಲಿ ಮಾನವನ ಪ್ರವೃತ್ತಿಗಳ ಪರಿವರ್ತನೆ ಮತ್ತು ಶುದ್ಧೀಕರಣವಾಗಿ ಅವನ ಆಹಾರ-ವ್ಯವಹಾರಗಳು ಸುಧಾರಣೆಗೊಂಡು ಸಂಸ್ಕಾರಗಳು ಸತೋಪ್ರಧಾನವಾಗುತ್ತವೆ. ಹಾಗಾಗಿ ಸಾಮಾನ್ಯ ಮಾನವನು ದೇವ-ಮಾನವನಾಗುತ್ತಾನೆ. ಯೋಗವೆಂಬ ಈ ವಿಜ್ಞಾನವು ಮನುಷ್ಯನ ಉದ್ವೇಗಗಳನ್ನು ನಿಯಂತ್ರಿಸುತ್ತದೆ. ಅವನ ವಿಚಾರಗಳನ್ನು ವ್ಯವಸ್ಥಿತ ಹಾಗೂ ಸರಳಿತಗೊಳಿಸುತ್ತದೆ. ಈ ವಿಜ್ಞಾನದಿಂದ ವ್ಯಕ್ತಿಯ ಮಾನಸಿಕ ಏಕಾಗ್ರತಾ ಶಕ್ತಿಯು ಹೆಚ್ಚುತ್ತದೆ. ಅಪಾರ ಶಾಂತಿಯ ಅನುಭವ ಆಗುತ್ತದೆ. ಪರಮಾತ್ಮನ ದಿವ್ಯಗುಣಗಳಾದ ಶಾಂತಿ, ಪವಿತ್ರತೆ, ಆನಂದ, ದಯಾ, ಸುಖ, ಪ್ರೇಮ ಇತರೆ ದಿವ್ಯಗುಣಗಳ ಅನುಭವ ಆಗುತ್ತದೆ. ಅವನ ವರ್ತನೆಯಲ್ಲಿ ಪರಿವರ್ತನೆಯಾಗಿ ಮನಸ್ತಾಪ, ಈರ್ಷೆ-ದ್ವೇಷ, ಕ್ರೋಧ ಇತರೆ ವಿಕಾರಿಗುಣಗಳು ದೂರವಾಗುತ್ತವೆ. ಅವನ ಮನಸ್ಸಿನಲ್ಲ್ಲಿ ಉದ್ವೇಗಗಳ ಜ್ವಾಲಾಮುಖಿ ಸ್ಫೋಟಗೊಳ್ಳುವುದಿಲ್ಲ. ಮಾನಸಿಕ ಚಿಂತೆ ಇರುವುದಿಲ್ಲ.