ಅಧಿಕಾರಿಗಳ ನಿರ್ಲಕ್ಷಕ್ಕೆ ಗ್ರಾಮಸ್ಥರ ಆಕ್ರೋಶ :ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜಿಗೆ ಕ್ರಮ
ತಾಳಿಕೋಟೆ:ಜೂ.19: ತಾಲೂಕಿನ ನಾವದಗಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಕಳೆದ ಒಂದು ವಾರದಿಂದ ಜನರು ಅಸ್ವಸ್ಥಗೊಳ್ಳುವದರೊಂದಿಗೆ ವಾಂತಿ ಬೇದಿಗೆ ಕಾರಣವಾಗಿದ್ದು ಗ್ರಾಮದ ಸ್ಥಳಕ್ಕೆ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವಂತ್ರಾಯಗೌಡ ಬಿರಾದಾರ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿವರ್ಗದವರು ಮಂಗಳವಾರರಂದು ಬೆಟ್ಟಿ ನೀಡಿ ಕುಡಿಯುವ ನೀರಿನ ಮೂಲಗಳನ್ನು ಪರಿಶೀಲನೆ ನಡೆಸಿದರು.
ತಾಲೂಕಿನಲ್ಲಿ ಕಲುಷಿತ ನೀರು ಸೇವನೆಯಿಂದ ಅತೀ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿ ಚಿಕೀತ್ಸೆ ಪಡೆದವರಲ್ಲಿ ನಾವದಗಿ ಗ್ರಾಮದವರಾಗಿದ್ದರಿಂದ ಅಧಿಕಾರಿಗಳ ತಂಡ ಬೋರವ್ಹೇಲ್ ನೀರು, ಭಾವಿ ನೀರು, ಮತ್ತು ಜೆಜೆಎಂ ಪೈಪಲೈನ್ ಮೂಲಕ ಸರಬರಾಜು ಮಾಡಲಾಗುತ್ತಿರುವ ನೀರನ್ನು ಪರಿಶೀಲನೆ ನಡೆಸಿದರಲ್ಲದೇ ಬೋರವ್ಹೇಲ್ ನೀರು ಮತ್ತು ಭಾವಿ ನೀರಿನಲ್ಲಿ ಪ್ಲೋರೈಡ್ ಹೆಚ್ಚಿಗೆ ಕಂಡುಬಂದಿದ್ದರಿಂದ ಸದರಿ ನೀರುಗಳನ್ನು ಗ್ರಾಮಸ್ಥರು ಯಾರೂ ಬಳೆಸಬಾರದೆಂದು ಮನವಿ ಮಾಡಿದರು.
ನಾವದಗಿ ಗ್ರಾಮದ ಬಡಾವಣೆಗಳಲ್ಲಿ ಸಂಚರಿಸಿದ ಅಧಿಕಾರಿಗಳ ತಂಡ ಚರಂಡಿ, ಮತ್ತು ಕುಡಿಯುವ ನೀರಿನ ಮತ್ತು ಬಳೆಸುವ ನೀರಿನ ಕುರಿತು ಪರಿಶೀಲನೆ ನಡೆಸಿದ ಅವರು ಸ್ಥಳದಲ್ಲಿ ಉಪಸ್ಥಿತಿರಿದ್ದ ಅಭಿವೃದ್ದಿ ಅಧಿಕಾರಿ ಕಿರಣಗಿ ಅವರು ಚರಂಡಿ ಮೇಲಾಥಿನ್ ಪೌಡರ್ ಸಿಂಪಡಿಸಲು ಮತ್ತು ಓರೆಡ್ ಟ್ಯಾಂಕರ್‍ನಲ್ಲಿ ಬ್ಲೀಚಿಂಗ್ ಪೌಡರ್ ಹಾಕಲು ಸೂಚಿಸಿದರಲ್ಲದೇ ಗ್ರಾಮದಲ್ಲಿರುವ ಕುಡಿಯುವ ನೀರಿನ ಮೂಲಗಳಲ್ಲಿ ಸಂಗ್ರಹಿಸಿದ ನೀರಿನ ತಪಾಸಣೆ ಆಗಿ ಬರುವವರೆಗೂ ಜಲಮೂಲಗಳೆಲ್ಲವನ್ನು ತಾತ್ಕಾಲಿಕ ಸ್ಥಗಿತಗೊಳಿಸಲು ಸೂಚಿಸಿದರು. ಉಪಸ್ಥಿತ ಆರ್‍ಡಬ್ಲುಎಸ್ ಅಧಿಕಾರಿ ಹಿರೇಗೌಡರ ಅವರಿಗೆ ಕೂಡಲೇ 2 ದಿನಗಳ ಒಳಗಾಗಿ ಶುದ್ದ ಕುಡಿಯುವ ನೀರಿನ ಘಟಕವನ್ನು ಪ್ರಾರಂಬಿಸಲು ಸೂಚಿಸಿದರು.
