ನಟ ದರ್ಶನ್ ಫಾರಂಹೌಸ್ ಕೆಲಸಗಾರನಿಗೆ ಆರ್ಥಿಕ‌ನೆರವು
ಸಂಜೆವಾಣಿ ವಾರ್ತೆ
ದಾವಣಗೆರೆ. ಜೂ.೧೮; ಚಿತ್ರನಟ ದರ್ಶನ್ ಅವರ ಚಾಮರಾಜನಗರ ಫಾರಂ ನಲ್ಲಿ‌ ಕೆಲಸ ಮಾಡುತ್ತಿದ್ದ ಮಹೇಶ್ ಎಂಬ ವ್ಯಕ್ತಿಗೆ ಎತ್ತು ತಿವಿದಿದ್ದು ಆತ ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದಾರೆ ಆತ ಕಷ್ಟ ನೋಡಿ ದಾವಣಗೆರೆಯ ರೈತಮುಖಂಡರಾದ ನಾಗೇಶ್ವರ ರಾವ್ ಹಾಗೂ ಸ್ನೆಹಿತರು ೨೫ ಸಾವಿರ ರೂ ಗಳನ್ನು‌ಮಹೇಶ್ ಅವರ ಖಾತೆಗೆ ಹಾಕಿದ್ದಾರೆ.ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ‌ ನಾಗೇಶ್ವರ ರಾವ್ ಮಾತನಾಡಿ ಇತ್ತೀಚೆಗೆ ನಟ ದರ್ಶನ್ ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ನೋಡುವಾಗ  ಚಾಮರಾಜ‌ನಗರ ಫಾರಂ ಹೌಸ್ ನಲ್ಲಿ‌ ಕೆಲಸ ಮಾಡುತ್ತಿದ್ದ ಮಹೇಶ್ ಎಂಬಾತನಿಗೆ ಆಗಿರುವ ಅನ್ಯಾಯದ ಬಗ್ಗೆ ತೀವ್ರ ನೋವುಂಟಾಯಿತು.ಎತ್ತು ತಿವಿದ ಪರಿಣಾಮ ಮಹೇಶ್ ಹಾಸಿಗೆ ಹಿಡಿದಿದ್ದಾರೆ.ಚಿಕಿತ್ಸೆಗೆ ಸಹಾಯ‌ ಕೇಳಿದರೆ ನಟ ದರ್ಶನ್ ನಾಯಿಗಳನ್ನು ಬಿಟ್ಟು‌ಹಲ್ಲೆ ಮಾಡಿಸಿದ್ದಾರೆ ಇದು‌ ಖಂಡನೀಯ.ದರ್ಶನ್ ಅಭಿಮಾನಿಗಳು ಎಲ್ಲೆಡೆ ಇದ್ದಾರೆ ಒಬ್ಬೊಬ್ಬರು ಒಂದು ರೂಪಾಯಿ ಕೊಟ್ಟರು ಮಹೇಶ್ ಚಿಕಿತ್ಸೆಗೆ ಕೋಟಿ ರೂಪಾಯಿ ಆಗುತ್ತದೆ ಆದ್ದರಿಂದ ‌ಅಭಿಮಾನಿಗಳು‌ ನೆರವು ನೀಡಬೇಕು‌ ಎಂದರು.ಮಹೇಶ್ ಚಿಕಿತ್ಸೆಗೆ ನಾಗೇಶ್ವರರಾವ್ ೧೩,೫೦೦,ಹದಡಿಚಂದ್ರಪ್ಪ ೧೦ ಸಾವಿರ,ಪುಟ್ಟರಾಜು ೩,೫೦೦ ರೂ‌ ನಂತೆ ಒಟ್ಟು ೨೫ ಸಾವಿರ ರೂ ಮಹೇಶ್ ಖಾತೆಗೆ ಹಾಕಿದ್ದೇವೆ ಎಂದರು.ಸುದ್ದಿಗೋಷ್ಠಿಯಲ್ಲಿ ಎಂ.ಎನ್ ಚಂದ್ರಶೇಖರ್,ಪುಟ್ಟರಾಜು ಉಪಸ್ಥಿತರಿದ್ದರು.