ಬಾವಿಯಲ್ಲಿ ಈಜಲು ಹೋಗಿದ್ದ ಯುವಕ ನೀರುಪಾಲು
ಕಲಬುರಗಿ,ಜೂ.19-ಸ್ನೇಹಿತರ ಜೊತೆ ಬಾವಿಯಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ಮುಳುಗಿ ನೀರು ಪಾಲಾಗಿರುವ ಘಟನೆ ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ತಾವರಗೇರಾ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ತಾವರಗೇರಾ ಗ್ರಾಮದ ಅಬ್ದುಲ್ ಖಾದರ್ ತಂದೆ ಅಬ್ದುಲ್ ಹಮೀದ್ (25) ಎಂಬ ಯುವಕನೇ ನೀರು ಪಾಲಾಗಿದ್ದು, ನಿನ್ನೆ ಸಂಜೆಯಿಂದ ಅಗ್ನಿ ಶಾಮಕದಳ ಸಿಬ್ಬಂದಿ ಯುವಕನ ಪತ್ತೆಗೆ ಬಾವಿಯಲ್ಲಿ ಶೋಧಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಐಟಿಐ ಓದುತ್ತಿದ್ದ ಅಬ್ದುಲ್ ಖಾದರ್ ನಿನ್ನೆ ಸಂಜೆ ಸ್ನೇಹಿತರೊಂದಿಗೆ ಊರಾಚೆಯ ಬಾವಿಗೆ ತೆರಳಿದ್ದ. ಈಜಾಡುವಾಗ ಬಾವಿಯಲ್ಲಿ ಮುಳುಗಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.