ಆರೋಗ್ಯ ಇಲಾಖೆಯ ತಾಲೂಕಾ ಆಡಳಿತ ವೈಧ್ಯಾಧಿಕಾರಿಗಳಾದ ಡಾ.ಸತೀಶ ತಿವಾರಿ ಅವರು ವಾಂತಿ ಬೇದಿ ಕುಡಿಯುವ ನೀರಿನಿಂದಲೇ ಬಂದಿದ್ದು ಎಂಬುದು ಕಂಡು ಬಂದಿದೆ ಹೀಗಾಗಿ ತಾಲೂಕಾ ಪಂಚಾಯತ್ ಇಓ ಅಧಿಕಾರಿಗಳ ತಂಡ ಕ್ರಮವಹಿಸಲು ಮುಂದಾಗಿದ್ದಾರೆ ವಾಂತಿ ಬೇದಿ ಉಲ್ಬಣ್ಣಗೊಳ್ಳದ ಹಾಗೆ ತಡೆಗಟ್ಟಲು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಗ್ರಾಮದಲ್ಲಿಯೇ ವಾಸ್ಥವ್ಯ ಹೂಡಲಿದ್ದಾರೆಂದರು.
ಈ ಸಮಯದಲ್ಲಿ ತಾಲೂಕಾ ಆಡಳಿತ ವೈಧ್ಯಾಧಿಕಾರಿಗಳಾದ ಡಾ.ಸತೀಶ ತಿವಾರಿ, ಡಾ.ಸುನೀಲ ಹಿರೇಗೌಡರ, ಅಭಿವೃದ್ದಿ ಅಧಿಕಾರಿ ಅನೀಲ ಕಿರಣಗಿ, ಆರೋಗ್ಯ ಇಲಾಖೆಯ ಅಧಿಕಾರಿ ಕವಿತಾ ದೊಡಮನಿ, ಗ್ರಾಂಪಂ ಕಾರ್ಯದರ್ಶಿ ಹಣಮಗೌಡ ಚೌದ್ರಿ, ದೊರೆಗೋಳ, ಆರ್‍ಡಬ್ಲುಎಸ್ ಅಧಿಕಾರಿ ಹಿರೇಗೌಡರ, ಸಿಬ್ಬಂದಿಗಳಾದ ರಾಘವೇಂದ್ರ ಟಿ.ಎನ್., ಸತೀಶ ಕುಲಕರ್ಣಿ, ಆಶಾ ಕಾರ್ಯಕರ್ತರಾದ ಮಂಜುಳಾ ಹೇಳವರ, ರೇಣುಕಾ ಬಡಿಗೇರ ಅವರು ಉಪಸ್ಥಿತರಿದ್ದರು.
ನಾವದಗಿ ಗ್ರಾಮಸ್ಥರ ಆಕ್ರೋಶ
ನಾವದಗಿ ಗ್ರಾಮದಲ್ಲಿ ಕಳೆದ 5-6 ವರ್ಷಗಳ ಹಿಂದೆಯೇ ಶುದ್ದ ಕುಡಿಯುವ ಘಟಕವನ್ನು ಆರ್‍ಡಬ್ಲುಎಸ್ ಅಧಿಕಾರಿಗಳು ಪ್ರಾರಂಬಿಸಿದ್ದಾರೆ ಕೇವಲ ಒಂದು ವಾರವಷ್ಟೇ ಚ್ಯಾಲು ಸ್ಥಿತಿಯಲ್ಲಿದ್ದ ಘಟಕ ಬಂದು ಬಿದ್ದಿದೆ ಅದನ್ನು ಪುನಃ ಪ್ರಾರಂಬಿಸಲು ಅವರಿಗೆ ಸಾಕಷ್ಟು ಭಾರಿ ಮನವಿ ಮಾಡಿದರೂ ಪ್ರಯೋಜನೆಗೆ ಬಂದಿಲ್ಲಾ ಜೆಜೆಎಂ ಕಾಮಗಾರಿ ನಿರ್ಮಾಣ ಸಮಯದಲ್ಲಿಯೂ ಪೈಪಲೈನ ಕಾರ್ಯ ಸರಿಯಾಗಿ ನಡೆಯುತ್ತಿಲ್ಲಾವೆಂದು ದೂರಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲಾ ಇದರ ಪರಿಣಾಮ ಸದ್ಯ ಕಲುಷಿತ ನೀರು ಸೇವನೆಯಿಂದ ಜನರಿಗೆ ವಾಂತಿ ಬೇದಿ ಕಾಣಿಸಿಕೊಳ್ಳುತ್ತಿದೆ ಸರಕಾರದ ಕುಡಿಯುವ ನೀರಿನ ಯೋಜನೆಯನ್ನು ಸರಿಯಾಗಿ ಮಾಡಿಸುವಲ್ಲಿ ವಿಫಲವಾದ ಆರ್‍ಡಬ್ಲುಎಸ್ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಕ್ರಮ