ವಾಹನಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಕರವೇ ಮನವಿ
ಕೊಲ್ದಾರ:ಜೂ.19: ಪಟ್ಟಣದ ಒಳಗಡೆ ಬರುವ ಎಲ್ಲಾ ಸಾರಿಗೆ ವಾಹನಗಳಿಗೆ ಸುಗುಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಘಟಕದಿಂದ ತಹಶೀಲ್ದಾರ್ ಎಸ್.ಎಸ್ ನಾಯಕಲಮಠ ಹಾಗೂ ಪ.ಪಂ ಮುಖ್ಯಾಧಿಕಾರಿ ಉಮೇಶ್ ಚಲವಾದಿ ಅವರಿಗೆ ಮನವಿ ಸಲ್ಲಿಸಿದರು
ರಾಷ್ಟ್ರೀಯ ಹೆದ್ದಾರಿ 218ರ ಮಾರ್ಗವಾಗಿ ಕೊಲ್ದಾರ ಪಟ್ಟಣದ ಒಳಗಡೆ ಬರುವ ಎಲ್ಲಾ ಸಾರಿಗೆ ಬಸ್ಸುಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಈಗಾಗಲೇ ಸಾರಿಗೆ ಇಲಾಖೆ ನಮೂನೆ 4 ರಲ್ಲಿ ನಿರ್ದೇಶನದಂತೆ ಹಾಗೂ ಉಲ್ಲೇಖ 2ರಲ್ಲಿ ತಿಳಿಸಿರುವಂತೆ ಕಡ್ಡಾಯವಾಗಿ ಸಾರಿಗೆ ಬಸ್ಸುಗಳು ಕೊಲ್ದಾರ ಪಟ್ಟಣದ ಮೂಲಕ ಕಾರ್ಯಚರಣೆ ಮಾಡಲು ಆದೇಶಿಸಲಾಗಿದೆ. ಆದ್ದರಿಂದ ಪಟ್ಟಣದ ವಿವಿದಡೆ ರಸ್ತೆ ಬದಿಯ ವ್ಯಾಪಾರದಿಂದ ಸುಗಮ ಸಂಚಾರಕ್ಕೆ ಕುತ್ತು ತಂದಿದೆ. ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಬಸವೇಶ್ವರ ವೃತ್ತ, ಗಾಂಧಿವೃತ್ತ, ರಾಣಿಚೆನ್ನಮ್ಮ ವೃತ್ತ, ಅಗಸಿ ಹತ್ತಿರ ಮತ್ತು ಹಲವು ಮುಖ್ಯ ರಸ್ತೆಗಳಲ್ಲಿ ಎರಡು ಬದಿಯ ಪಾದಚಾರಿ ರಸ್ತೆ (ಪುಟ್ಟಪಾತ) ಅತಿಕ್ರಮಣವಾಗಿ ಅದರ ಮೇಲೆ ವ್ಯಾಪಾರ ನಡೆಸುತ್ತಿದ್ದು ಹಾಗೂ ಪಟ್ಟಣದ ಪ್ರತಿ ಬುಧವಾರ ನಡೆಯುವ ಸಂತೆ ದಿನ ರಸ್ತೆ ಮೇಲೆ ವ್ಯಾಪಾರ ನಡೆಯುತ್ತಿದೆ. ಸಾರಿಗೆ ಬಸ್ಸುಗಳ ಸಂಚಾರಕ್ಕೆ ಇದರಿಂದ ತೊಂದರೆಯಾಗುತ್ತಿದೆ. ಪಟ್ಟಣದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು,
ಈ ಸಂದರ್ಭದಲ್ಲಿ ತಾಲೂಕು ಉಸ್ತುವಾರಿ ರವಿ ಗೊಳಸಂಗಿ ( ಬಳೂತಿ )ಕರವೇ ತಾಲೂಕಾ ಅಧ್ಯಕ್ಷರು ಮಹಾಂತೇಶ್ ಗಿಡ್ಡಪ್ಪಗೋಳ ಪ.ಪಂ ಸದಸ್ಯ ಸಿ ಎಸ್ ಗಿಡ್ಡಪ್ಪಗೋಳ,ಬಸು ಗಡ್ಡಿ ರಾವತ ಬರಗಿ ಸಂತೋಷ್ ಹಡ್ರೋಳಿ ಮಲ್ಲು ಉಗ್ರಾಣ ಮಾಂತೇಶ ಬುರ್ಲಿ ರಮೇಶ್ ಮಾದರ್ ಸಹಿತ ಇದ್ದರು,