ವಿದ್ಯುತ್ ತಗುಲಿ ಇಬ್ಬರ ಸಾವು
ವಿಜಯಪುರ,ಜೂ.19: ಮೀನು ಹಿಡಿಯಲು ಹೋಗಿ ವಿದ್ಯುತ್ ತಗುಲಿ ಬಾಲಕ ಸೇರಿ ಇಬ್ಬರು ಸಾವಿಗೀಡಾದ ಘಟನೆ ವಿಜಯಪುರ ತಾಲೂಕಿನ ದ್ಯಾಬೇರಿ ಗ್ರಾಮದ ಬಳಿ ನಡೆದಿದೆ.
ಮದಭಾವಿಯ ರೋಹಿತ ಚವ್ಹಾಣ (8), ವಿಜಯ ಚವ್ಹಾಣ (18) ಮೃತಪಟ್ಟ ದುರ್ದೈವಿಗಳು.
ರೋಹಿತ ಚವ್ಹಾಣ, ವಿಜಯ ಚವ್ಹಾಣ ಮೀನು ಹಿಡಿಯಲು ದ್ಯಾಬೇರಿ ಕೆರೆಗೆ ಹೋದ ವೇಳೆ ತುಂಡಾದ ವಿದ್ಯುತ್ ವೈಯರ್ ತಗುಲಿ ಅಸುನೀಗಿದ್ದಾರೆ.
ಈ ಸಂಬಂಧ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.