ಹೆದ್ದಾರಿ ಪಕ್ಕದಲ್ಲಿಯೇ ವಿದ್ಯುತ್ ಕಂಬ, ಮನೆ ನಿರ್ಮಾಣ: ಭಾರೀ ವಾಹನ ಸಂಚಾರಕ್ಕೆ ಅಡಚಣೆ
ವಾಡಿ,ಜೂ.19-ವಾಡಿ ಬಲರಾಮ ಚೌಕದಿಂದ ಕಮರವಾಡಿ ಮಾರ್ಗವಾಗಿ ಆಂಧ್ರ ಪ್ರದೇಶಕ್ಕೆ ಹೋಗುವ ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ವಿದ್ಯುತ್ ಕಂಬಗಳನ್ನು ಅಳವಡಿಸಿರುವುದರಿಂದ ಮತ್ತು ಅತಿ ಕ್ರಮಣ ಮಾಡಿಕೊಂಡು ಮನೆಗಳ ನಿರ್ಮಾಣ ಮಾಡಿರುವುದರಿಂದ ಭಾರೀ ವಾಹನಗಳ ಓಡಾಡಕ್ಕೆ ತೊಂದರೆಯುಂಟಾಗುತ್ತಿದೆ.
ರಸ್ತೆ ಬಿಟ್ಟು ವಿದ್ಯುತ್ ಕಂಬಗಳನ್ನು ಅಳವಡಿಸಬೇಕು ಮತ್ತು ಹೆದ್ದಾರಿ ಅತಿ ಕ್ರಮಣ ಮಾಡಿಕೊಂಡು ಮನೆಗಳನ್ನು ನಿರ್ಮಿಸಿಕೊಳ್ಳುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಅಂದಾಗ ಮಾತ್ರ ಈ ಮಾರ್ಗದಲ್ಲಿ ಭಾರೀ ವಾಹನಗಳ ಓಡಾಟಕ್ಕೆ ಅನುಕೂಲವಾಗುತ್ತದೆ.
ರಸ್ತೆ ಬದಿಗೇ ವಿದ್ಯುತ್ ಕಂಬಗಳಿರುವುದರಿಂದ ಮತ್ತು ರಸ್ತೆ ಅಕ್ಕಪಕ್ಕದಲ್ಲಿಯೇ ಮನೆಗಳನ್ನು ನಿರ್ಮಾಣ ಮಾಡಿರುವುದರಿಂದ ಅನಾಹುತ ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳುವುದರ ಮೂಲಕ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಬೇಕಿದೆ.
ಈ ನಿಟ್ಟಿನಲ್ಲಿ ಅಧಿಕಾಗಳು ಕ್ರಮ ಕೈಗೊಳ್ಳುವೆ ಎಂಬುವುದನ್ನು ಕಾದು ನೋಡಬೇಕಾಗಿದೆ.