ವಿಕಲಚೇತನ ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳ ವಿತರಣೆ
ವಿಜಯಪುರ,ಜೂ.19: ನಗರದ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಮಂಗಳವಾರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, 2023-24ನೇ ಸಾಲಿನ ವಿಜಯಪುರ ನಗರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ವಿಕಲಚೇತನ ಫಲಾನುಭವಿಗಳಿಗೆ 23 ತ್ರಿಚಕ್ರ ವಾಹನಗಳು, ಟಾಕಿಂಗ್ ಲ್ಯಾಪಟಾಪ್, ಹೊಲಿಗೆ ಯಂತ್ರ ಹಾಗೂ ಬ್ರೈಲ್ ಕಿಟ್‍ಗಳನ್ನು ವಿತರಿಸಿದರು.
ಮಹಾನಗರ ಪಾಲಿಕೆ ಸದಸ್ಯರಾದ ಎಂ.ಎಸ್.ಕರಡಿ, ಶಿವರುದ್ರ ಬಾಗಲಕೋಟ, ರಾಹುಲ್ ಜಾಧವ, ಪ್ರೇಮಾನಂದ ಬಿರಾದಾರ, ಮಳುಗೌಡ ಪಾಟೀಲ, ರಾಜಶೇಖರ ಕುರಿಯವರ, ಕಿರಣ ಪಾಟೀಲ, ವಿಠ್ಠಲ ಹೊಸಪೇಟ, ಜವಾಹಾರ ಗೊಸಾವಿ, ಮಲ್ಲಿಕಾರ್ಜುನ ಗಡಗಿ, ಮುಖಂಡರಾದ ಗೂಳಪ್ಪ ಶೆಟಗಾರ, ರಾಜೇಶ ದೇವಗಿರಿ, ಬಸವರಾಜ ಕೋರಿ, ಸಚಿನ ಕುಮಸಿ, ಸುರೇಶ ಕಣಮುಚನಾಳ, ರಾಜು ಕಾಳೆ, ಲಕ್ಷ್ಮೀ ದಾಶ್ಯಾಳ, ಲಕ್ಷ್ಮೀ ಕನ್ನೊಳ್ಳಿ, ಮಲ್ಲಮ್ಮ ಜೋಗೂರ, ಗಿರೀಶ ಪಾಟೀಲ, ವಿಜು ಗಚ್ಚಿನಮಠ, ವಿಠ್ಠಲ ನಡುವಿನಕೇರಿ, ಸದಾನಂದ ಗುನ್ನಾಪುರ, ಲಕ್ಕಪ್ಪ ಮಾಲಗಾರ, ಹನಮಂತ ಪಟ್ಟೆದ, ದೇವಪ್ಪ ಶಿವಗೊಂಡ, ದಾದಾಸಾಹೇಬ ಬಾಗಾಯತ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಎಸ್.ಸಿ ಮೋರ್ಚಾ ಅಧ್ಯಕ್ಷ ಪ್ರಕಾಶ ಚವ್ಹಾಣ, ರೈತ ಮೋರ್ಚಾದ ರಾಚು ಬಿರಾದಾರ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ರಾಜಶೇಖರ ದೈವಾಡಗಿ ಮತ್ತಿತರರು ಇದ್ದರು.