ತ್ಯಾಗ,ಬಲಿದಾನದ ಪ್ರತೀಕ ಬಕ್ರೀದ್ ಹಬ್ಬ

ಸಂಜೆವಾಣಿ ವಾರ್ತೆ
ಜಗಳೂರು.ಜೂ.೧೮; ನನ್ನ ಆಡಳಿತಾವಧಿಯಲ್ಲಿ ಕ್ಷೇತ್ರದಲ್ಲಿ ಹಿಂದೂ ಮುಸ್ಲಿಂ ಶಾಂತಿ,ಸೌರ್ಹದತೆಗೆ ಆದ್ಯತೆ ನೀಡುವೆ ಎಂದು ಶಾಸಕ ಬಿ.ದೇವೇಂದ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.ಪಟ್ಟಣದ ಈದ್ಗಾ ಮೈದಾನದಲ್ಲಿ  ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ನಡೆಸಿದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಶುಭಾಷಯ ಕೋರಿ  ಮಾತನಾಡಿದರು. ತ್ಯಾಗ,ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬ ಪವಿತ್ರ ಹಬ್ಬವಾಗಿದ್ದು.ಮೌಲ್ವಿ,ಧರ್ಮಗುರುಗಳು ಬೋಧಿಸುವ ಉಪ ದೇಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು.ಪ್ರವಾದಿಗಳ ಅನುಗ್ರಹದಿಂದ ಸಕಲ ಜೀವ ರಾಶಿಗಳಿಗೂ ಒಳಿತಾಗಲಿ,ನಾಡಿ ನಲ್ಲಿ ಉತ್ತಮ ಮಳೆಬೆಳೆಯಾಗಿ ರೈತರ ಬದುಕು ಹಸನಾಗಲಿ ಎಂದು ಪ್ರಾರ್ಥಿಸಿದರು. ವೈವಿದ್ಯತೆಯಲ್ಲಿ ಏಕತೆಸಾರುವ ದೇಶದಲ್ಲಿ ಸರ್ವಧರ್ಮೀಯ ರೂ ಸೌಹಾರ್ದಯುತವಾಗಿ ಸಮೃದ್ದ ಜೀವನಸಾಗಿಸಬೇಕಿದೆ. ಹಬ್ಬ ಹರಿದಿನಗಳು ಶಾಂತಿ,ಸಾಮರಸ್ಯತೆ ಸಾರುವ ಸಂಭ್ರಮಕ್ಕೆ ಸಾಕ್ಷಿಯಾಗಬೇಕು ಎಂದು ಹೇಳಿದರು. ಕೆ.ಪಿ.ಸಿ.ಸಿ ಎಸ್.ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ,’ಭಾರತದೇಶ ಬಹುತ್ವದೇಶ.ಇಲ್ಲಿ ಮನುಷತ್ವ ಬಹಳ ದೊಡ್ಡದು.ಸಂವಿಧಾನದಲ್ಲಿ ನಂಬಿಕೆಯಿಟ್ಟು ಪರಸ್ಪರ ಪ್ರೀತಿಸಬೇಕು.ಬಕ್ರೀದ್ ಹಬ್ಬದಲ್ಲಿ ಕುರ್ಬಾನಿ ಹೆಸರಿನಲ್ಲಿ ಮುಸ್ಲಿಂ ಬಾಂಧವರು ಬಡವರೊಂದಿಗೆ ತೋರುವ ಪ್ರೀತಿ, ವಾತ್ಸಲ್ಯ,ಅನ್ಯಧರ್ಮದವರಿಗೆ ಮಾದರಿಯಾಗಿದ್ದಾರೆ.ಎಲ್ಲಾ ಧರ್ಮೀಯರನ್ನು ಗೌರವಿಸುವ ಸಹಿಷ್ಣತೆಯ ಮನೋಭಾವ, ಪ್ರತಿಯೊಬ್ಬರಲ್ಲಿ ಮೂಡಬೇಕು ಎಂದು ಮನವಿ ಮಾಡಿದರು.ಇದೇ ವೇಳೆ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಯ ಬಳಿಕ ಓರೆಗೆಯವರನ್ನು ಆಲಂಗಿಸಿ ಶುಭಾಷಯಗಳನ್ನು ವಿನಿಮಯಮಾಡಿಕೊಂಡರು. ಈ ಸಂದರ್ಭದಲ್ಲಿ ಜಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್.ಮುಸ್ಲಿಂ ಸಮಾಜದ ಮುಖಂಡರಾದ ಇಕ್ಬಾಲ್ ಅಹಮ್ಮದ್,ಖಲಂದರ್ ಖಾನ್,ಶಕೀಲ್ ಅಹಮ್ಮದ್, ಕಲಂದರ್ ಸಾಬ್. ಶಂಸುದ್ದೀನ್. ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಹಾಗೂ ಜಗಳೂರು ಬ್ಲಾಕ್ ಎಸ್ಸಿ ಘಟಕದ ಅಧ್ಯಕ್ಷ ಬಿ.ಮಹೇಶ್ವರಪ್ಪ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಎ.ಎಲ್. ತಿಪ್ಪೇಸ್ವಾಮಿ,ಸೇರಿದಂತೆ ಮುಸ್ಲಿಂಬಾಂಧವರು ಪಾಲ್ಗೊಂಡಿದ್ದರು.