ವೈದ್ಯ ವಿದ್ಯಾರ್ಥಿನಿಯರ ಲ್ಯಾಪ್‍ಟಾಪ್ ಕಳವು
ಕಲಬುರಗಿ,ಸೆ.25-ದಂತ ವೈದ್ಯ ವಿದ್ಯಾರ್ಥಿನಿಯರ ಲ್ಯಾಪ್‍ಟಾಪ್ ಕಳವಾಗಿರುವ ಘಟನೆ ನಗರದ ಎಸ್.ನಿಜಲಿಂಗಪ್ಪ ದಂತ ಮಹಾವಿದ್ಯಾಲಯದಲ್ಲಿ ನಡೆದಿದೆ.
ಎಸ್.ನಿಜಲಿಂಗಪ್ಪ ದಂತ ಮಹಾವಿದ್ಯಾಲಯದಲ್ಲಿ 3ನೇ ವರ್ಷದಲ್ಲಿ ಓದುತ್ತಿರುವ ಡಾ.ಸ್ನೇಹಾ ಕಲ್ಯಾಣಕರ್ ಅವರ 45 ಸಾವಿರ ರೂ.ಮೌಲ್ಯದ ಹೆಚ್.ಪಿ.ಲ್ಯಾಪ್‍ಟಾಪ್, ಡಾ.ಸುಸ್ಮಾ ಬಿ.ಎಂ.ಅವರ 55 ಸಾವಿರ ರೂ.ಮೌಲ್ಯದ ಹೆಚ್.ಪಿ.ವಿಕ್ಟಸ್ ಲ್ಯಾಪ್‍ಟಾಪ್, ಡಾ.ವೈಷ್ಣವಿ ಚಿಂಚೋಳಿ ಅವರ 40 ಸಾವಿರ ರೂ.ಮೌಲ್ಯದ ಲೇನೊವೋ ಐಡಿಯಾ ಪ್ಯಾಡ್, ಡಾ.ಝಿಬಾ ಅವರ ಡೆಲ್ ಕಂಪನಿಯ 8 ಸಾವಿರ ರೂ.ಮೌಲ್ಯದ ಲ್ಯಾಪ್‍ಟಾಪ್ ಚಾರ್ಜರ್ ಸೇರಿದಂತೆ 1,40,800 ರೂ.ಮೌಲ್ಯದ 3 ಲ್ಯಾಪ್‍ಟಾಪ್ ಮತ್ತು ಒಂದು ಚಾರ್ಜರ್ ಕಳವಾಗಿದೆ.
ವಿದ್ಯಾರ್ಥಿನಿಯರು ಮಹಾವಿದ್ಯಾಲಯದ ಪೆರಿಯೋಡೊಂಟಿಕ್ಸ್ ಪಿ.ಜಿ.ರೂಮಿನಲ್ಲಿ ಕುಳಿತು ಲ್ಯಾಪ್‍ಟಾಪ್‍ನಲ್ಲಿ ಕೆಲಸ ಮಾಡುತ್ತಿದ್ದರು. ಓಪಿಡಿ ಸಮಯವಾಗಿದ್ದರಿಂದ ಎಲ್ಲರು ಕೂಡಿ ಲ್ಯಾಪ್‍ಟಾಪ್‍ಗಳನ್ನು ಅಲ್ಲಿಯೇ ಬಿಟ್ಟು ಓಪಿಡಿಗೆ ಹೋಗಿದ್ದು, ಈ ವೇಳೆ ಕಳ್ಳ ಲ್ಯಾಪ್‍ಟಾಪ್ ಮತ್ತು ಚಾರ್ಜರ್ ಕಳವು ಮಾಡಿಕೊಂಡು ಹೋಗಿದ್ದು, ಕಳ್ಳ ಲ್ಯಾಪ್‍ಟಾಪ್ ಮತ್ತು ಚಾರ್ಜರ್ ಕಳವು ಮಾಡಿರುವ ದೃಶ್ಯ ಕಾಲೇಜಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಡಾ.ಸ್ನೇಹಾ ಕಲ್ಯಾಣಕರ್ ಅವರು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.