ಸ್ವಾಮೀಜಿಗೆ ಜೀವಬೆದರಿಕೆ: ಪ್ರಿಯಾಂಕ್ ಖರ್ಗೆಗೆ ದೂರು
ಕಲಬುರಗಿ:ಜೂ.19:ಬಸವತತ್ವ ಪಾಲನೆ ಮಾಡುತ್ತಿರುವ ಆಳಂದ ತಾಲ್ಲೂಕಿನ ಖಜೂರಿ ಗ್ರಾಮದ ಮುರುಘೇಂದ್ರ ಕೋರಣೆಶ್ವರ ಶ್ರೀಗಳಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಜೀವ ಬೆದರಿಕೆ ಹಾಕುತ್ತಿದ್ದು ಅವರಿಗೆ ಸೂಕ್ತ ಪೆÇಲೀಸ್ ಭದ್ರತೆ ನೀಡಬೇಕು ಎಂದು ಡಾ.ಬಿ.ಆರ್ ಅಂಬೇಡ್ಕರ್ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿಜಯಕುಮಾರ ಎಂ.ಕೆ ಆಗ್ರಹಿಸಿದ್ದಾರೆ.
ಸ್ವಾಮೀಜಿಗಳು ಜೀವಪರ ಜಿಂತನೆಯುಳ್ಳವರಾಗಿದ್ದು ಬಸವ ತತ್ವದ ಮೇಲೆ ನಡೆಯುತ್ತಿದ್ದಾರೆ. ಬಸವಣ್ಣನವರ ವಚನಗಳು ಮನೆ ಮನೆಗೆ ಮುಟ್ಟಿಸುವ ಕೆಲಸವನ್ನು ಆ ಭಾಗದಲ್ಲಿ ಮಾಡುತ್ತಿದ್ದಾರೆ. ಆದರೆ ಕೆಲವು ಗೊಡ್ಡು ಸಂಪ್ರದಾಯವಾದಿಗಳು ಬಸವೇಶ್ವರರ ಚಿಂತನೆಗಳು ಹರಡದಂತೆ ಒತ್ತಡ ಹಾಕುತ್ತಿದ್ದಾರೆ. ಅಲ್ಲದೆ ಮಠಕ್ಕೆ ಹೋಗಿ ಸ್ವಾಮೀಜಿಯ ಮೇಲೆ ಹಲ್ಲೆ ಮಾಡುವುದುˌ ಮೊಬೈಲ್ ಕಿತ್ತೂಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದಾರೆ. ಅಲ್ಲದೆ ಮಠಕ್ಕೆ ಹೋಗಿ ಸ್ವಾಮೀಜಿಗಳಿಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಕೂಡಲೇ ಸ್ವಾಮೀಜಿಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಮನವಿ ಸಲ್ಲಿಸಿದೆ.