ಸಮಾಜಕ್ಕೆ ಔಷಧ ತಜ್ಞರ ಕೊಡುಗೆ ಅನನ್ಯ
ಕಲಬುರಗಿ:ಸೆ.25:ನಾಗರಿಕರ ಆರೋಗ್ಯದ ಬಗ್ಗೆ ಕಾಳಜಿ ಮತ್ತು ಸುರಕ್ಷತೆ ಜೊತೆಗೆ ಔಷಧಗಳ ಬಗ್ಗೆ ಸಲಹೆ-ಸೂಚನೆಗಳನ್ನು ನೀಡುವ ಔಷಧ ತಜ್ಞರು ಆರೋಗ್ಯ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಾರೆ. ಸಮಾಜಕ್ಕೆ ಔಷಧ ತಜ್ಷರ ಕೊಡುಗೆ ಅನನ್ಯವಾಗಿದೆ ಎಂದು ನರೋಣಾ ಸಮುದಾಯ ಆರೋಗ್ಯ ಅಧಿಕಾರಿ ಶಿವಾನಂದ ತಂಬಾಕೆ ಹೇಳಿದರು.
ಆಳಂದ ಚೆಕ್ ಪೋಸ್ಟ್‍ನಲ್ಲಿರುವ ‘ಶ್ರೇಯಸ್ ಮೆಡಿಕಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಜರುಗಿದ ‘ವಿಶ್ವ ಔಷಧ ತಜ್ಞರ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕರೋನಾದ ಸಂದಿಗ್ಧ ಪರಿಸ್ಥಿಯಲ್ಲಿ ಕರೋನಾ ರೋಗಿಗಳು ಮತ್ತು ಸಾಮಾನ್ಯ ಕಾಯಿಲೆ ಬಾಧಿತರಿಗೆ ಮಾತೃವಾತ್ಸಲ್ಯ ತೋರಿ, ಅವರನ್ನು ಹತ್ತಿರದ ಯೋಗಕ್ಷೇಮ ವಿಚಾರಿಸಿ, ಸೂಕ್ತ ಔಷಧಗಳನ್ನು ಹಗಲು-ರಾತ್ರಿಯೆನ್ನದೆ ಸೇವೆ ನೀಡಿದ್ದಾರೆ.ಎಲ್ಲರೂ ಔಷಧಿ ವ್ಯಾಪಾರಿಯಾಗಲು ಸಾಧ್ಯವಿಲ್ಲ. ವೈದ್ಯರ ಚೀಟಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಸೂಕ್ತ ಔಷಧಿ ನೀಡಬೇಕು. ವೈದ್ಯರ ಚೀಟಿಯಿಲ್ಲದೆ ಯಾವುದೇ ಔಷಧಿ ನೀಡಬಾರದು ಎಂದು ತಿಳಿಸಿದರು.
ಮೆಡಿಕಲ್ಸ್ ಮುಖ್ಯಸ್ಥ ಸೋಮಶೇಖರ ಬಿ.ಮುಲಗೆ ಮಾತನಾಡಿ, ಕರೋನಾದ ಸಂದಿಗ್ಧ ಪರಿಸ್ಥಿಯಲ್ಲಿ ಕರೋನಾ ರೋಗಿಗಳು ಮತ್ತು ಸಾಮಾನ್ಯ ಕಾಯಿಲೆ ಬಾಧಿತರಿಗೆ ಮಾತೃವಾತ್ಸಲ್ಯ ತೋರಿ, ಅವರನ್ನು ಹತ್ತಿರದ ಯೋಗಕ್ಷೇಮ ವಿಚಾರಿಸಿ, ಸೂಕ್ತ ಔಷಧಗಳನ್ನು ಹಗಲು-ರಾತ್ರಿಯೆನ್ನದೆ ಫಾರ್ಮಶಿಷ್ಟಗಳು ಸೇವೆ ನೀಡಿದ್ದಾರೆ. ವೈದ್ಯರು, ಫಾರ್ಮಶಿಷ್ಟಗಳು ಹಣಗಳಿಕೆ ಉದ್ದೇಶವೇ ಪ್ರಧಾನವೆಂಬ ಜನರ ಮನೋಭಾವನೆ ಬೇಡ. ನಿರಂತರವಾಗಿ ಬಿಡುವಿಲ್ಲದ ಸೇವೆ ಅವರದಾಗಿದೆ. ಒಂದು ವೇಳೆ ಸೇವೆಯಲ್ಲಿ ವ್ಯತಯ ಉಂಟಾದರೆ ಅನೇಕ ಜನರ ಪ್ರಾಣಕ್ಕೆ ತೊಂದರೆ ಇದೆ ಎಂಬುದನ್ನು ಮರೆಯಬಾರದು ಎಂದು ಮಾರ್ಮಿಕವಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ದೈಹಿಕ ಶಿಕ್ಷಣ ಶಿಕ್ಷಕ ಶರಣು ಮಲಶೆಟ್ಟಿ, ಪ್ರಮುಖರಾದ ಆಕಾಶ ಪಟ್ನೆ, ಮಲ್ಲಿಕಾರ್ಜುನ ಸೇರಿದಂತೆ ಮತ್ತಿತರರಿದ್ದರು.