ಎಸ್.ಎಂ. ಮೀನಾಕ್ಷಿ ಅವರಿಗೆ ಪಿಹೆಚ್.ಡಿ.
ಕಲಬುರಗಿ:ಸೆ.25:ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ಎಸ್.ಎಂ. ಮೀನಾಕ್ಷಿ ಅವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಿದೆ.
ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಜಯದೇವಿ ಜಂಗಮಶೆಟ್ಟಿ ಅವರ ಮಾರ್ಗದರ್ಶನದಲ್ಲಿ “ಕಲಬುರಗಿ ಜಿಲ್ಲೆಯ ಸಂಗೀತ ಪರಂಪರೆ-ಸಮಗ್ರ ಅಧ್ಯಯನ” ಕುರಿತು ಎಸ್.ಎಂ. ಮೀನಾಕ್ಷಿ ಅವರು ಪ್ರಬಂಧವನ್ನು ಮಂಡಿಸಿದ್ದರು.