ಕುಂಚಾವರಂ ಆರೋಗ್ಯ ಕೇಂದ್ರದ ಮಹಿಳಾ ಸಿಬ್ಬಂದಿ ಆತ್ಮಹತ್ಯೆ
ಚಿಂಚೋಳಿ, ಜೂ.19- ತಾಲೂಕಿನ ಕುಂಚಾವರಂ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ವಸತಿ ಗೃಹದ ಮಹಿಳಾ ನೌಕರರೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಮುದಾಯ ಕೇಂದ್ರದ ಡಿ-ಗ್ರೂಪ್ ಮಹಿಳಾ ಸಿಬ್ಬಂದಿ ಮಾಲಾಶ್ರೀ (29) ಅವರು, ಎಂದಿನಂತೆ ಮಂಗಳವಾರ ತಮ್ಮ ಕೆಲಸ ಮೂಗಿಸಿಕೊಂಡು ವಸತಿ ಗೃಹಕ್ಕೆ ತೆರಳಿದ್ದರು. ಆತ್ಮಹತ್ಯೆಯ ಮುನ್ನ ಮರಣ ಪತ್ರ ಬರೆದಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಆಳಂದ ತಾಲೂಕಿನ ಮಾದನ ಹಿಪ್ಪರಗಿ ಗ್ರಾಮದ ನಿವಾಸಿಯಾಗಿರುವ ಮಾಲಾಶ್ರೀ ಅವರು, ಯಾತಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಿಷಯ ತಿಳಿದು ಬಂದಿಲ್ಲ ಅಲ್ಲದೇ ಅವರು, ಬರೆದಿರುವ ಮರಣ ಪತ್ರದಲ್ಲಿ ಏನಿದೆ ಎಂಬುವುದು ಗೊತ್ತಾಗಿಲ್ಲ.
ವಿಷಯ ತಿಳಿಯುತ್ತಲೇ ಕುಂಚಾವರಂ ಠಾಣೆಯ ಇನ್ಸ್ಪೆಕ್ಟರ್ ಪ್ರಭಾಕರ ಪಾಟೀಲ, ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಬಾಲಾಜಿ ಪಾಟೀಲ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಮೃತಳಪೋಷಕರು ನೀಡಿದ ದೂರಿನನ್ವಯ ಕುಂಚಾವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.