ಶೀಘ್ರ ಚಿಮ್ಮಲಗಿ ಏತ ನೀರಾವರಿ ಯೋಜನೆ ಭೂಸ್ವಾಧೀನದ ಪರಿಹಾರ ಧನ ನೀಡದಿದ್ದರೆ ಯುಕೆಪಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ: ರೈತ ಸಂಘ ಎಚ್ಚರಿಕೆ
ವಿಜಯಪುರ:ಜೂ.19: ಜಿಲ್ಲೆಯಲ್ಲಿ ನಡೆಯುತ್ತಿರುವ ಚಿಮ್ಮಲಗಿ ಏತ ನೀರಾವರಿ ಯೋಜನೆಯಿಂದ ಭೂಸ್ವಾಧೀನ ಪಡಿಸಿಕೊಂಡಿರುವ ಜಮೀನಿಗೆ ಪರಿಹಾರದ ಹಣ ಹಾಗೂ ಕೋರ್ಟ್ ಆದೇಶವಾದ ಹೆಚ್ಚುವರಿ ಪರಿಹಾರದ ಹಣ ಕೂಡಲೇ ನೀಡುವಂತೆ ಬಾಗಲಕೋಟೆಯಲ್ಲಿ ಇರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಮಹಾ ವ್ಯವಸ್ಥಾಪಕ ರಮೇಶ ಕಳಸದ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮನವಿ ಸಲ್ಲಿಸಲಾಯಿತು.
ಇಲ್ಲಿಯವರೆಗೆ ಪರಿಹಾರ ನೀಡದೇ ನ್ಯಾಯಂಗ ನಿಂದನೇ ಮಾಡುವುದಲ್ಲದೇ, ರೈತರಿಗೂ ಮೋಸ ಮಾಡುತ್ತಿರುವ ನೀರಾವರಿ ಇಲಾಖೆಯವರು ಕೂಡಲೇ ಹಾನಿಗೀಡಾದ ಎಲ್ಲ ರೈತರಿಗೂ ಪರಿಹಾರ ನೀಡಬೇಕು ಎಂದು ಜಿಲ್ಲಾಧ್ಯಕ್ಷÀ ಸಂಗಮೆಶ ಸಗರ ಅವರು ಮನವಿ ಸಲ್ಲಿಸಿ ಮಾತನಾಡಿದರು.
ವಿಜಯಪುರ ಜಿಲ್ಲೆಯಲ್ಲಿ ಚಿಮ್ಮಲಗಿ ಏತ ನೀರಾವರಿ ಯೋಜನೆ ಕಳೆದ 12 ವರ್ಷಗಳಿಂದ ನಡೆಯುತ್ತಿದ್ದು, ರೈತರ ಜಮೀನುಗಳಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳುವ ಮುಂಚೆಯೇ ರೈತರಿಗೆ ಭೂಸ್ವಾಧೀನದ ನೋಟಿಸ್‍ಗಳನ್ನು ನೀಡಿ ಪರಿಹಾರ ನೀಡಿದ ನಂತರ ಕಾಮಗಾರಿ ಪ್ರಾರಂಭಿಸಬೇಕು ಎನ್ನುವ ನಿಯಮಾವಳಿಗಳಿದ್ದರೂ, ಅವುಗಳನ್ನು ಗಾಳಿಗೆ ತೂರಿ ಈಗ ರೈತರು ಕಚೇರಿ ಹಾಗೂ ಕೋಟ್ರ್
ಗೆ ಅಲೆದಾಡುವಂತೆ ಮಾಡಿದೆ ಎಂದು ದೂರಿದರು.
ಕಾಮಗಾರಿ ಮುಗಿಸಲು ಇರುವ ಕಾಲಮಿತಿ ಮುಗಿದರೂ, ಇಲ್ಲಿಯವರೆಗೆ ಕಾಮಗಾರಿ ಮುಗಿದಿಲ್ಲ, ಕಳಪೆ ಕಾಮಗಾರಿ ಆಗದಂತೆ ನೋಡಿಕೊಳ್ಳಬೇಕು ಎಂದೂ ಒತ್ತಾಯಿಸಿದರು.
ಈ ಕೂಡಲೇ ಚಿಮ್ಮಲಗಿ ಏತ ನೀರಾವರಿ ಯೋಜನೆಯಿಂದ ಹಾನಿಗೀಡಾದ ಎಲ್ಲ ರೈತರಿಗೂ 15 ದಿನಗಳ ಒಳಗೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಕೃಷ್ಣ ಮೇಲ್ದಂಡೆ ಯೋಜನೆ ಕಚೇರಿಗೆ ಬೀಗ ಜಡಿದು ಉಪವಾಸ ಸತ್ಯಾಗ್ರಹ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ರಮೇಶ ಕಳಸದ ಅವರು ಮನವಿ ಸ್ವೀಕರಿಸಿ ಮಾತನಾಡಿ, ಸರಕಾರಕ್ಕೆ ಈಗಾಗಗಲೇ ಪರಿಹಾರದ ಅನುದಾನ ಕುರಿತು ಪ್ರಸ್ಥಾವನೆ ಕಳಿಸಲಾಗಿದೆ. ಮೇಲಿನಿಂದ ಅನುದಾನ ಬಂದ ತಕ್ಷಣ ಎಲ್ಲಾ ಪಲಾನುಭವಿ ರೈತರಿಗೆ ಪರಿಹಾರದ ಹಣ ನೀಡಲಾಗುವುದು ಎಂದು ಹೇಳಿದರು.
ಈ ವೇಳೆ ತಾಳಿಕೋಟೆ ತಾಲೂಕಾ ಅಧ್ಯಕ್ಷÀ ಶ್ರೀಶೈಲ ವಾಲಿಕಾರ, ಕಲಕೇರಿ ಹೋಬಳಿ ಅಧ್ಯಕ್ಷÀ ಮಹಿಬೂಬ ಬಾಷಾ ಮನಗೂಳಿ ಸೇರಿದಂತೆ ಇತರರು ಇದ್ದರು.