ಯೋಗ ದಿನಾಚರಣೆ: ಆಯುಷ ಸಚಿವರ ಭೇಟಿಯಾದ ಅನಂತ ಬಿರಾದಾರ
ಬೀದರ್: ಜೂ.19:ಸೂರ್ಯ ಫೌಂಡೇಶನ್ ರಾಷ್ಟ್ರೀಯ ಉಪಾಧ್ಯಕ್ಷ ಅನಂತ್ ಬಿರಾದಾರ ಅವರು ಭಾರತ ಸರ್ಕಾರದ ಆಯುಷ್ ಇಲಾಖೆಯ ಸಚಿವರಾದ ಪ್ರತಾಪರಾವ ಜಾಧವ್ ಅವರನ್ನು ದೆಹಲಿಯ ಅವರ ಕಛೆರಿಯಲ್ಲಿ ಭೇಟಿಯಾಗಿ ಸೂರ್ಯ ಫೌಂಡೇಶನ್ ಮತ್ತು ಅಂತರಾಷ್ಟ್ರೀಯ ಪ್ರಾಕೃತಿಕ ಚಿಕಿತ್ಸಾ ಸಂಸ್ಥೆ ವತಿಯಿಂದ ದೇಶಾದ್ಯಂತ ಆಯೋಜಿಸಿರುವ 10 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಿದ್ಧತೆಗಾಗಿ ಕೈಗೊಂಡಿರುವ ಪ್ರಮುಖ ಮಾಹಿತಿಗಳನ್ನು ನೀಡಿದರು.
ಈ ವರ್ಷ ಸೂರ್ಯ ಫೌಂಡೇಶನ್ ವತಿಯಿಂದ ದೇಶದ 25 ರಾಜ್ಯಗಳ 450 ಜಿಲ್ಲೆಗಳಲ್ಲಿ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ 30 ಲಕ್ಷಕ್ಕೂ ಹೆಚ್ಚು ಜನರು ಯೋಗದಲ್ಲಿ ಭಾಗವಹಿಸಲಿದ್ದಾರೆ.
ಇತ್ತಿಚಿಗೆ ಅನಂತ ಬಿರಾದಾರ ಅವರ ನೇತೃತ್ವದಲ್ಲಿ ಬೀದರ ಜಿಲ್ಲೆಯ ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಸಂಯುಕ್ತಾಶ್ರಯದಲ್ಲಿ ಯೋಗ ಮಹೋತ್ಸವ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಸೂರ್ಯ ಫೌಂಡೆಶನ್ ಸಂಸ್ಥಾಪಕರಾದ ಪದ್ಮಶ್ರೀ ಜಯಪ್ರಕಾಶ ಆಗ್ರವಾಲ ಅವರ ಮಾರ್ಗದರ್ಶನದಲ್ಲಿ ಫೌಂಡೇಶನ್ ರಾಷ್ಟ್ರೀಯ ಉಪಾಧ್ಯಕ್ಷರಾದ
ಅನಂತ್ ಬಿರಾದಾರ ನೇತೃತ್ವದಲ್ಲಿ ದೇಶದ ಬೋಧಗಯಾ, ಪುಣೆ, ಸೂರತ್, ಮತ್ತು ಪಾಟ್ನಾದಲ್ಲಿ ಯೋಗ ಮಹೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲು ಆಯುಷ್ ಇಲಾಖೆಯ ಸಚಿವರಾದ ಪ್ರತಾಪರಾವ ಜಾಧವ ಅವರು ಸಹಕಾರ ನೀಡಿದ್ದು ಈ ಪ್ರಯುಕ್ತ ಕೇಂದ್ರ ಸಚಿವರಿಗೆ ಅನಂತ ಬಿರಾದಾರ ಅವರು ಕೃತಜ್ಞತೆಗಳನ್ನು ಸಲ್ಲಿಸಿದರು.
ಜೂನ್ 21 ರಂದು ದೆಹಲಿಯ ಇಂಡಿಯಾ ಗೇಟ್ ಮತ್ತು ಪಶ್ಚಿಮ ದೆಹಲಿಯಲ್ಲಿಯು ಕೂಡ ಯೋಗ ದಿನಾಚರಣೆಯ ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಕಳೆದ 25 ವರ್ಷಗಳಿಂದ ರಾಷ್ಟ್ರೀಯ ಮಟ್ಟದಲ್ಲಿ ಯೋಗ ಪ್ರಾಕೃತಿಕ ಚಿಕಿತ್ಸಾ ಪದ್ಧತಿಯ ಸವಾರ್ಂಗೀಣ ಅಭಿವೃದ್ಧಿಗಾಗಿ ನೀಡಿದ ಕೊಡುಗೆಯನ್ನು ಸ್ಮರಿಸಿ ಅನಂತ ಬಿರಾದಾರ ಅವರನ್ನು ಆಯುಷ ಇಲಾಖೆಯು ಯೋಗ ದಿನಾಚರಣೆ 2024 ರ ನಿರ್ವಹಣಾ ಸಮಿತಿಯ ಸದಸ್ಯರನ್ನಾಗಿ ಕೂಡ ನೇಮಿಸಿದೆ ಎಂದು ಪ್ರಾಕೃತಿಕ ಚಿಕಿತ್ಸಾ ಸಂಸ್ಥೆಯ ರಾಜ್ಯ ಸಂಚಾಲಕರಾದ ಗುರುನಾಥ ರಾಜಗೀರಾ ತಿಳಿಸಿದ್ದಾರೆ.