ಕಾರು ಡಿಕ್ಕಿ: ಗಾಯಗೊಂಡಿದ್ದ ಮಹಿಳೆ ಸಾವು
ಕಲಬುರಗಿ,ಜೂ.19-ಕಲಬರಗಿ-ಆಳಂದ ರಸ್ತೆಯ ಅಪ್ಪಾಜಿ ಧಾಬಾ ಹತ್ತಿರ ಕಾರು ಡಿಕ್ಕಿ ಹೊಡೆದು ಗಾಯಗೊಂಡಿದ್ದ 35 ರಿಂದ 40 ವರ್ಷ ವಯಸ್ಸಿನ ಅಪರಿಚಿತ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಕಾರು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತ ಮಹಿಳೆ 5.1 ಅಡಿ ಎತ್ತರ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ ಹೊಂದಿದ್ದು, ಹಸಿರು ಬಣ್ಣದ ಡಿಸೈನ್ ಟಾಪ್, ಬಿಳಿ ಬಣ್ಣದ ಪೈಜಾಮ್, ಕಪ್ಪು ಬುರ್ಕಾ ಧರಿಸಿದ್ದಾಳೆ. ಈ ಬಗ್ಗೆ ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.