ಹಲ್ಯಾಳ / ಕರಿ ಮಸೂತಿ ಏತ ನೀರಾವರಿ ಕಾಲುವೆಗಳಿಗೆ ನೀರು ಹರಿಸುವ ಹಂಗಾಮಿಗೆ ಶಾಸಕ ಲಕ್ಷ್ಮಣ ಸವದಿ ಚಾಲನೆ
ಅಥಣಿ :ಜೂ.19: ಪ್ರತಿಯೊಬ್ಬ ರೈತರು ನೀರಿನ ಪ್ರತಿಯೊಂದು ಹನಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕಾಲುವೆಯ ಕೊನೆಯಲ್ಲಿರುವ ರೈತರಿಗೆ ನೀರು ತಲುಪಿಸುವ ಜವಾಬ್ದಾರಿ ನಮ್ಮದಾಗಿರುತ್ತದೆ ಆದ್ದರಿಂದ ನೀರು ವ್ಯರ್ಥ ಪೆÇೀಲು ಮಾಡಬೇಡಿ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ರೈತರಿಗೆ ಕರೆ ನೀಡಿದರು.
ಅವರು ತಾಲೂಕಿನ ಹಲ್ಯಾಳ ಗ್ರಾಮದ ಕೃಷ್ಣಾ ನದಿ ಹತ್ತಿರದಲ್ಲಿರುವ ಕರ್ನಾಟಕ ನೀರಾವರಿ ನಿಗಮ, ಜಲ ಸಂಪನ್ಮೂಲ ಇಲಾಖೆ ಹಲ್ಯಾಳ ಏತ ನೀರಾವರಿ ಯೋಜನೆಯ ಜಾಕವೆಲ್, ಪಂಪ ಹೌಸ್ ಮುಖಾಂತರ ಕರಿ ಮಸೂತಿ ಯಾತ ನೀರಾವರಿ ಯೋಜನೆಯ ಕಾಲುವೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಳೆದ ವರ್ಷದ ಹಂಗಾಮಿನಲ್ಲಿ ನದಿಯಲ್ಲಿ ನೀರು ಕಡಿಮೆ ಇರುವ ಕಾರಣ ಜುಲೈ ತಿಂಗಳಿನಲ್ಲಿ ನೀರು ಹರಿಸಿತ್ತು. ಆದರೆ ಈ ವರ್ಷದಲ್ಲಿ ದೇವರ ಕೃಪೆಯಿಂದ ಕೃಷ್ಣಾ ನದಿಗೆ ನೀರು ಬೇಗ ಬಂದಿರುವುದರಿಂದ ರೈತರ ಅನಕೂಲಕ್ಕಾಗಿ ಒಂದು ತಿಂಗಳ ಮುಂಚಿತವಾಗಿ ನೀರು ಹರಿಸಲಾಗುತ್ತಿದೆ. ಆದ್ದರಿಂದ ಕಾಲುವೆಯ ಮುಖಾಂತರ ನೀರನ್ನು ಉಪಯೋಗಿಸಿಕೊಳ್ಳುವ ರೈತರು ಹೆಚ್ಚು ನೀರು ಪೆÇೀಲಾಗದಂತೆ ನೋಡಿಕೊಂಡು ಕಾಲುವೆಗೆ ಹೊಂದಿರುವ ಕೊನೆಯ ಗ್ರಾಮದ ರೈತರಿಗೆ ನೀರು ತಲುಪುವಂತೆ ನೋಡಿಕೊಳ್ಳಬೇಕು ಎಂದು ರೈತರಲ್ಲಿ ಮನವಿ ಮಾಡಿದರು.
ಅಗಸ್ಟ್ ತಿಂಗಳಲ್ಲಿ ಝಂಜರವಾಡ ಗ್ರಾಮದಲ್ಲಿ ಇರುವ ಪಂಪಹೌಸದಿಂದ ನೀರು ಹರಿಸಿ ಸುಮಾರು 9 ಕರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡುವುದಾಗಿ ಹೇಳಿದರು.
ಸಾನಿಧ್ಯ ವಹಿಸಿದ್ದ ಕೌಲಗುಡ್ಡದ ಅಮರೇಶ್ವರ ಮಹಾರಾಜರು ಮಾತನಾಡಿ ಒಣ ಬೇಸಾಯದ ಭೂಮಿ ಹೊಂದಿರುವ ರೈತರು ಮಳೆ ಮೇಲೆ ಅವಲಂಬಿತರಾಗಿದ್ದರು. ಈಗ ಈ ಕಾಲುವೆ ಮುಖಾಂತರ ನೀರು ಹರಿಸುತ್ತಿರುವುದರಿಂದ ಆ ಭಾಗದ ರೈತರಿಗೆ ಬಹಳಷ್ಟು ಅನಕೂಲವಾಗಿದೆ ಎಂದು ಹೇಳಿದರು.
ಹೊನವಾಡದ ಬಾಬುರಾವ್ ಮಹಾರಾಜರು ಮಾತನಾಡಿದರು.
ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತರ ನಾಗರಾಜ. ಕೆ ರವಿ, ಕಾರ್ಯನಿರ್ವಾಹಕ ಅಭಿಯಂತರ ಪ್ರವೀಣ ಹುಣಸಿಕಟ್ಟಿ, ಮುಖಂಡರಾದ ಗಜಾನನ ಮಂಗಸೂಳಿ, ಶಿವು ಗುಡ್ಡಾಪುರ. ಸದಾಶಿವ ಬುಟಾಳಿ, ಸುರೇಶ ಮಾಯಣ್ಣವರ. ರಾಮನಗೌಡ ಪಾಟೀಲ. ಶಿವರುದ್ರ ಗೂಳಪ್ಪನ್ನವರ, ಸಿದ್ದಪ್ಪ
ಕೃಷ್ಣೆಯ ಆಶೀರ್ವಾದ ನಮ್ಮ ರೈತರ ಮೇಲೆ ಯಾವಾಗಲೂ ಇರುತ್ತದೆ. ಬರುವ ಎರಡು ವರ್ಷಗಳ ಒಳಗಾಗಿ ಕೊಟ್ಟಲಗಿಯ ಅಮ್ಮಾಜೇಶ್ವರಿ ಯಾತ ನೀರಾವರಿ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಿ ಈ ಭಾಗದ ರೈತರ ಜಮೀನುಗಳಿಗೆ ಪೈಪ್ ಲೈನ ಮುಖಾಂತರ ನೀರಾವರಿ ಸೌಲಭ್ಯ ಒದಗಿಸಲಾಗುವುದು ನೀರು ಅಮೂಲ್ಯವಾದುದು ಪ್ರತಿಯೊಬ್ಬರು ಹಿತಮಿತವಾಗಿ ಬಳಸಿ.