ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ ಮಾಡಲು ಆಗ್ರಹ
ಜೇವರ್ಗಿ :ಜೂ.19:ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪಠ್ಯ ಪುಸ್ತಕಗಳು ವಿತರಣೆ ಮಾಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕ ಸಂಚಾಲಕ ಸಿದ್ರಾಮಕಟ್ಟಿ ನೇತೃತ್ವದಲ್ಲಿ ಮನವಿ ಪತ್ರ ಕೊಡಲಾಯಿತು.
ನಂತರ ಮಾತನಾಡಿದ ಸಿದ್ದರಾಮಕಟ್ಟಿ ತಾಲೂಕಿನಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಐದರಿಂದ ಹತ್ತನೇ ವರೆಗೆ ಪಠ್ಯಪುಸ್ತಕ ತಕ್ಷಣ ವಿತರಿಸಬೇಕೆಂದು ಹೇಳಿದರು ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ವಿದ್ಯಾರ್ಥಿ ವಿದ್ಯಾರ್ಥಿನಿಯರ ನೇತೃತ್ವದಲ್ಲಿ ತಮ್ಮ ಕಚೇರಿ ಎದುರ ಬೃಹತ್ ಪ್ರತಿಭಟನೆ ಮಾಡಲಾಗುವುದೆಂದು ತಿಳಿಸಿದರು ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ತಾಲೂಕು ಸಂಘಟನಾ ಸಂಚಾಲಕ ಶಿವು ಕುಮಾರ್ ಹೆಗಡೆ ಹಾಗೂ ಸಂಗಣ್ಣ ಕಟ್ಟಿಸಂಗಾವಿ ಮತ್ತು ಜಟ್ಟಪ್ಪ ಮಂದ್ರಾಡ ಸೇರಿದಂತೆ ಅನೇಕರಿದ್ದರು