ಎನ್.ಎಸ್.ಎಸ್. ಶಿಬಿರಾರ್ಥಿಗಳಿಂದ ಬಸ್ ನಿಲ್ದಾಣ ಹಾಗೂ ಆಸ್ಪತ್ರೆಯಲ್ಲಿ ಸ್ವಚ್ಚತಾ ಶ್ರಮದಾನ
ಚಿಟಗುಪ್ಪಾ :ಜೂ.19: ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಶಿಬಿರಾರ್ಥಿಗಳಿಂದ ಚಿಟಗುಪ್ಪಾ ಬಸ್ ನಿಲ್ದಾಣ ಹಾಗೂ ಸಮುದಾಯ ಆರೋಗ್ಯ ಕೆಂದ್ರದಲ್ಲಿ ಸ್ವಚ್ಚತಾ ಶ್ರಮದಾನವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
ಬಸ್ ನಿಲ್ದಾಣದಲ್ಲಿ ಕಸಗುಡಿಸಿ, ನೀರಿನಿಂದ ಪ್ರ್ರಯಾಣಿಕರ ನಿರೀಕ್ಷಣಾ ಪ್ರದೇಶವನ್ನು ಸ್ವಚ್ಚಗೊಳಿಸಿದರು. ಪರಿಸರ ಮಾಲಿನ್ಯ ತಡೆಗಟ್ಟಲು ಮತ್ತು ಆರೋಗ್ಯದ ವಾತವರಣ ರೂಪಿಸಲು ಪ್ರತಿಯೊಬ್ಬರು ಸ್ವಚ್ಚತೆ ಕಾಪಾಡಬೇಕೆಂದು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು. ಸಮುದಾಯ ಆರೋಗ್ಯ ಕೆಂದ್ರದ ಆವರಣದಲ್ಲಿ ರೋಗಿಗಳು ಬಿಸಾಡಿದ ತ್ಯಾಜ್ಯ ವಸ್ತುಗಳು, ಆಸ್ಪತ್ರೆಯ ತ್ಯಾಜ್ಯ ವಸ್ತುಗಳು, ಹುಲ್ಲು-ಪೊದೆಗಳು ಸೇರಿದಂತೆ ಸಂಪೂರ್ಣ ಆಸ್ಪತ್ರೆಯನ್ನು ಸ್ವಚ್ಚತೆಗೊಳಿಸಿದರು. ಒಳರೋಗಿಗಳ ವಾರ್ಡಗಳ ಸುತ್ತ-ಮುತ್ತ ಬೆಳೆದ ಗಿಡ-ಪೊದೆಗಳನ್ನು ಹಾಗೂ ಆಸ್ಪತ್ರೆಯ ಮೇಲ್ಚಾವಣಿಯನ್ನು ಸಹ ಸ್ವಚ್ಚಗೊಳಿಸಲಾಯಿತು. ವಿದ್ಯಾರ್ಥಿ-ವಿದ್ಯಾರ್ಥಿನಿಯರ ಶ್ರಮದಾನ ಕಂಡು ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಸಮುದಾಯ ಆರೋಗ್ಯ ಕೆಂದ್ರದ ವೈದ್ಯಾಧಿಕಾರಿ ಡಾ. ವಿಜಯಕುಮಾರ ಹಿರ್‍ಸ್ಕÀರ್, ಶಿವರಾಜ ಅವರು ವಿದ್ಯಾಥಿಗಳಿಗೆ ಶ್ರಮದಾನದ ಸಂಧರ್ಭದಲ್ಲಿ ಮುನ್ನೆಚ್ಚರಿಕೆ ಗ್ಲೌಸ್, ಮಾಸ್ಕಗಳನ್ನು ವಿತರಿಸಿದರು. ಎನ್.ಎಸ್.ಎಸ್. ಅಧಿಕಾರಿ ಡಾ. ವೀರಶೆಟ್ಟಿ ಮೈಲೂರಕರ್ ಅವರ ನೇತೃತ್ವದಲ್ಲಿ 100 ಶಿಬಿರಾರ್ಥಿಗಳು ಸ್ವಚ್ಚತಾ ಶ್ರಮದಾನದಲ್ಲಿ ಭಾಗವಹಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಸುರೇಂದರ್ ಸಿಂಗ್, ಹಿರಿಯ ಪ್ರಾಧ್ಯಾಪಕರಾದÀ ಡಾ. ಶಿವಕುಮಾರ ಬಿರಾದರ, ಶಾಂತಕುಮಾರ ಪಾಟೀಲ, ರಮೇಶ ಬಿರಾದರ ಅತಿಥಿ ಉಪನ್ಯಾಸಕರಾದ ಶಂಕ್ರಪ್ಪಾ, ಅನಿಲಕುಮಾರ ಸಿಂಧೆ, ಶಿವಕುಮಾರ ಹೂಗಾರ, ಡಾ. ಭಾಗ್ಯಶ್ರೀ, ಹಣಮಂತಪ್ಪಾ, ಬಾಲಾಜಿ, ಚಂದ್ರಕಾಂತ. ಅಮರ, ಸೇರಿದಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. .