ನೀರಿನ ಗುಂಡಿಗೆ ಬಿದ್ದು ಮೂವರ ದಾರುಣ ಸಾವು
ವಿಜಯಪುರ,ಜೂ.19:ಜಮೀನಿನಲ್ಲಿದ್ದ ನೀರು ತುಂಬಿದ್ದ ಆಳವಾದ ಗುಂಡಿಗೆ ಬಿದ್ದು ಮೂವರ ಮೃತಪಟ್ಟ ಘಟನೆ
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ನಡೆದಿದೆ.
ಹಡಲಗೇರಿ ಗ್ರಾಮದ ಚಿನ್ನಪ್ಪ ತಳವಾರ ಎಂಬುವವರಿಗೆ ಸೇರಿದ ಜಮೀನಿನಲ್ಲಿದ್ದ ಆಳವಾದ ಗುಂಡಿಯಲ್ಲಿ ಬಿದ್ದು
ನೀಲಮ್ಮ ಖಿಲಾರಹಟ್ಟಿ (16) ಮುತ್ತಪ್ಪ ಖಿಲಾರಹಟ್ಟಿ ( 24 ) ಹಾಗೂ ಶಿವು ಯಾಳವಾರ ( 25 ) ಮೃತಪಟ್ಟಿದ್ದಾರೆ.
ಎಮ್ಮೆ ಮೇಯಿಸಲು ಜಮೀನಿಗೆ ಹೋಗಿದ್ದ ಯುವತಿ ನೀಲಮ್ಮ
ಎಮ್ಮೆಗೆ ನೀರು ಕುಡಿಸಲು ನೀರು ತುಂಬಿದ್ದ ಗುಂಡಿ ಬಳಿ ಹೋದಾಗ ಕಾಲು ಜಾರಿ ಗುಂಡಿಯಲ್ಲಿ ಬಿದ್ದಿದ್ದಾಳೆ. ಆಕೆಯನ್ನು ರಕ್ಷಣೆ ಮಾಡಲು ಬಂದ ಸಂಬಂಧಿಕ ಮುತ್ತಪ್ಪ ಖಿಲಾರಹಟ್ಟಿ
ಯುವತಿ ಹಾಗೂ ಆಕೆಯ ಸಂಬಂಧಿ ನೀರಿನಲ್ಲಿ ಹೊರ ಬರಲಾರದೇ ಪರದಾಟ ನಡೆಸಿದ್ದಾರೆ.
ಇದನ್ನು ಕಂಡು ಅವರನ್ನು ಕಾಪಾಡಲು ಬಂದ ಶಿವು ಯಾಳವಾರ ಸಹ ನೀರಿನಿಂದ ಹೊರ ಬರಲಾಗದೆ ಮೃತಪಟ್ಟಿದ್ದಾನೆ.
ಸುದ್ದಿ ತಿಳಿದ ತಕ್ಷಣ ಮುದ್ದೇಬಿಹಾಳ ಪೆÇಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ
ಮೂವರ ಶವಗಳನ್ನು ಹೊರ ತೆಗೆದಿದ್ದಾರೆ.
ಮುದ್ದೇಬಿಹಾಳ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.