ಭಾರತ ದೇಶವು ಅಂತರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ತನ್ನದೇ ಆದ ಚಾಪು ಮೂಡಿಸಿದೆ:ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್
ಕಲಬುರಗಿ:ಸೆ.25: ಭಾರತ ದೇಶವು ಅಂತರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ತನ್ನದೇ ಆದ ಒಂದು ಚಾಪನ್ನು ಮೂಡಿಸಿದೆ ಕ್ರೀಡಾಪಟುಗಳು ಮುಂದೆ ದೇಶದಲ್ಲಿ ಕೀರ್ತಿ ತರುವಂತೆ ಬೆಳೆಯಲಿ ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಹೇಳಿದರು.
ಬುಧವಾರದಂದು ನಗುಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಕಲಬುರಗಿ ಇವರ ಸಂಯುಕ್ತಶ್ರಾಯದಲ್ಲಿ ಸಿ.ಎಂ. ದಸಾರ ಕ್ರೀಡಾಕೂಟವನ್ನು ಬಲೂನ ಹಾರಿ ಬಿಡುವ ಮೂಲಕ ಕ್ರೀಡೆ ಕೂಟಕ್ಕೆ ಚಾಲನೆ ನೀಡಿದರು.
ಈ ಕ್ರೀಡಾಕೂಟ 25 ಮತ್ತು 26ರ ವರೆಗೆ ಆಯೋಜಿಸಲಾಗಿದ್ದು, ಮಹಿಳೆಯರು ಮತ್ತು ಪುರುಷರು ಭಾಗವಹಿಸಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ. ಇಲ್ಲಿ ಬದಂತಹ ಕ್ರೀಡಾ ಪಟುಗಳು ಈ ಒಂದು ಜಿಲ್ಲಾ ಮಟ್ಟದ ಕ್ರೀಡಾಕೂಟದ ಒಳ್ಳೆಯ ರೀತಿಯಿಂದ ಪ್ರದರ್ಶಿಸಿ ಗೆದ್ದು ವಿಭಾಗಿಯ ಮಟ್ಟದಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಗೆದ್ದು ದಸರಾ ಕ್ರೀಡಾ ಕೂಟದಲ್ಲಿ ಗೆಲ್ಲಲ್ಲಿ ಎಂದು ಡಿ.ಸಿ. ಅವರು ಶುಭ ಹಾರೈಸಿದರು.
ಅದೇ ರೀತಿಯಾಗಿ ದೈಹಿಕ ಶಿಕ್ಷಕರು, ತರಬೇತಿದಾರರು ಈ ಒಂದು ಕ್ರೀಡಾಕೂಟದಲ್ಲಿ ಅವರ ಪಾತ್ರ ಮಹತ್ವದಾಗಿದ್ದು ಅವರಿಗೆ ಕೂಡ ಅಭಿನಂದನೆ ಸಲ್ಲಿಸಿದರು.
ನಾಗರಾಜ್ ಮತ್ತು ಅರುಣ ಎಂಬ ಕ್ರೀಡಾಪಟುಗಳಿಂದ ಭಂವರ ಸಿಂಗ್ ಮೀನಾ ಕ್ರೀಡಾಜ್ಯೋತಿ ಸ್ವೀಕರಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಲಬುರಗಿ ಸಹಾಯಕ ನಿರ್ದೇಶಕರು ಸುರೇಶ ಕೆ. ರಾಜ್ಯ ಸರ್ಕಾರದ ಈ ಕ್ರೀಡಕೂಟಗಳು ಯುಜನೋತ್ಸವದಲ್ಲಿ ಇರುವಂತಹ ಪ್ರತಿಭೆಯನ್ನು ಹೊರತರಲು ಸಹಕಾರ ನೀಡುತ್ತದೆ.
ಈ ಕ್ರೀಡಾಕೂಟದಲ್ಲಿ ಅಥ್ಲೇಟಿಕ್ಸ್, ಕುಸ್ತಿ, ಬಾಲ್ ಬ್ಯಾಡ್ಮಿಂಡನ್, ವಾಲಿಬಾಲ್, ಬ್ಯಾಡ್ಮಿಂಟನ್, ಯೋಗ, ಪುಟ್ಬಾಲ್, ಹಾಕಿ, ಖೊಖೋ, ಹ್ಯಾಂಡ್‍ಬಾಲ್, ಕಬ್ಬಡ್ಡಿ ಟೇಬಲ್ ಟೆನ್ನಿಸ್, ಬಾಸ್ಕೆಟ್ ಬಾಲ್, ಥ್ರೋಬಲ್ ಕ್ರೀಡೆಗಳನ್ನು ಜರುಗಲಿವೆ. ಈ ಜಿಲ್ಲಾಮಟ್ಟದಲ್ಲಿ, ವಿಭಾಗಿಯ ಮಟ್ಟದಲ್ಲಿ, ಮತ್ತು ರಾಜ್ಯಮಟ್ಟದಲ್ಲಿ, ಗೆದ್ದಂತಹ ಕ್ರೀಡಾಪಟುಗಳನ್ನು ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವರು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಕಲಬುರಗಿ ನಗರ ಡಾ|| ಶರಣಪ್ಪ ಎಸ್.ಡಿ. ಹಾಕಿ ತರಬೇತಿದಾರರು ಸಂಜೆಯ ಬಾಣದ,ತರಬೇತಿದಾರ ಪ್ರವೀಣ ಕುಮಾರ, ಪುಣೆ ಬಾಸ್ಕಿಟ್ ಬಾಲ್ ತರಬೇತಿದರಾರು ಜಿಲ್ಲೆಯ ಎಲ್ಲಾ ತಾಲ್ಲೂಕು ಕ್ರೀಡಾಪಟುಗಳು ಉಪಸ್ಥಿತರಿದ್ದರು.