ರಾಜ್ಯದ ಅಭಿವೃದ್ಧಿಗೆ ತೈಲದರ ಏರಿಕೆ; ಡಿಬಿ ಸಮರ್ಥನೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.19: ಮೋದಿಗಾಗಿ 1 ಸಾವಿರ ರೂಪಾಯಿ ಆದರೂ ಪರವಾಗಿಲ್ಲ ಪೆಟ್ರೋಲ್ ಹಾಕುಸುತ್ತೇವೆ ಅನ್ನುತ್ತಿದ್ದ ಬಿಜೆಪಿಗರು ಈಗ ರಾಜ್ಯದ ಅಭಿವೃದ್ಧಿಗಾಗಿ 3 ರೂಪಾಯಿ ಹೆಚ್ಚಿಗೆ ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಒಂದು ಸುಳ್ಳನ್ನ ಹತ್ತಾರು ಸಲ ಹೇಳಿ ಅದನ್ನ ಸತ್ಯವನ್ನಾಗಿ ಬದಲಿಸುವ ಶಕ್ತಿ ಇರುವುದು ಬಿಜೆಪಿಗೆ ಮಾತ್ರ. ಇವರ ನಿಜ ರೂಪ ಅರಿತ ದೇಶದ ಜನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. ಇನ್ನೇನು ಸರ್ವಾಧಿಕಾರಿ ಆಳ್ವಿಕೆ ಬರುತ್ತದೆ ಎಂಬುದನ್ನ ಅರಿತ ಜನ ಬಿಜೆಪಿಗೆ ಪಾಠ ಕಲಿಸಿ ಅಧಿಕಾರದಿಂದ ದೂರ ಇಟ್ಟಿದ್ದಾರೆ ಎಂದರು. ಆದರೆ ಲಕ್ಷಾಂತರ ರೂಪಾಯಿ ವೆಚ್ಚದ ಸೂಟ್ ಕೋಟ್ ಹಾಕಿಕೊಂಡು ಸುತ್ತಾಡುವುದು ಹಾಗೂ ನರೇಂದ್ರ ಮೋದಿ ಅವರಿಗೆ ಅಧಿಕಾರ ಇಲ್ಲದೇ ಇರುವುದೇ ಕಷ್ಟ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. 30 ರೂಪಾಯಿ ಹೆಚ್ಚಾ ಅಥವಾ ಮೂರು ರೂಪಾಯಿ ಹೆಚ್ಚಾ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ 70 ರೂಪಾಯಿ ಯಿಂದ ಒಂದು ನೂರು ರೂಪಾಯಿಗೆ ಪೆಟ್ರೋಲ್ ದರ ಏರಿಕೆ ಮಾಡಿದರೂ ಬಿಜೆಪಿಯವರು ಪ್ರತಿಭಟನೆ ಮಾಡಲೇ ಇಲ್ಲಾ. ರಾಜ್ಯದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ರೂಪಾಯಿ ತೆರಿಗೆ ಜಾಸ್ತಿ ಮಾಡಿದ ತಕ್ಷಣ ಬೀದಿಗಳಿದು ಹೋರಾಟ ಶುರು ಮಾಡಿದ್ದಾರೆ ಎಂದು ಕಿಡಿಕಾರಿದರು.ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದೆ ಬಿಜೆಪಿ. ವಿಶೇಷವಾಗಿ ಬೆಂಗಳೂರಿನಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆಯಿಂದ ಸಾರ್ವಜನಿಕರು ಎಷ್ಟು ತೊಂದರೆ ಅನುಭವಿಸಿದ್ದಾರೆ. ಇದೇ 2022ರಲ್ಲಿ ಬಿಜೆಪಿ ಸರ್ಕಾರದ ದುರಾಡಳಿತ ಖಂಡಿಸಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದರು.ಈ ವಿಚಾರ ಹೈಕೋರ್ಟಗೆ ಹೋಗಿತ್ತು. ಹೈಕೋರ್ಟ ಸಿದ್ದರಾಮಯ್ಯ ಅವರಿಗೆ 10 ಸಾವಿರ ರೂಪಾಯಿ ದಂಡ ಹಾಕಿತ್ತು. ಇದರ ವಿರುದ್ಧ ಸಿದ್ಧರಾಮಯ್ಯ ಅವರು ಸುಪ್ರೀಂ ಕೋರ್ಟ್ ಗೆ ಮೊರೆ ಹೋದ್ರು. ಅಲ್ಲಿ ಕೇಸ್ ರದ್ದಾಯಿತು. ಆದ್ರೆ ನಿನ್ನೆ ಬಿಜೆಪಿಯವರು ಬೆಂಗಳೂರಿನಲ್ಲಿ ಮಾಡಿದ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ಆದ ತೊಂದರೆಗೆ ಬಿಜೆಪಿ ನಾಯಕರ ವಿರುದ್ಧ ಸೂಕ್ತ ಕ್ರಮ ಆಗಬೇಕು. ಪೊಲೀಸ್ ಹಾಗೂ ಹೈಕೋರ್ಟ್ ಸೋಮೊಟೊ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು.