ಆಶ್ರಯ ಕಾಲೋನಿಯಲ್ಲಿರುವ ಜಾಗ ಗುರುತಿಸಿಕೊಡಲು ಮನವಿ
ದೇವರಹಿಪ್ಪರಗಿ :ಜೂ.19:ಬಸವನಬಾಗೇವಾಡಿ ತಾಲೂಕಿನ ಡೋಣೂರ ಗ್ರಾಮದ ಆಶ್ರಯ ಕಾಲೊನಿಯಲ್ಲಿ ಮುಸ್ಲಿಂ ಪ್ರಾರ್ಥನಾ ಮಂದಿರ, ದರ್ಗಾ, ಉರ್ದು ಶಾಲೆ, ಈದ್ಗಾ ಹಾಗೂ ಖಬರಸ್ಥಾನಕ್ಕೆ ಜಾಗೆ ಗುರುತಿಸಿ ಕೊಡಲು ಟಿಪ್ಪು ಕ್ರಾಂತಿ ಸೇನೆ ಹಾಗೂ ಡೋಣೂರ ಗ್ರಾಮದ ಅಂಜುಮನ್ ಕಮೀಟಿ ವತಿಯಿಂದ ತಾಲೂಕ ದಂಡಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಟಿಪ್ಪು ಕ್ರಾಂತಿ ಸೇನೆಯ ಉತ್ತರ ಕರ್ನಾಟಕ ಅಧ್ಯಕ್ಷ ಖಾಜಂಬರ ನದಾಫ ಮಾತನಾಡಿ ಆಶ್ರಯ ಕಾಲೋನಿಯಲ್ಲಿ ಸರಕಾರದಿಂದ ನಮ್ಮ ಸಮಾಜಕ್ಕಾಗಿ ಜಾಗ ಕಾಯ್ದೆರಿಸಿದ್ದು. ಡೋಣೂರ ಗ್ರಾಮದ ಆಶ್ರಯ ಕಾಲೊನಿಯಲ್ಲಿ ಮುಸ್ಲಿಂ ಸಮುದಾಯದ ಪ್ರಾರ್ಥನಾ ಮಂದಿರ, ದರ್ಗಾ, ಉರ್ದು ಶಾಲೆ, ಈದ್ಗಾ ಹಾಗೂ ಖಬರಸ್ಥಾನಕ್ಕೆ ಜಾಗೆ ಗುರುತಿಸಿ ಕೊಡಬೇಕು ಎಂದು ತಾಲೂಕ ದಂಡಾಧಿಕಾರಿಗಳಲ್ಲಿ ಮನವಿ ಮಾಡಿದರು.
ಗ್ರಾಮದ ಆಶ್ರಯ ಕಾಲನಿಯಲ್ಲಿ ಬೇರೆ ಬೇರೆ ಸಮುದಾಯದವರು ಸ್ವತ: ತಾವೇ ಜಾಗೆಗಳನ್ನು ಗುರುತಿಸಿಕೊಂಡು ಕಬ್ಜಾ ಮಾಡಿಕೊಂಡಿದ್ದಾರೆ ಹಾಗಾಗಿ ನಮ್ಮ ಸಮುದಾಯ ಸ್ವತ: ಜಾಗ ಗುರುತಿಸಲು ಹೋದಲ್ಲಿ ಸಮಸ್ಯೆಯಾಗುವ ಸಂಭವವಿರುವುದರಿಂದ ತಾಲೂಕ ದಂಡಾಧಿಕಾರಿಗಳು ಮುಸ್ಲಿಂ ಸಮಾಜಕ್ಕೆ ಜಾಗ ಗುರುತಿಸಿ ಕೊಡುವ ಮೂಲಕ ಸಮಾಜಕ್ಕೆ ಅನಕೂಲ ಕಲ್ಪಿಸಬೇಕು ಎಂದು ಅವರು ಈ ಸಂದರ್ಭಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಅಮಿನಸಾಬ ಹುಡೆದಗಡ್ಡಿ, ನಾಸೀರ್ ತಾಂಬೋಳಿ, ಅಬಿದ ತಾಂಬೋಳಿ, ಬಂದೇನವಜ್ ಸುತಾರ, ಮಹೇಬೂಬ ಸುತಾರ, ರಹೇಮಾನ ಮುಲ್ಲಾ, ಹಾಶಿಂಸಾಬ ಸುತಾರ, ಸುಲೇಮಾನ್ ಗೌಂಡಿ, ಅಬ್ಬುಸಾಬ ಮುಲ್ಲಾ, ಇಸ್ಮಾಯಿಲ್ ಮುಲ್ಲಾ ಹಾಗೂ ಇನ್ನಿತರರು ಇದ್ದರು.