ಸೂರಿ- ಸಾರಂಗ ಎಂಬ ಪ್ರಶಸ್ತಿ ಪಂ. ನರಹರಿ ಆಚಾರ್ಯ ಜೋಶಿ ಮುಡಿಗೆ
ವಿಜಯಪುರ,ಜೂ.19 :ಭಂಡಾರಕೇರಿ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರು ತಮ್ಮ 70 ನೇ ವರ್ಷದ ವಧರ್ಂತಿ ನಿಮಿತ್ತ 70 ಜನ ವಿದ್ವಾಂಸರಿಂದ ವಿಶೇಷ ಪ್ರವಚನ ಮಾಡಿಸಿ ವಿದ್ವಾಂಸರಿಗೆ ಸೂರಿ – ಸಾರಂಗ ಎಂಬ ಪ್ರಶಸ್ತಿಯನ್ನು ಅನುಗ್ರಹಿಸಿದರು.
ಮುತ್ತಗಿಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಅರ್ಚಕ ಪಂಡಿತ ನರಹರಿ ಆಚಾರ್ಯ ಶ್ರೀನಿವಾಸಾಚಾರ್ಯ ಜೋಶಿ ಅವರು ವಿಶೇಷ ಪ್ರವಚನದಲ್ಲಿ ಭಾಗವಹಿಸಿ ಭಂಡಾರಕೇರಿ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರು ನೀಡಿದ ಸೂರಿ – ಸಾರಂಗ ಎಂಬ ಪ್ರಶಸ್ತಿಯನ್ನು ಪಡೆದುಕೊಂಡರು.