ಡಿಜೆ ಗೆ ಅನುಮತಿ ನೀಡದಂತೆ ದರ್ಗಾ ಕಮಿಟಿ ಮನವಿ
ಜೇವರ್ಗಿ:ಜೂ.19: ಶ್ರೀ ಹಜ್ರತ್ ಖೋಂದಮೀರುದ್ದೀನ್ ಜುನೆದಿ ದರ್ಗಾದ ಜಾತ್ರೆ ಇದೆ ತಿಂಗಳ 21 ಹಾಗೂ 22 ರಂದು ನಡೆಯುತ್ತಿದ್ದು. ಈ ಒಂದು ಗಂಧ ಜರಗುವ ಸಂದರ್ಭದಲ್ಲಿ ಡಿಜೆ ಧ್ವನಿವರ್ಧಕಕ್ಕೆ ಅನುಮತಿ ನೀಡಬಾರದು ಎಂದು ದರ್ಗಾ ಕಮಿಟಿ ಪೆÇಲೀಸ್ ಅಧೀಕಾರಿಗಳಿಗೆ ಮನವಿ ಮಾಡಿದರು.
ಪಟ್ಟಣದ ಬುಗ್ಗಿ ಬಡಾವಣೆಯಲ್ಲಿನ ಶ್ರೀ ಹಜ್ರತ್ ಖೋಂದಮೀರುದ್ದೀನ್ ಜುನೆದಿ ದರ್ಗಾದ ಜಾತ್ರೆಯು ಸರ್ವ ಧರ್ಮದವರು ಸೇರಿಕೊಂಡು ಸಡಗÀರದಿಂದ ಪ್ರತಿವರ್ಷವು ಆಚರಿಸುತ್ತಾರೆ. ಅದರಂತೆ ಈ ವರ್ಷವು ಕೂಡ ಅಷ್ಟೆ ಸಂಭ್ರಮದಿಂದ ಆಚರಿಸಲಾಗುತ್ತಿದ್ದು 21 ಮತ್ತು 22 ರ ರಾತ್ರಿ ಗಂಧ ಮೆರವಣಿಗೆ ನಡೆಸಲಾಗುವುದು. ಈ ಮೆರವಣಿಗೆಯಲ್ಲಿ ಡಿಜೆ ಬಳಸದಂತೆ ಶ್ರೀ ಹಜ್ರತ್ ಖೋಂದಮೀರುದ್ದೀನ್ ಜುನೆದಿ ದರ್ಗಾದ ಕಮೀಟಿಯ ಸರ್ವ ಸದಸ್ಯರು ತಿರ್ಮಾನಿಸಿದ್ದಾರೆ. ಆದ್ದರಿಂದ 21 ಮತ್ತು 22 ರ ರಾತ್ರಿ ಸಂದಲ್ ಮೆರವಣಿಗೆಗೆ ಯಾರಾದರು ಡಿಜೆ ಅನುಮತಿ ಕೋರಿದರೆ ನೀಡಬಾರದು ಎಂದು ಸಮಾಜದ ಹಿರಿಯರು ಹಾಗೂ ಕಮೀಟಿಯ ಸದಸ್ಯರು ಪೋಲಿಸ್ ಇಲಾಖೆಗೆ ಮನವಿ ಸಲ್ಲಿಸಿದರು.
ಪ್ರಯುಕ್ತ ದಿನಾಂಕ 21ರಿಂದ 22 ರವರಿಗೆ ರಾತ್ರಿ ಗಂಧ ನೆರವೇರುವುದು. ಈ ಒಂದು ಗಂಧ ಜರಗುವ ಸಂದರ್ಭದಲ್ಲಿ ಡಿಜೆ ಧ್ವನಿವರ್ಧಕಕ್ಕೆ ಅನುಮತಿ ನೀಡಬಾರದು ಎಂದು ದರ್ಗಾ ಕಮಿಟಿ ಪೆÇಲೀಸ್ ಠಾಣೆ ಅಧಿಕಾರಿಗಳಿಗೆ ಮನವಿ ಮಾಡಿತ್ತು.ಬಡಾವಣೆಯ ಪ್ರತಿಯೊಂದು ಗಲ್ಲಿಗಳಿಂದ ಗಂಧ ಉತ್ಸವ ಜರಗುವುದು ಅದಕ್ಕೆ ಡಿ ಜೆ ಧ್ವನಿವರ್ಧಕಕ್ಕೆ ಅನುಮತಿ ನೀಡಬಾರದು. ಒಂದು ವೇಳೆ ಅನುಮತಿ ಪಡೆದಿದ್ದಲ್ಲಿ ಅದನ್ನು ತಡೆಯಬೇಕು. ಡಿಜೆ ದನಿವರ್ಧಕ ಬಳಸುವದರಿಂದ ಸಾರ್ವಜನಿಕರಿಗೆ ತೊಂದರೆ ಆಗುವ ಕಾರಣಕ್ಕೆ ಪೊಲೀಸ್ ಇಲಾಖೆಗೆ ಕಮೀಟಿಯ ಸದಸ್ಯರು ಮನವು ಮಾಡಿದರು.
ಗಲಿಫ್ ಮೆರವಣಿಗೆಯ ತಂಡದವರು ಡಿಜೆ ಬಳಸದೆ ಕಮೀಟಿಯ ನಿರ್ಣಯಕ್ಕೆ ಬದ್ದರಾಗಬೇಕು ಹಾಗೂ ದರ್ಗಾ ಜಾತ್ರೆಯ ಯಶಸ್ವಿಯಲ್ಲಿ ಕೈಜೋಡಿಸಬೇಕೆಂದು ಕಮೀಟಿ ವಿನಂತಿಸುತ್ತದೆ.